ರಾಂಚಿ (ಜಾರ್ಖಂಡ್): ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ರಿಮ್ಸ್) ಆರ್‌ಜೆಡಿ ನಾಯಕ ಲಾಲು ಯಾದವ್‌ಗೆ ಚಿಕಿತ್ಸೆ ನೀಡುವ ವೈದ್ಯಕೀಯ ತಂಡ ಮತ್ತೊಬ್ಬ ರೋಗಿಗೆ ಚಿಕಿತ್ಸೆ ನೀಡುತ್ತಿತ್ತು. ಆದರೆ ಈಗ ಆ ರೋಗಿಗೆ ಕೊರೊನಾ ಸೋಂಕು ತಗುಲಿರುವುದು ಬೆಳಕಿಗೆ ಬಂದಿದೆ.
ಕಳೆದ ಮೂರು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಆತ ಡಾ. ಉಮೇಶ್ ಪ್ರಸಾದ್ ಎಂಬುವರಿಂದ ಚಿಕಿತ್ಸೆ ಪಡೆಯುತ್ತಿದ್ದ. ಆಘಾತಕಾರಿ ವಿಷಯವೆಂದರೆ, ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರಿಗೂ ಇದೇ ವೈದ್ಯಕೀಯ ತಂಡ ಚಿಕಿತ್ಸೆ ನೀಡುತ್ತಿತ್ತು. ಆದರೂ ಲಾಲು ಪ್ರಸಾದ್ ಯಾದವ್ ಅವರು ಬೇರೆ ವಾರ್ಡ್ನಲ್ಲಿದ್ದರು ಎಂದು ರಿಮ್ಸ್ ಆಡಳಿತ ಮಂಡಳಿ ಹೇಳಿದೆ.
ಕೊರೊನಾ ಪತ್ತೆಯಾದ ರೋಗಿಯು ಔಷಧ ವಿಭಾಗದಲ್ಲಿ ಮೂರು ವಾರಗಳ ಕಾಲ ಇದ್ದಿದ್ದರಿಂದ, ಎಲ್ಲಾ ವೈದ್ಯರು ಮತ್ತು ಸಿಬ್ಬಂದಿ ಪರೀಕ್ಷೆಗಾಗಿ ತಮ್ಮ ಮಾದರಿಗಳನ್ನು ನೀಡುತ್ತಿದ್ದಾರೆ. ಡಾ. ಉಮೇಶ್ ಪ್ರಸಾದ್ ಮತ್ತು ಅವರ ತಂಡವನ್ನು ಕ್ವಾರಂಟೈನಲ್ಲಿ ಇಡಲಾಗಿದೆ ಎಂದು ಆಸ್ಪತ್ರೆ ಹೇಳಿದೆ.