ನವದೆಹಲಿ: ಲಾಕ್ಡೌನ್ ತೆರವಿನ ಬಳಿಕ ಕಳೆದ ನಾಲ್ಕ ದಿನಗಳಿಂದ ತೈಲ ದರ ಪರಿಷ್ಕರಣೆ ನಡೆದಿದ್ದು, ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 40 ಪೈಸೆ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 45 ಪೈಸೆ ಹೆಚ್ಚಿಸಲಾಗಿದೆ. ಬೆಂಗಳೂರಿನಲ್ಲಿ ಹೊಸ ದರದ ಪ್ರಕಾರ ಇಂದು ಲೀಟರ್ ಪೆಟ್ರೋಲ್ಗೆ 75.77 ರೂ. ನಿಗದಿಯಾಗಿದೆ. ಇನ್ನು ಡೀಸೆಲ್ ದರ 68.09
ದೆಹಲಿಯಲ್ಲಿ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 73 ರೂ.ಗಳಿಂದ 73.40 ರೂ.ಗೆ ಏರಿಸಿದ್ದರೆ, ಡೀಸೆಲ್ ದರವನ್ನು 71.17 ರೂ.ನಿಂದ 71.62 ರೂ.ಗೆ ಹೆಚ್ಚಿಸಲಾಗಿದೆ ಎಂದು ತೈಲ ಮಾರುಕಟ್ಟೆ ಕಂಪನಿಗಳ ಬೆಲೆ ಅಧಿಸೂಚನೆ ತಿಳಿಸಿದೆ.
ದೇಶಾದ್ಯಂತ ದರಗಳು ಹೆಚ್ಚಳವಾಗಿದ್ದು, ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್‌ನ ಪ್ರಮಾಣ ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ಬೆಲೆ ಬದಲಾಗುತ್ತದೆ.
82 ದಿನಗಳ ಬಳಿಕ ಬೆಲೆ ಪರಿಷ್ಕರಣೆ ಪ್ರಾರಂಭವಾಗಿ, ಸತತ ನಾಲ್ಕನೇ ಬಾರಿ ದರ ಹೆಚ್ಚಳವಾಗಿದೆ. ನಾಲ್ಕು ಏರಿಕೆಗಳಲ್ಲಿ ಒಟ್ಟಾಗಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 2.14 ರೂ ಮತ್ತು ಡೀಸೆಲ್ 2.23 ರೂ. ಏರಿಕೆಯಾಗಿದೆ.