ETV Bharat / bharat

ಸತತ 3ನೇ ದಿನವೂ ವಿಶ್ರಾಮ ಸ್ಥಿತಿಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಇತರ ತೈಲ ಉತ್ಪನ್ನಗಳ ಬೆಲೆಗಳನ್ನು ಜಾಗತಿಕ ಮಾರುಕಟ್ಟೆಗಳಲ್ಲಿ ಪೆಟ್ರೋಲಿಯಂ ಉತ್ಪನ್ನದ ಬೆಲೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಆದರೆ, ಮಾನದಂಡದ ಕಚ್ಚಾ ಚಲನೆಯು ಉತ್ಪನ್ನ ವಿಭಾಗಗಳಲ್ಲಿ ಬೆಲೆಗೆ ಪರಿಣಾಮ ಬೀರುತ್ತದೆ.

ಪೆಟ್ರೋಲ್, ಡೀಸೆಲ್ ಬೆಲೆ
ಪೆಟ್ರೋಲ್, ಡೀಸೆಲ್ ಬೆಲೆ
author img

By

Published : Feb 8, 2021, 1:50 PM IST

ನವದೆಹಲಿ: ಸತತ ಮೂರನೇ ದಿನದಂದು ವಿರಾಮ ಕ್ರಮದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮುಂದುವರೆದಿದೆ. ಗುರುವಾರ ಮತ್ತು ಶುಕ್ರವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತೀವ್ರವಾಗಿ ಏರಿಕೆಯಾಗಿದ್ದು, ಆಟೋ ಇಂಧನಗಳ ಪಂಪ್ ಬೆಲೆಯನ್ನು ಪ್ರತಿ ಲೀಟರ್‌ಗೆ 65 ಪೈಸೆ ಹೆಚ್ಚಿಸಿತ್ತು.

ಜಾಗತಿಕ ಕಚ್ಚಾ ಬೆಲೆಗಳು ಶೇಕಡಾ 1.3ರಷ್ಟು ಏರಿಕೆಯಾಗಿದ್ದು, ಈ ವರ್ಷದ ಉನ್ನತ ಮಟ್ಟದ ಬ್ಯಾರೆಲ್‌ ಬೆಲೆ 60 ಡಾಲರ್‌ಗೆ ತಲುಪಿದೆ. ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಇತರ ತೈಲ ಉತ್ಪನ್ನಗಳ ಬೆಲೆಗಳನ್ನು ಜಾಗತಿಕ ಮಾರುಕಟ್ಟೆಗಳಲ್ಲಿ ಪೆಟ್ರೋಲಿಯಂ ಉತ್ಪನ್ನದ ಬೆಲೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

ಸೋಮವಾರದ ವಿರಾಮದ ಬೆಲೆಯೊಂದಿಗೆ, ದೆಹಲಿಯಲ್ಲಿ ಡೀಸೆಲ್ ಚಿಲ್ಲರೆ ಬೆಲೆ ಲೀಟರ್ 77.13 ರೂ., ಪೆಟ್ರೋಲ್ ಬೆಲೆ 86.95 ರೂ. ಆಗಿದ್ದು, ಹೊಸ ಗರಿಷ್ಠ ಮಟ್ಟಕ್ಕೆ ತಲುಪಿದೆ. ದೇಶಾದ್ಯಂತ ಇಂಧನ ಬೆಲೆಗಳು ಶುಕ್ರವಾರದ ಮಟ್ಟದಲ್ಲಿ ಉಳಿದಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.