ETV Bharat / bharat

ಮೋದಿ ಹೆಡ್​ಲೈನ್​​ ನೀಡಿ ಪುಟ ಖಾಲಿ ಬಿಟ್ಟಿದ್ದಾರೆ: ಆರ್ಥಿಕ ಪ್ಯಾಕೇಜ್‌ ಬಗ್ಗೆ ಚಿದಂಬರಂ ಲೇವಡಿ - ಕೇಂದ್ರ ಮಾಜಿ ಸಚಿವ ಚಿದಂಬರಂ

ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿರುವ ವಿಶೇಷ ಆರ್ಥಿಕ ಪ್ಯಾಕೇಜ್​ಗೆ ಸಂಬಂಧಿಸಿದಂತೆ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಟ್ವೀಟ್​ ಮಾಡಿ ಲೇವಡಿ ಮಾಡಿದ್ದಾರೆ.

Chidambaram
Chidambaram
author img

By

Published : May 13, 2020, 9:47 AM IST

ನವದೆಹಲಿ: ಕೊರೊನಾ ವೈರಸ್‌ ವಿರುದ್ಧದ ಹೋರಾಟದ ಭಾಗವಾಗಿ ಸ್ವಾವಲಂಬಿ ಭಾರತದ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ 20 ಲಕ್ಷ ಕೋಟಿ ರೂ ವಿಶೇಷ ಪ್ಯಾಕೇಜ್​ ಘೋಷಿಸಿದ್ದು, ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ಟೀಕಿಸಿದ್ದಾರೆ.

  • Yesterday, PM gave us a headline and a blank page. Naturally, my reaction was a blank!

    Today, we look forward to the FM filling the blank page. We will carefully count every ADDITIONAL rupee that the government will actually infuse into the economy.

    — P. Chidambaram (@PChidambaram_IN) May 13, 2020 " class="align-text-top noRightClick twitterSection" data=" ">

ಪ್ರಧಾನಿ ಹೆಡ್​ಲೈನ್​ ನೀಡಿ, ಪುಟ ಖಾಲಿ ಬಿಟ್ಟಿದ್ದಾರೆ. ಇದೀಗ ಖಾಲಿ ಉಳಿದಿರುವ ಪುಟವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ತುಂಬಲಿದ್ದಾರೆ ಎಂದು ಸರಣಿ ಟ್ವೀಟ್​ ಮಾಡಿದ್ದಾರೆ.

  • We will also carefully examine who gets what?
    And the first thing we will look for is what the poor, hungry and devastated migrant workers can expect after they have walked hundreds of kilometres to their home states.

ಈ ಪ್ಯಾಕೇಜ್‌ನಲ್ಲಿ ಪ್ರತಿ ರೂಪಾಯಿ ಹಂಚಿಕೆಯಾಗುವ ರೀತಿ, ಬಡವರು, ಹಸಿದವರು, ವಲಸೆ ಕಾರ್ಮಿಕರಿಗೆ ಆಗುವ ಪ್ರಯೋಜನವನ್ನು ತಿಳಿಯಲು ಉತ್ಸುಕವಾಗಿರುವುದಾಗಿ ಅವರು ಬರೆದುಕೊಂಡಿದ್ದಾರೆ.

ಕಾರ್ಮಿಕರು, ರೈತರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳಲ್ಲಿ ತೊಡಗಿರುವ ಎಲ್ಲರಿಗೂ ಈ ಪ್ಯಾಕೇಜ್​ ತಲುಪಲಿದೆ ಎಂದು ಪ್ರಧಾನಿ ನಿನ್ನೆ ಭಾಷಣದಲ್ಲಿ ಹೇಳಿದ್ದರು. ಇದರ ಜತೆಗೆ ಆರ್ಥಿಕ ಪ್ಯಾಕೇಜ್​ ಯಾವ ರೀತಿಯಾಗಿ ಹಂಚಿಕೆಯಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಮಾಹಿತಿ ನೀಡಲಿದ್ದಾರೆ ಎಂದವರು ತಿಳಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.