ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ವೆಬ್ಸೈಟ್ಗೆ ಲಿಂಕ್ ಆಗಿರುವ ಟ್ವಿಟರ್ ಅಕೌಂಟ್ ಹ್ಯಾಕ್ ಆಗಿದೆ. ಕೋವಿಡ್-19 ಪರಿಹಾರ ನಿಧಿಗೆ ಬಿಟ್ ಕಾಯಿನ್ ರೂಪದಲ್ಲಿ ದೇಣಿಗೆ ನೀಡಿ ಎಂದು ಹ್ಯಾಕರ್ ಮನವಿ ಮಾಡಿದ್ದಾನೆ.
ಪ್ರಧಾನಿಯವರ ವೈಯಕ್ತಿಕ ವೆಬ್ಸೈಟ್ಗೆ ಲಿಂಕ್ ಆಗಿರುವ ಟ್ವಿಟರ್ ಅಕೌಂಟ್ನಲ್ಲಿ ಕ್ರಿಪ್ಟೊ ಕರೆನ್ಸಿಗೆ ಸಂಬಂಧಿಸಿದ ಟ್ವೀಟ್ಗಳನ್ನು ಹ್ಯಾಕರ್ಗಳು ಪೋಸ್ಟ್ ಮಾಡಿದ್ದಾರೆ. ಕೋವಿಡ್-19ಗೆ ಸಂಬಂಧಿಸಿದಂತೆ ರಚಿಸಲಾದ ಪ್ರಧಾನಮಂತ್ರಿಯವರ ಪರಿಹಾರ ನಿಧಿಗೆ ದೇಣಿಗೆ ನೀಡಿ ಎಂದು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಹ್ಯಾಕರ್ ಟ್ವಿಟರ್ ಅಕೌಂಟ್ನಲ್ಲಿ ಮೆಸೇಜ್ ಹಾಕಿದ್ದಾನೆ.
ಈ ಖಾತೆಯನ್ನು ಜಾನ್ ವಿಕ್ ಎಂಬಾತ ಹ್ಯಾಕ್ ಮಾಡಿದ್ದಾನೆ. ನಾವು ಪೇಟಿಮ್ ಮಾಲ್ ಹ್ಯಾಕ್ ಮಾಡಿಲ್ಲ ಎಂದು ಹ್ಯಾಕರ್ ಇನ್ನೊಂದು ಟ್ವೀಟ್ನಲ್ಲಿ ಬರೆದಿದ್ದಾನೆ. ಈಗ ಈ ಎಲ್ಲಾ ಟ್ವೀಟ್ಗಳನ್ನೂ ಡಿಲೀಟ್ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಪರ್ಸನಲ್ ವೆಬ್ಸೈಟ್ಗೆ ಲಿಂಕ್ ಆಗಿರುವ ಟ್ವಿಟರ್ ಅಕೌಂಟ್ @narendramodiಗೆ 61 ಮಿಲಿಯನ್ ಮಂದಿ ಫಾಲೋವರ್ಸ್ ಇದ್ದಾರೆ.