ETV Bharat / bharat

ರಾಷ್ಟ್ರೀಯ ಯುವ ಸಂಸತ್​ ಉತ್ಸವ-2021: ಜನವರಿ 12ರಂದು ನಮೋ ಭಾಷಣ - ರಾಷ್ಟ್ರೀಯ ಯುವ ಸಂಸತ್​ ಉತ್ಸವದಲ್ಲಿ ನಮೋ

ರಾಷ್ಟ್ರೀಯ ಯುವ ಸಂಸತ್ತಿನ ಉತ್ಸವ 2021 ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಧಾನಿ ನರೇಂದ್ರ ಮೋದಿ ಜನವರಿ 12ರಂದು ಭಾಷಣ ಮಾಡಲಿದ್ದಾರೆ.

PM Modi
PM Modi
author img

By

Published : Jan 9, 2021, 5:36 PM IST

ನವದೆಹಲಿ: ರಾಷ್ಟ್ರೀಯ ಯುವ ಸಂಸತ್​ ಉತ್ಸವ 2021 ಉದ್ಘಾಟಿಸಿ ಪ್ರಧಾನಿ ನರೇಂದ್ರ ಮೋದಿ ಜನವರಿ 12ರಂದು ಮಾತನಾಡಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಇಲಾಖೆ ಟ್ವೀಟ್​ ಮಾಡಿದೆ.

ಜನವರಿ 12ರಂದು ಬೆಳಗ್ಗೆ 10 ಗಂಟೆಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆಯಲ್ಲಿ ಭಾಗಿಯಾಗಲಿದ್ದು, ಕಾರ್ಯಕ್ರಮ ಉದ್ಘಾಟಿಸಿ ತದನಂತರ ಮಾತನಾಡಲಿದ್ದಾರೆ.

ಕೇಂದ್ರ ಶಿಕ್ಷಣ ಸಚಿವ ರಮೇಶ್​ ಪೋಕ್ರಿಯಾ ಅವರ ಟ್ವೀಟರ್​ ಖಾತೆ ಹಾಗೂ ಫೇಸ್​ಬುಕ್​ ಪೇಜ್​ನಲ್ಲಿ ಈ ಕಾರ್ಯಕ್ರಮ ಲೈವ್​ ಪ್ರಸಾರಗೊಳ್ಳಲಿದೆ ಎಂದು ತಿಳಿಸಿದೆ. ಇಂದು ಬೆಳಗ್ಗೆ ಪ್ರವಾಸಿ ಭಾರತೀಯ ದಿವಸ್​​ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದು, ಮೇಡ್​ ಇನ್​ ಇಂಡಿಯಾದ ಎರಡು ಕೋವಿಡ್​ ಲಸಿಕೆಗಳೊಂದಿಗೆ ಮಾನವೀಯತೆ ಉಳಿಸಲು ದೇಶ ಸಿದ್ಧವಾಗಿದೆ ಎಂದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.