ನವದೆಹಲಿ: ದೇಶದಲ್ಲಿ 25 ವರ್ಷಗಳ ಮೊಬೈಲ್ ಟೆಲಿಫೋನ್ ಸೇವೆಯನ್ನು ಪೂರ್ಣಗೊಳಿಸಿದ ಟೆಲಿಕಾಂ ಉದ್ಯಮವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಈ ಘಟನೆಯ ನೆನಪಿಗಾಗಿ ದೂರಸಂಪರ್ಕ ಇಲಾಖೆ (ಡಿಒಟಿ) ಮತ್ತು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (ಸಿಒಎಐ) ವಿಶೇಷ ಆನ್‌ಲೈನ್ ಕಾರ್ಯಕ್ರಮ "ದೇಶ್ ಕಿ ಡಿಜಿಟಲ್ ಉಡಾನ್" ಆಯೋಜಿಸಿದೆ.
ಟೆಲಿಕಾಂ ಕ್ಷೇತ್ರದ ಬೆಳವಣಿಗೆಯಲ್ಲಿ ಡಿಒಟಿ, ಟೆಲಿಕಾಂ ಕಂಪನಿಗಳು ಮತ್ತು ಸಿಒಎಐ ನೀಡಿದ ಕೊಡುಗೆಯನ್ನು ಪ್ರಧಾನಿ ತಮ್ಮ ಪತ್ರದಲ್ಲಿ ಶ್ಲಾಘಿಸಿದ್ದಾರೆ.
ಸಾಮಾಜಿಕ, ಆರ್ಥಿಕ ಮತ್ತು ಮಾಹಿತಿ ಹೀಗೆ ಅನೇಕ ರೀತಿಯ ಚಲನಶೀಲತೆಯನ್ನು ಸಕ್ರಿಯಗೊಳಿಸುವಲ್ಲಿ ಡಿಜಿಟಲ್ ಕ್ಷೇತ್ರ ಪ್ರಮುಖ ಪಾತ್ರವಹಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.