ETV Bharat / bharat

ಸಂಸದರಿಗಾಗಿ ನಿರ್ಮಾಣಗೊಂಡ ಬಹುಮಹಡಿ ಫ್ಲ್ಯಾಟ್‌ ಉದ್ಘಾಟಿಸಿದ ಪಿಎಂ - ಸಂಸದರಿಗೆ ನಿರ್ಮಿಸಲಾದ ಹೊಸ ಬಂಗಲೆ ಸುದ್ದಿ

ಸಂಸತ್ ಸದಸ್ಯರಿಗಾಗಿ ನವದೆಹಲಿಯ ಡಾ. ಬಿಡಿ ಮಾರ್ಗ್​​​ನಲ್ಲಿ ಕಟ್ಟಲಾಗಿರುವ ಬಹುಮಹಡಿ ಫ್ಲ್ಯಾಟ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಇಂದು ಉದ್ಘಾಟಿಸಿದರು.

PM Modi inaugurates multi-storeyed flats for MPs in New Delhi
ಬಹುಮಹಡಿ ಫ್ಲ್ಯಾಟ್‌ಗಳನ್ನು ಉದ್ಘಾಟಿಸಿದ ಪಿಎಂ
author img

By

Published : Nov 23, 2020, 2:18 PM IST

ನವದೆಹಲಿ: ರಾಜಧಾನಿಯ ಡಾ.ಬಿ.ಡಿ ಮಾರ್ಗ್‌ದಲ್ಲಿರುವ ಸಂಸದರಿಗೆಂದೇ ನಿರ್ಮಿಸಲಾಗಿರುವ ಬಹು ಅಂತಸ್ತಿನ ಫ್ಲ್ಯಾಟ್‌ಗಳನ್ನು ವಿಡಿಯೋ ಕಾನ್ಫರೆನ್ಸ್​ ಮೂಲಕ ಪ್ರಧಾನಿ ಮೋದಿ ಇಂದು ಉದ್ಘಾಟಿಸಿದರು. ಈ ಸಂದರ್ಭ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಉಪಸ್ಥಿತರಿದ್ದರು.

80 ವರ್ಷಕ್ಕಿಂತಲೂ ಹಳೆಯದಾದ ಎಂಟು ಬಂಗಲೆಗಳನ್ನು 76 ಫ್ಲ್ಯಾಟ್‌ಗಳಾಗಿ ಪುನರ್​​ ಅಭಿವೃದ್ಧಿ ಮಾಡಲಾಗಿದೆ. ಹಾರೋಬೂದಿಯಿಂದ ತಯಾರಿಸಿದ ಇಟ್ಟಿಗೆ ಬಳಸಿ ಈ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಕಡಿಮೆ ವಿದ್ಯುತ್ ಬಳಕೆಗಾಗಿ ವಿಆರ್‌ವಿ ವ್ಯವಸ್ಥೆ, ನೀರಿನ ಸಂರಕ್ಷಣೆಗಾಗಿ ಕಡಿಮೆ ಹರಿವಿನ ವಸ್ತುಗಳು, ಮಳೆ ನೀರು ಕೊಯ್ಲು ವ್ಯವಸ್ಥೆ ಮತ್ತು ಛಾವಣಿ ಮೇಲೆ ಸೌರ ಸ್ಥಾವರ ಸೇರಿದಂತೆ ಪರಿಸರ ಸ್ನೇಹಿಯಾಗಿ ಈ ಫ್ಲ್ಯಾಟ್​ಗಳನ್ನು ನಿರ್ಮಿಸಲಾಗಿದೆ.

ಮಂಜೂರಾದ ಹಣದಲ್ಲಿ ಶೇ. 14 ರಷ್ಟು ಹಣ ಉಳಿತಾಯದೊಂದಿಗೆ ಈ ಫ್ಲ್ಯಾಟ್‌ಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ ಮತ್ತು ಕೊರೊನಾ ಬಿಕ್ಕಟ್ಟಿನ ನಡುವೆಯೂ ನಿಗದಿತ ವೇಳೆಯೊಳಗೆ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ಎಂದು ಪಿಎಂಒ ಪ್ರಕಟಣೆಯಲ್ಲಿ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.