ETV Bharat / bharat

ಜಾಗತಿಕ ಹೂಡಿಕೆದಾರರೊಂದಿಗೆ ಪ್ರಧಾನಿ ಮೋದಿ ವಿಶೇಷ ಸಂವಾದ - VGIR 2020

ವರ್ಚುವಲ್ ಗ್ಲೋಬಲ್ ಇನ್ವೆಸ್ಟರ್ ರೌಂಡ್‌ಟೇಬಲ್​​​​ನಲ್ಲಿ (ವಿಜಿಐಆರ್) ಪ್ರಧಾನಿ ಮೋದಿ ಅವರು ಜಾಗತಿಕ ಹೂಡಿಕೆದಾರರೊಂದಿಗೆ 'ವಿಶೇಷ' ಸಂವಾದದ ಅಧ್ಯಕ್ಷತೆ ವಹಿಸಲಿದ್ದು, ಭಾರತದ ಸುಧಾರಣೆಗಳು ಮತ್ತು ಹೂಡಿಕೆದಾರರಿಗೆ ಇರುವ ಅವಕಾಶಗಳ ಬಗ್ಗೆ ಮಾತನಾಡಲಿದ್ದಾರೆ.

PM Modi to chair global investor meet today
ಪ್ರಧಾನಿ ಮೋದಿ
author img

By

Published : Nov 5, 2020, 1:58 PM IST

ನವದೆಹಲಿ: ದೇಶದ ಆರ್ಥಿಕತೆ ಉತ್ತೇಜಿಸಲು ಮತ್ತು ಹೂಡಿಕೆದಾರರನ್ನು ಆಕರ್ಷಿಸುವ ಸಲುವಾಗಿ ವರ್ಚ್ಯುಯಲ್​​​ ಗ್ಲೋಬಲ್ ಇನ್ವೆಸ್ಟರ್​​​​ ರೌಂಡ್​​​ಟೇಬಲ್​​​-2020​​ (ವಿಜಿಐಆರ್) ಇಂದು ಸಭೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ವದ ವಿವಿಧ ಭಾಗಗಳ 20 ಉನ್ನತ ಸಾಂಸ್ಥಿಕ ಹೂಡಿಕೆದಾರರು ಮುಖ್ಯಸ್ಥರು ಭಾಗವಹಿಸಲಿದ್ದಾರೆ.

ದೇಶದ ಆರ್ಥಿಕತೆ, ಹೂಡಿಕೆ ದೃಷ್ಟಿಕೋನ, ರಚನಾತ್ಮಕ ಸುಧಾರಣೆಗಳು ಮತ್ತು ದೇಶವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ದೃಷ್ಟಿಕೋನದಿಂದ ಸುತ್ತಮುತ್ತಲಿನ ಸಮಸ್ಯೆಗಳ ಚರ್ಚಿಸಲು ಕೇಂದ್ರ ಸರ್ಕಾರ ವಿಜಿಐಆರ್-2020 ಮೇಲೆ ಕೇಂದ್ರೀಕರಿಸಿದೆ.

ಸಾರ್ವಭೌಮ ಸಂಪತ್ತು ನಿಧಿಗಳು ಮತ್ತು ವಿಶ್ವದ ಪಿಂಚಣಿ ನಿಧಿಗಳು ಸೇರಿದಂತೆ ಎಲ್ಲ ಪ್ರಮುಖ ಜಾಗತಿಕ ಹೂಡಿಕೆದಾರರು ಭಾಗವಹಿಸಲಿದ್ದಾರೆ. ಅವರಿಗೆ (ಹೂಡಿಕೆದಾರರಿಗೆ) ಭಾರತದ ವಿವಿಧ ಹೂಡಿಕೆ ಅವಕಾಶಗಳು, ಭಾರತದ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಮತ್ತು ಅವರಿಗೆ ಯಾವ ಅವಕಾಶಗಳಿವೆ ಎಂಬುದರ ಕುರಿತು ಮಾಹಿತಿ ನೀಡಲಾಗುವುದು ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದರು

ಈ ನಿಧಿಗಳ ನಿರ್ವಹಣೆಯ ಅಡಿಯಲ್ಲಿರುವ ಆಸ್ತಿಗಳು 6 ಟ್ರಿಲಿಯನ್ ಡಾಲರ್‌ಗಿಂತ ಹೆಚ್ಚಿರುತ್ತದೆ. ಸಭೆಯಲ್ಲಿ ಭಾರತವನ್ನು ಉದ್ಯಮಿಗಳು, ಹಣಕಾಸು ಮಾರುಕಟ್ಟೆ ನಿಯಂತ್ರಕರು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪ್ರತಿನಿಧಿಸಲಿದ್ದಾರೆ.

ಯುಎಸ್, ಯುರೋಪ್, ಕೆನಡಾ, ದಕ್ಷಿಣ ಕೊರಿಯಾ, ಜಪಾನ್, ಮಧ್ಯಪ್ರಾಚ್ಯ, ಆಸ್ಟ್ರೇಲಿಯಾ ಮತ್ತು ಸಿಂಗಾಪುರ ಸೇರಿದಂತೆ ಪ್ರಮುಖ ಪ್ರದೇಶಗಳನ್ನು ಪ್ರತಿನಿಧಿಸುವ ಜಾಗತಿಕ ಸಾಂಸ್ಥಿಕ ಹೂಡಿಕೆದಾರರು ಭಾಗವಹಿಸಲಿದ್ದು, ಈ ಹೂಡಿಕೆದಾರರಲ್ಲಿ ಕೆಲವರು ಮೊದಲ ಬಾರಿಗೆ ಸರ್ಕಾರದೊಂದಿಗೆ ತೊಡಗಿಸಿಕೊಳ್ಳುತ್ತಿದ್ದಾರೆ.

ಇದಲ್ಲದೇ, ಭಾರತದ ಆರು ಪ್ರಮುಖ ಕೈಗಾರಿಕೋದ್ಯಮಿಗಳು - ದೀಪಕ್ ಪರೇಖ್ (ಎಚ್‌ಡಿಎಫ್‌ಸಿ), ದಿಲೀಪ್ ಸಾಂಘ್ವಿ (ಸನ್ ಫಾರ್ಮಾ), ಮುಖೇಶ್ ಅಂಬಾನಿ (ಆರ್‌ಐಎಲ್), ನಂದನ್​ ನಿಲೇಕಣಿ (ಇನ್ಫೋಸಿಸ್), ರತನ್ ಟಾಟಾ (ಟಾಟಾ ಗ್ರೂಪ್) ಮತ್ತು ಉದಯ್ ಕೊಟಕ್ (ಕೊಟಕ್ ಮಹೀಂದ್ರ ಬ್ಯಾಂಕ್) ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.