ಮಧುರೈ(ತಮಿಳುನಾಡು): ಮನುಷ್ಯರಿಗೆ ಹೇಗೆ ತಮ್ಮ ಪ್ರೀತಿ ಪಾತ್ರರ ಮೇಲೆ ಅಪಾರವಾದ ಪ್ರೀತಿ ಇರುತ್ತದೋ ಅದೇ ರೀತಿಯಲ್ಲಿ ಮೂಕ ಪ್ರಾಣಿಗಳ ನಡುವೆ ಭಾವನಾತ್ಮಕ ಸಂಬಂಧವಿರುತ್ತದೆ. ಸದ್ಯ ತಮಿಳುನಾಡಿನ ಮಧುರೈನಲ್ಲಿ ನಡೆದ ಹೃದಯ ಕಲಕುವ ಈ ಸನ್ನಿವೇಶ ಇದಕ್ಕೆ ಜ್ವಲಂತ ಉದಾಹರಣೆ.
ಲಾಕ್ಡೌನ್ ಸಂಕಷ್ಟದೊಳಗೆ ಸಿಲುಕಿಕೊಂಡಿದ್ದ ರೈತನೋರ್ವ ತನ್ನ ಮನೆಯಲ್ಲಿದ್ದ ಆಕಳನ್ನ ಮಾರಾಟ ಮಾಡಿದ್ದಾನೆ. ಅದನ್ನು ತೆಗೆದುಕೊಂಡು ಹೋಗುವ ಉದ್ದೇಶದಿಂದ ಟೆಂಪೋದಲ್ಲಿ ಹತ್ತಿಸುತ್ತಿದ್ದಂತೆ ಹೋರಿಯೊಂದು ಮೂಕರೋದನೆ ಹೊರಹಾಕಿದ್ದು, ಬಿಟ್ ಹೋಗ್ಬೇಡ ನನ್ನ ಎಂದು ಗೋಗರೆದಿದೆ. ಜತೆಗೆ ಟೆಂಪೋ ಹಿಂದೆ ಓಡಿ ಹೋಗಿದ್ದು, ಇದರ ವಿಡಿಯೋ ನೋಡುಗರ ಮನಕಲಕುವಂತಿದೆ.
ಟೆಂಪೋದಲ್ಲಿ ಆಕಳನ್ನ ಹಾಕಿಕೊಳ್ಳುತ್ತಿದ್ದಂತೆ ಮುಂದೆ ಹೋಗಲು ಬಿಡದ ಹೋರಿ, ಬರೋಬ್ಬೆರಿ 1 ಗಂಟೆ ಅಡ್ಡಲಾಗಿ ನಿಂತಿದೆ. ದೇವಸ್ಥಾನದ ಹೋರಿ ಹಾಗೂ ಆಕಳು ಒಟ್ಟಿಗೆ ಸಮಯ ಕಳೆಯುತ್ತಿದ್ದವು ಎಂದು ತಿಳಿದು ಬಂದಿದೆ.