ಪಿಥೋರ್ಗಢ(ಉತ್ತರಾಖಂಡ): ರಾಜ್ಯದ ಹಲವು ಭಾಗಗಳಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆ ಹಾಗೂ ಭೂಕುಸಿತದಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ಭೂಕುಸಿತ ಮತ್ತು ಮಳೆಯಿಂದಾಗಿ ಗ್ರಾಮದಿಂದ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆದ ಕಾರಣ ಪಿಥೋರ್ಗಢದ ಮುನ್ಸಿಯಾರಿ ಪ್ರದೇಶದ ಗ್ರಾಮಸ್ಥರು ರೋಗಿಯೊಬ್ಬರನ್ನು ಆಸ್ಪತ್ರೆಗೆ ಸಾಗಿಸಲು ಹರಸಾಹಸಪಟ್ಟಿದ್ದಾರೆ. ಮರದ ಕೋಲುಗಳಿಂದ ನಿರ್ಮಿಸಿದ ತಾತ್ಕಾಲಿಕ ಸ್ಟ್ರೆಚರ್ ಮೂಲಕ ರೋಗಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಒಂದೆಡೆ ಕೋವಿಡ್ ಕಾಟವಾದರೆ ಮತ್ತೊಂದೆಡೆ ಭಾರಿ ಮಳೆ ಇಲ್ಲಿನ ಜನರ ಬದುಕನ್ನೇ ಕಸಿದುಕೊಂಡಿದ್ದು, ಜನರು ಅಸಹಾಯಕರಾಗಿ ಬದುಕುವಂತಾಗಿದೆ.