ನವದೆಹಲಿ: ರಾಜಕಾರಣ, ಆಡಳಿತದ ಜಂಜಾಟದ ಮಧ್ಯೆಯೂ ಒಬ್ಬ ವಿಶೇಷ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆದು, ಸೋಷಿಯಲ್ ಮೀಡಿಯಾದಲ್ಲಿ ಬಾರಿ ಸುದ್ದಿಯಲ್ಲಿದ್ದಾರೆ. ಯಾರಪ್ಪ ಅದೂ ಸ್ವತಃ ಪಿಎಂ ಅವರೇ ತಮ್ಮ ಖಾಸಗಿ ಇನ್ಟ್ಸಾಗ್ರಾಮ್ನಲ್ಲಿ ಆ ವಿಶೇಷ ವ್ಯಕ್ತಿಯ ಬಗ್ಗೆ ಬರೆದುಕೊಳ್ಳುವಷ್ಟು ಮುಖ್ಯವಾದವರು ಅಂತೀರಾ?
ಅದು ಬೇರಾರೂ ಅಲ್ಲ ಮುದ್ದು ಕಂದಮ್ಮ, ತನ್ನ ಪುಟ್ಟ ಕೈ- ಕಾಲುಗಳನ್ನು ಬಡಿಯುತ್ತಾ, ನಿರ್ಮಲವಾದ ನಗುವನ್ನು ಬೀರುತ್ತಾ ಪಿಎಂ ಮೋದಿಯವರ ತೋಡೆಯ ಮೇಲೆ ಕುಳಿತು ಕೊಂಡು, ಮೋದಿಯವರ ಜೊತೆ ಆಟವಾಡುತ್ತಿದೆ. ಈ ಪೋಟೊಗಳು ಇಂದು ಸೋಷಿಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ನೆಟ್ಟಿಗರ ಪ್ರಕಾರ, ಆ ಮುದ್ದು ನಗು ಮೊಗದ ಕಂದಮ್ಮ ಬಿಜೆಪಿ ಸಂಸದ ಸತ್ಯನಾರಾಯಣ್ ಜಾಟಿಯ ಅವರ ಮೊಮ್ಮಗಳು.
ಮಗುವಿನ ಜೊತೆಗೆ ಆರಾಮಾಗಿ ಕಾಲ ಕಳೆಯುತ್ತಿರುವ ಎರಡು ಚಿತ್ರಗಳನ್ನ ಪಿಎಂ ಪೋಸ್ಟ್ ಮಾಡಿದ್ದು, ಒಂದರಲ್ಲಿ ಮಗುವನ್ನು ಎತ್ತಿಕೊಂಡು ಆಟವಾಡುತ್ತಿರುವ ಚಿತ್ರವಾದರೆ, ಮತ್ತೊಂದರಲ್ಲಿ ಪಿಎಂ ಆಫೀಸ್ ಟೇಬಲ್ ಮೇಲಿರುವ ಚಾಕೋಲೆಟ್ಗಳನ್ನು ತೆಗೆದುಕೊಳ್ಳಲು ಮುಂದಾಗುತ್ತಿರುವ ಪೋಟೊಗಳಿಗೆ, "ಬಹಳ ವಿಶೇಷ ಸ್ನೇಹಿತ ಇಂದು ಸಂಸತ್ತಿನಲ್ಲಿ ನನ್ನನ್ನು ಭೇಟಿಯಾಗಲು ಬಂದಿದ್ದರು," ಎಂಬ ಕ್ಯಾಪ್ಷನ್ ನೀಡಿದ್ದಾರೆ.
ಮೋದಿಯವರು ಆ ಪೋಟೊಗಳನ್ನು ಪೋಸ್ಟ್ ಮಾಡಿದ ಕೇವಲ 30 ನಿಮಿಷಗಳಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಜನ ಲೈಕ್ ಮತ್ತು ಕಾಮೆಂಟ್ ಮಾಡಿದ್ದಾರೆ.