ನವದೆಹಲಿ: ರಕ್ಕಸ ಕೊರೊನಾ ವಿರುದ್ಧದ ಹೋರಾಟದಲ್ಲಿ ಇಡೀ ಭಾರತವೇ ಒಂದಾಗಿದ್ದು, ಮಹಾಮಾರಿ ವಿರುದ್ಧ ಹೋರಾಟ ನಡೆಸಲು ನಿಮ್ಮ ಕೈಯಿಂದ ಆದ ಸಹಾಯ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿಕೊಳ್ಳುತ್ತಿದ್ದಂತೆ ಸಾವಿರಾರು ಕೋಟಿ ರೂ 'ಪಿಎಂ ಕೇರ್ಸ್'ಗೆ ಹರಿದು ಬರುತ್ತಿದೆ.
ಯೋಗ ಗುರು ಬಾಬಾ ರಾಮದೇವ್ ಅವರ ಪಂತಜಲಿ ಇದೀಗ ಪ್ರಧಾನಿ ನರೇಂದ್ರ ಮೋದಿಯ ಪಿಎಂ ಕೇರ್ಸ್ ನಿಧಿಗೆ 25 ಕೋಟಿ ರೂ ದೇಣಿಗೆ ನೀಡಿದೆ. ಇದರ ಮಧ್ಯೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಕೂಡ ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಪಿಎಂ ಕೇರ್ಸ್ ನಿಧಿಗೆ 20 ಕೋಟಿ ರೂ ನೀಡಿದ್ದು, ತನ್ನ ಸಿಬ್ಬಂದಿಯ ಒಂದು ದಿನದ ವೇತನ 6.25 ಕೋಟಿ ರೂಪಾಯಿ ಕೂಡ ದೇಣಿಗೆ ನೀಡಲು ನಿರ್ಧರಿಸಿದೆ. ಹೀಗಾಗಿ ಹೆಚ್ಎಎಲ್ ಒಟ್ಟು 26.25 ಕೋಟಿ ರೂ ಹಣ ದೇಣಿಗೆ ನೀಡಿದೆ.
ಪಿಎಂ ಕೇರ್ಸ್ ನಿಧಿಗೆ ಈಗಾಗಲೇ ಅಕ್ಷಯ್ ಕುಮಾರ್ 25 ಕೋಟಿ, ಕ್ರಿಕೆಟರ್ ಸುರೇಶ್ ರೈನಾ 51 ಲಕ್ಷ ರೂ, ಬಿಸಿಸಿಐ 51 ಕೋಟಿ ರೂ, ಟಾಟಾ ಮೋಟರ್ಸ್ 15 ಸಾವಿರ ಕೋಟಿ ರೂ. ದೇಣಿಗೆ ನೀಡಿದೆ.