ವೈನಾಡು(ಕೇರಳ): ಮಹಾಮಾರಿ ಕೊರೊನಾ ಭೀತಿ ಕೇರಳದಲ್ಲಿ ಹೆಚ್ಚಾಗಿರುವ ಕಾರಣ ಕರ್ನಾಟಕ-ಕೇರಳ ನಡುವಿನ ಗಡಿ ಬಂದ್ ಆಗಿತ್ತು. ಆದರೆ ಇದೀಗ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲಾಗಿದ್ದು, ಆ್ಯಂಬುಲೆನ್ಸ್ ಹೋಗಲು ಗಡಿ ಓಪನ್ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವೈನಾಡು ಜಿಲ್ಲಾಧಿಕಾರಿ ಆದಿಲ್ ಅಬ್ದುಲ್ಲಾ, ಕರ್ನಾಟಕ-ಕೇರಳ ಗಡಿಯಲ್ಲಿ ವಾಸವಾಗಿರುವ ರೋಗಿಗಳು, ಕೋವಿಡ್ ಸೋಂಕಿತರು, ತುರ್ತು ಸೇವೆಗಳಿಗಾಗಿ ಇಲ್ಲಿಗೆ ಆಗಮಿಸಬಹುದು ಎಂದು ತಿಳಿಸಿದ್ದಾರೆ.
ಇಷ್ಟು ದಿನ ಉಭಯ-ರಾಜ್ಯಗಳ ನಡುವಿನ ಗಡಿ ಬಂದ್ ಮಾಡಲಾಗಿತ್ತು. ಆದರೀಗ ಆಂಬುಲೆನ್ಸ್ ಮೂಲಕ ರೋಗಿಗಳನ್ನು ಗಡಿ ಮೂಲಕ ಕೇರಳದಿಂದ ಕರ್ನಾಟಕದ ಆಸ್ಪತ್ರೆಗೆ ದಾಖಲಿಸಲು ಕರ್ನಾಟಕ ಒಪ್ಪಿಗೆ ನೀಡಿದೆ.