ETV Bharat / bharat

ಲಾಕ್​ಡೌನ್​ ನಡುವೆ ಪತಂಜಲಿ ಉತ್ಪನ್ನಗಳ ದರ ಹೆಚ್ಚಳ: ಗ್ರಾಹಕರ ಆರೋಪ - Patanjali increases rate of products amid lockdown

ಲಾಕ್​ಡೌನ್​​ ನಡುವೆ ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಈ ವೇಳೆ ಬಾಬಾ ರಾಮ್​ದೇವ್​ ಒಡೆತನದ ಆಯುರ್ವೇದ ಉತ್ನನ್ನಗಳ ಪತಂಜಲಿ ಕಂಪನಿ ವಿರುದ್ಧ ಉತ್ಪನ್ನಗಳ ಬೆಲೆ ಹೆಚ್ಚಿಸಿರುವ ಆರೋಪ ಕೇಳಿಬಂದಿದೆ.

Patanjali
ಪತಂಜಲಿ
author img

By

Published : Apr 19, 2020, 6:20 PM IST

ಹರಿದ್ವಾರ (ಉತ್ತರಾಖಂಡ): ಲಾಕ್​ಡೌನ್​ ನಡುವೆ ಪತಂಜಲಿ ತನ್ನ ಉತ್ಪನ್ನಗಳ ಬೆಲೆ ಹೆಚ್ಚಿಸಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

ಕೋವಿಡ್​-19 ಬಿಕ್ಕಟ್ಟಿನಿಂದ ಉಂಟಾಗಿರುವ ಲಾಕ್​ಡೌನ್​​ ನಡುವೆ ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಈ ವೇಳೆ ಬಾಬಾ ರಾಮ್​ದೇವ್​ ಒಡೆತನದ ಆಯುರ್ವೇದ ಉತ್ನನ್ನಗಳ ಪತಂಜಲಿ ಕಂಪನಿ ತನ್ನ ಉತ್ಪನ್ನಗಳ ಬೆಲೆ ಹೆಚ್ಚಿಸಿರುವ ಆರೋಪ ಕೇಳಿಬಂದಿದೆ. ಅದರಲ್ಲಿಯೂ ಹಿಟ್ಟಿನ ಬೆಲೆಯಲ್ಲಿ ಶೇ. 10ರಷ್ಟು ಏರಿಕೆಯಾಗಿದ್ದು, ಈ ಹಿಂದೆ 340 ರೂ. ಇದ್ದ 10 ಕೆಜಿ ಹಿಟ್ಟನ್ನು ಇದೀಗ 375 ರೂ.ಗೆ ಪತಂಜಲಿ ಮಾರಾಟ ಮಾಡುತ್ತಿದೆ ಎಂದು ಅಂಗಡಿ ವ್ಯಾಪಾರಿಯೊಬ್ಬರು ಹೇಳಿದ್ದಾರೆ.

ಇತರ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮೊದಲಿನ ದರದಲ್ಲೇ ಮಾರಾಟ ಮಾಡುತ್ತಿದ್ದು, ಪತಂಜಲಿಯ ಈ ನಡೆಗೆ ಗ್ರಾಹಕರು ಹಾಗೂ ಮಾರಾಟಗಾರರು ಇಬ್ಬರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಹರಿದ್ವಾರದ ಹಿರಿಯ ಮಾರುಕಟ್ಟೆ ಅಧಿಕಾರಿಯೊಬ್ಬರು, ಗೋಧಿಯ ಬೆಲೆ ಲಾಕ್‌ಡೌನ್‌ ಮುಂಚೆ ಎಷ್ಟಿತ್ತೋ ಅಷ್ಟೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಬೆಲೆ ಹೆಚ್ಚಿಸಲು ಯಾವುದೇ ಕಾರಣಗಳಿಲ್ಲ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.