ETV Bharat / bharat

ದಿನಗೂಲಿ ನೌಕರರ ಅಗತ್ಯತೆ ಪರಿಗಣಿಸಬೇಕಿತ್ತು: ಪಿಎಂ ವಿರುದ್ಧ ರಾಜಸ್ಥಾನ ಸಿಎಂ ಗರಂ - ದಿನಗೂಲಿ ನೌಕರರ ಅಗತ್ಯತೆ

ದೈನಂದಿನ ವೇತನ ಪಡೆಯುವವರ ಅಗತ್ಯತೆಗಳನ್ನು ಪರಿಗಣಿಸದೇ ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿಗೆ ತಂದಿದ್ದಕ್ಕಾಗಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರಧಾನಿ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು.

ಪಿಎಂ ವಿರುದ್ಧ ರಾಜಸ್ಥಾನ ಸಿಎಂ ಗರಂ
ಪಿಎಂ ವಿರುದ್ಧ ರಾಜಸ್ಥಾನ ಸಿಎಂ ಗರಂ
author img

By

Published : Apr 14, 2020, 2:33 PM IST

ಜೈಪುರ: ದಿನಗೂಲಿ ನೌಕರರ ಅಗತ್ಯತೆಗಳನ್ನು ಪರಿಗಣಿಸದೇ ಲಾಕ್​ಡೌನ್​ ಆದೇಶವನ್ನು ತಂದಿದ್ದಕ್ಕಾಗಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಲಾಕ್‌ಡೌನ್ ಘೋಷಿಸುವ ಮೊದಲು ಪ್ರಧಾನಿ, ವಲಸೆ ಕಾರ್ಮಿಕರಿಗೆ ಸ್ವಲ್ಪ ಸಮಯ ನಿಡಬೇಕಿತ್ತು ಎಂದಿದ್ದಾರೆ. ಈ ನಿರ್ಧಾರವು ಲಕ್ಷಾಂತರ ಬಡವರನ್ನು ಕಂಗೆಡಿಸಿದೆ, ಅನೇಕ ಹಸಿದಿರುವ ಮತ್ತು ನಿರುದ್ಯೋಗಿ ವಲಸೆ ಕಾರ್ಮಿಕರನ್ನು ನಗರಗಳಿಂದ ಪಲಾಯನ ಮಾಡಲು ಮತ್ತು ತಮ್ಮ ಹಳ್ಳಿಗಳಿಗೆ ನೂರಾರು ಕಿಲೋಮೀಟರ್ ನಡೆದು ಹೋಗುವಂತೆ ಮಾಡಲಾಗಿದೆ ಎಂದು ಹರಿಹಾಯ್ದರು.

ಸೋಂಕು ಹರಡುತ್ತಿರುವ ಹಿನ್ನೆಲೆ ಎಲ್ಲರೂ ಮನೆಯಲ್ಲಿದ್ದೇವೆ. ಆದರೆ, ಪಿಎಂ ನರೇಂದ್ರ ಮೋದಿಯವರು ದಿನಗೂಲಿ ಕಾರ್ಮಿಕರಿಗೆ ಸ್ವಲ್ಪ ಸಮಯ ನೀಡಬೇಕಿತ್ತು. ಇದರಿಂದ ಅವರು, ತಮ್ಮ ಕುಟುಂಬಗಳನ್ನು ಸೇರುತ್ತಿದ್ದರು ಎಂದಿದ್ದಾರೆ. ಕಾರ್ಮಿಕರು ದೇಶದ ಬೆನ್ನೆಲುಬು. ಲಾಕ್‌ಡೌನ್ ಮುಗಿದ ನಂತರ ಸಾರಿಗೆ ಸಹಾಯದ ವ್ಯವಸ್ಥೆ ಮಾಡುವ ಬಗ್ಗೆ ಪ್ರಧಾನಿ ಖಾತ್ರಿಪಡಿಸಿದರೆ, ಅದು ಅವರ ನೈತಿಕತೆಯನ್ನು ಹೆಚ್ಚಿಸುತ್ತದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.