ETV Bharat / bharat

700 ಕಿ.ಮೀ. ಪ್ರಯಾಣಿಸಿ 10 ನಿಮಿಷ ಲೇಟ್​ ಆಗಿ ನೀಟ್​ ಪರೀಕ್ಷೆಗೆ ಬಂದ ವಿದ್ಯಾರ್ಥಿಗೆ ಪ್ರವೇಶ ನಿರಾಕರಣೆ: ಸುಪ್ರೀಂಗೆ ಅರ್ಜಿ - ಸುಮೊಟೋ ದಾಖಲಿಸುವಂತೆ ಸುಪ್ರೀಂಗೆ ಅರ್ಜಿ

ಕೇವಲ 10 ನಿಮಿಷ ತಡವಾದ್ದರಿಂದ ನೀಟ್‌ಗೆ ಹಾಜರಾಗಲು ವಿದ್ಯಾರ್ಥಿಗೆ ಅವಕಾಶ ನೀಡದ ವಿಚಾರವಾಗಿ ಸುಮೊಟೋ ಪ್ರಕರಣ ದಾಖಲಿಸುವಂತೆ ಸುಪ್ರೀಂ ಕೋರ್ಟ್‌ಗೆ ವಕೀಲ ಶಾಶ್ವತ್ ಆನಂದ್ ಎಂಬವರು ಅರ್ಜಿ ಸಲ್ಲಿಸಲಾಗಿದೆ.

ಸುಪ್ರೀಂ
author img

By

Published : Sep 16, 2020, 5:03 PM IST

ನವದೆಹಲಿ: 'ಪರೀಕ್ಷಾ ಕೇಂದ್ರವನ್ನು ತಲುಪಲು ಸುಮಾರು 700 ಕಿ.ಮೀ ಪ್ರಯಾಣಿಸಿದರೂ ಕೇವಲ 10 ನಿಮಿಷ ತಡವಾದ್ದರಿಂದ ನೀಟ್‌ಗೆ ಹಾಜರಾಗಲು ವಿದ್ಯಾರ್ಥಿಗೆ ಅವಕಾಶ ನೀಡಿಲ್ಲ' ಎಂಬ ಸುದ್ದಿಯ ಕುರಿತಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ವಕೀಲರಾಗಿರುವ ಶಾಶ್ವತ್ ಆನಂದ್ ತಮ್ಮ ಅರ್ಜಿಯಲ್ಲಿ, ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಸುಮೊಟೊ ದಾಖಲಿಸುವಂತೆ ಮನವಿ ಮಾಡಿದ್ದಾರೆ. ಈ ಅರ್ಜಿಯು ಒಂದು ವಾರದೊಳಗೆ ವಿಚಾರಣೆಗೆ ಬರುವ ಸಾಧ್ಯತೆ ಇದೆ.

ಅಂತಹ ಪರೀಕ್ಷೆಗಳಿಂದ ತಪ್ಪಿಸಿಕೊಂಡ ವಿದ್ಯಾರ್ಥಿಗಳಿಗೆ ಆಹಾರ, ವಸತಿ, ನೀರು ಮತ್ತು ಸಾರಿಗೆಗಾಗಿ ಕೆಲವು ಮಾರ್ಗಸೂಚಿಗಳನ್ನು ತರಬೇಕೆಂದು ಕೋರ್ಟ್​ಗೆ ಕೋರಿದ್ದಾರೆ. ದುರದೃಷ್ಟವಶಾತ್ ಇಂತಹ ಸಮಸ್ಯೆಗಳಿಂದ ನೀಟ್ ಅಥವಾ ಜೆಇಇ ಪರೀಕ್ಷೆ ಬರೆಯಲಾಗದ ವಿದ್ಯಾರ್ಥಿಗಳಿಗೆ, ಸಂಬಂಧಪಟ್ಟ ಅಧಿಕಾರಿಗಳು ಮತ್ತೆ ಪರೀಕ್ಷೆಗಳನ್ನು ನಡೆಸಬೇಕು ಎಂದು ಆನಂದ್ ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.