ETV Bharat / bharat

2 ನೇ ದಿನವು ಸಿಎಂಗಳೊಂದಿಗೆ ಮುಂದುವರಿದ ಪ್ರಧಾನಿ ಮೋದಿ ಸಂವಾದ

author img

By

Published : Jun 17, 2020, 5:44 PM IST

ರಾಜ್ಯಗಳೊಂದಿಗಿನ ಸಮಾಲೋಚನೆಯ ಎರಡನೆಯ ದಿನದಂದು ಮಹಾರಾಷ್ಟ್ರ, ದೆಹಲಿ, ಕರ್ನಾಟಕ, ಗುಜರಾತ್, ಉತ್ತರ ಪ್ರದೇಶ ಮತ್ತು ಬಿಹಾರದ ಮುಖ್ಯಮಂತ್ರಿಗಳು ಭಾಗವಹಿಸಿದ್ದರು.

ಸಿಎಂಗಳೊಂದಿಗೆ ಮುಂದುವರಿದ ಪ್ರಧಾನಿ ಮೋದಿ ಸಂವಾದ

ನವದೆಹಲಿ: 'ಅನ್ಲಾಕ್ 1.0' ಸಂದರ್ಭದಲ್ಲಿ ಕೊರೊನಾ ವೈರಸ್ ಹರಡುವಿಕೆಯನ್ನು ಪರಿಶೀಲಿಸುವ ಮಾರ್ಗಗಳ ಕುರಿತು ರಾಜ್ಯ ಸರ್ಕಾರಗಳೊಂದಿಗೆ ಪ್ರಧಾನಿ ಮೋದಿ ಸಮಾಲೋಚನೆ ಮುಂದುವರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳು ಮತ್ತು 14 ರಾಜ್ಯಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು.

ರಾಜ್ಯಗಳೊಂದಿಗಿನ ಸಮಾಲೋಚನೆಯ ಎರಡನೆಯ ದಿನದಂದು ಮಹಾರಾಷ್ಟ್ರ, ದೆಹಲಿ, ಕರ್ನಾಟಕ, ಗುಜರಾತ್, ಉತ್ತರ ಪ್ರದೇಶ ಮತ್ತು ಬಿಹಾರದ ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾಗವಹಿಸಿಲ್ಲ. ಮಾತನಾಡಲು ಅವಕಾಶ ನೀಡಿದ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಮಮತಾ ಬ್ಯಾನರ್ಜಿ ಹೆಸರಿಲ್ಲದ ಕಾರಣ ಅವರು ಸಂವಾದದಲ್ಲಿ ಭಾಗಿಯಾಗದಿರಲು ಮುಖ್ಯ ಕಾರಣ ಎನ್ನಲಾಗಿದೆ.

ಲಾಕ್‌ಡೌನ್‌ನಿಂದ ದೇಶ ಹೊರಹೊಮ್ಮುತ್ತಿದ್ದಂತೆ ಆರ್ಥಿಕತೆಯು ಸ್ವಲ್ಪ ಮಟ್ಟಿಗೆ ಚಿಗುರುತ್ತಿದೆ. ಒಂದು ಕಡೆ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸಿ, ಪರೀಕ್ಷೆ ಮತ್ತು ಪತ್ತೆಹಚ್ಚುವಿಕೆಗೆ ಒತ್ತು ನೀಡುವ ಅವಶ್ಯಕತೆಯಿದೆ. ಮತ್ತೊಂದೆಡೆ ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಸಭೆಯಲ್ಲಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.