ನವದೆಹಲಿ: ತೊಂದರೆಗಳನ್ನು ಎದುರಿಸುತ್ತಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‌ಎಂಇ) ಸಹಾಯ ಮಾಡಲು ಪ್ರಧಾನಿ ಮೋದಿ 'ಚಾಂಪಿಯನ್ಸ್' ಎಂಬ ಪೋರ್ಟಲ್ಗೆ ಚಾಲನೆ ನೀಡಿದ್ದಾರೆ.
ಈ ಚಾಂಪಿಯನ್ಸ್ ಪೋರ್ಟಲ್ ಸಣ್ಣ ಘಟಕಗಳ ಕುಂದು-ಕೊರತೆ ಪರಿಹರಿಸುವ, ಪ್ರೋತ್ಸಾಹಿಸುವ, ಬೆಂಬಲಿಸುವ, ಸಹಾಯ ಮಾಡುವ ಮೂಲಕ ಅವುಗಳ ಬೆಳವಣಿಗೆಗೆ ಸಹಾಯಕವಾಗಲಿದೆ ಎಂದು ಹೇಳಲಾಗಿದೆ.
-
Launched the portal https://t.co/NUU2vEvi9n. This is a one-stop place for Micro, Small&Medium Enterprise (MSME) sector. The focus areas are support and hand-holding, grievance redressal, harnessing entrepreneurial talent and discovering new business opportunities:PM Narendra Modi pic.twitter.com/esgYcugGaA
— ANI (@ANI) June 1, 2020 " class="align-text-top noRightClick twitterSection" data="
">Launched the portal https://t.co/NUU2vEvi9n. This is a one-stop place for Micro, Small&Medium Enterprise (MSME) sector. The focus areas are support and hand-holding, grievance redressal, harnessing entrepreneurial talent and discovering new business opportunities:PM Narendra Modi pic.twitter.com/esgYcugGaA
— ANI (@ANI) June 1, 2020Launched the portal https://t.co/NUU2vEvi9n. This is a one-stop place for Micro, Small&Medium Enterprise (MSME) sector. The focus areas are support and hand-holding, grievance redressal, harnessing entrepreneurial talent and discovering new business opportunities:PM Narendra Modi pic.twitter.com/esgYcugGaA
— ANI (@ANI) June 1, 2020
ಈ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ಪ್ರಸ್ತುತ ಕಷ್ಟದ ಪರಿಸ್ಥಿತಿಯಲ್ಲಿರುವ ಎಂಎಸ್‌ಎಂಇಗಳಿಗೆ ಸಹಾಯ ಮಾಡಲು ಮತ್ತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಾಂಪಿಯನ್‌ಗಳಾಗಲು ಸಹಾಯ ಮಾಡುವುದಕ್ಕಾಗಿ ಸ್ಥಾಪಿಸಲಾಗಿದೆ.
ಹಣಕಾಸು, ಕಚ್ಚಾ ವಸ್ತುಗಳು, ಕಾರ್ಮಿಕರು, ನಿಯಂತ್ರಕ ಅನುಮತಿಗಳು ಸೇರಿದಂತೆ ಎಂಎಸ್‌ಎಂಇಗಳ ಸಮಸ್ಯೆಗಳನ್ನು ಪರಿಹರಿಸಲು ಪೋರ್ಟಲ್ ಒಂದು ಕುಂದು-ಕೊರತೆ ನಿವಾರಣಾ ಕಾರ್ಯವಿಧಾನವನ್ನು ಒಳಗೊಂಡಿದೆ. ವೈದ್ಯಕೀಯ ಉಪಕರಣಗಳು ಮತ್ತು ಪಿಪಿಇ ಕಿಟ್ಗಳು, ಮಾಸ್ಕ್ಗಳು ಮುಂತಾದ ಪರಿಕರಗಳ ತಯಾರಿಕೆ ಮತ್ತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸರಬರಾಜು ಮಾಡುವುದು ಸೇರಿದಂತೆ ಹೊಸ ಅವಕಾಶಗಳ ಹುಡುಕಾಟಕ್ಕೂ ಸಹಾಯವಾಗಲಿದೆ ಎಂದು ತಿಳಿಸಲಾಗಿದೆ.