ETV Bharat / bharat

ಸರಿಯಾದ ನಿರ್ಧಾರಗಳಿಂದ ಕೋವಿಡ್​ ವಿರುದ್ಧದ ಹೋರಾಟದಲ್ಲಿ ಭಾರತ ಉತ್ತಮ ಸ್ಥಿತಿ:ಪ್ರಧಾನಿ ಮೋದಿ

ಸಾಮಾಜಿಕ ಅಂತರ, ಮಾಸ್ಕ್​ ಹಾಕಿಕೊಳ್ಳುವುದು ಹಾಗೂ ಸ್ಯಾನಿಟೈಸರ್​ ಬಳಕೆ ಮಾಡುವುದರಿಂದ ಮಹಾಮಾರಿ ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಗೆಲುವು ಸಾಧಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟರು.

author img

By

Published : Jul 27, 2020, 6:22 PM IST

PM modi
PM modi

ನವದೆಹಲಿ: ಸರಿಯಾದ ಸಮಯದಲ್ಲಿ ತೆಗೆದುಕೊಂಡಿರುವ ಸರಿಯಾದ ನಿರ್ಧಾರಗಳಿಂದ ಇದೀಗ ಕೋವಿಡ್​ ವಿರುದ್ಧದ ಹೋರಾಟದಲ್ಲಿ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. ಉತ್ತರಪ್ರದೇಶದ ನೋಯ್ಡಾ, ಕೋಲ್ಕತಾ, ಮತ್ತು ಮುಂಬೈನಲ್ಲಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮೂರು ಹೊಸ ಹೈ-ಥ್ರೂಪುಟ್ ಲ್ಯಾಬ್‌ಗಳನ್ನು ಉದ್ಘಾಟಿಸಿ ಪ್ರಧಾನಿ ಮೋದಿ ಮಾತನಾಡಿದರು.

ಪ್ರಧಾನಿ ಮೋದಿ ಮಾತು

ವಿವಿಧ ದೇಶಗಳಿಗೆ ಹೋಲಿಕೆ ಮಾಡಿದಾಗ ಭಾರತದಲ್ಲಿ ಮಹಾಮಾರಿ ಕೋವಿಡ್​ನಿಂದ ಸಾವನ್ನಪ್ಪುತ್ತಿರುವ ಸಂಖ್ಯೆ ತೀರಾ ಕಡಿಮೆಯಾಗಿದ್ದು, ಗುಣಮುಖರಾಗುತ್ತಿರುವ ಸಂಖ್ಯೆಯಲ್ಲೂ ಏರಿಕೆ ಕಂಡು ಬಂದಿದೆ ಎಂದು ತಿಳಿಸಿದ್ದರು. ಆರಂಭದಲ್ಲಿ ನಾವು ವೈದ್ಯಕೀಯ ಮೂಲ ಸೌಂಕರ್ಯಗಳಿಂದ ವಂಚಿತರಾಗಿದ್ದೇವು. ಆದರೆ ಇದೀಗ ದೇಶಾದ್ಯಂತ 11 ಸಾವಿರಕ್ಕೂ ಅಧಿಕ ಕೋವಿಡ್​ ಚಿಕಿತ್ಸಾ ಸೆಂಟರ್​ಗಳು, 11 ಲಕ್ಷಕ್ಕೂ ಅಧಿಕ ಐಸೋಲೇಷನ್​ ಬೆಡ್​ ಹಾಗೂ ಪ್ರತಿದಿನ 5 ಲಕ್ಷ ಕೋವಿಡ್​ ಟೆಸ್ಟ್​ ನಡೆಸಲಾಗುತ್ತಿದೆ ಎಂದು ತಿಳಿಸಿದರು. ದೇಶದ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸರಿಯಾಗಿ ಸ್ಯಾನಿಟೈಸರ್​ ಹಾಗೂ ಮಾಸ್ಕ್​ ಬಳಕೆಯಿಂದ ಇದರ ವಿರುದ್ಧದ ಹೋರಾಟದಲ್ಲಿ ನಾವು ಗೆಲುವು ಸಾಧಿಸಬಹುದಾಗಿದೆ ಎಂದು ತಿಳಿಸಿದರು.

ಈ ಲ್ಯಾಬ್​ಗಳಲ್ಲಿ ಪ್ರತಿ ದಿನ 10 ಸಾವಿರಕ್ಕೂ ಅಧಿಕ ಕೋವಿಡ್​​ ಟೆಸ್ಟ್​​ ನಡೆಸುವ ಸಾಮರ್ಥ್ಯ ಹೊಂದಿದ್ದು, ಇಲ್ಲಿನ ಜನರಿಗೆ ಅನುಕೂಲವಾಗಲಿದೆ ಎಂದರು. ಇದರ ಜತೆಗೆ ಲ್ಯಾಬ್​ಗಳು ಕೇವಲ ಕೊರೊನಾ ಮಾತ್ರವಲ್ಲದೇ ಹೆಚ್ಐವಿ, ಡೆಂಗ್ಯೂ ಸೇರಿದಂತೆ ಅನೇಕ ರೋಗದ ಟೆಸ್ಟ್​​ಗಳು ನಡೆಸಲು ಮುಂದಿನ ದಿನಗಳಲ್ಲಿ ಸಹಕಾರಿಯಾಗಲಿವೆ ಎಂದು ಅವರು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.