ETV Bharat / bharat

ಮಹಾತ್ಮನ ದೃಷ್ಟಿಯಲ್ಲಿ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ... - mahatma gandhiji

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಗಾಂಧಿ ಹಾಕಿಕೊಟ್ಟಿರುವ ದಾರಿಯಲ್ಲೇ ಸಾಗುತ್ತಿರುವುದೇ ಎಂಬ ಗಂಭೀರ ಪ್ರಶ್ನೆ ಉದ್ಭವವಾಗಿದೆ. ಸಮಾಜದೆದುರು ಉತ್ತಮ ವ್ಯಕ್ತಿಯೆಂದು ನಟಿಸುತ್ತಾ, ಒಳಗೊಳಗೆ ಭ್ರಷ್ಟಾಚಾರ, ಅನೈತಿಕತೆ ಹಾಗೂ ದಬ್ಬಾಳಿಕೆ ನಡೆಸುವುದು ಸಂಸದೀಯ ಪ್ರಜಾಪ್ರಭುತ್ವದ ಲಕ್ಷಣವಲ್ಲ. ನಾಗರಿಕ ಸಮಾಜದಲ್ಲಿ ಏಕೀಕೃತ ರಾಜಕೀಯ ಪ್ರಜ್ಞೆಯಿಲ್ಲದಿದ್ದಲ್ಲಿ, ಭ್ರಷ್ಟಾಚಾರವನ್ನು ತಗ್ಗಿಸಲು ಹಾಗೂ ನಾಗರಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಸಾಧ್ಯವಿಲ್ಲ. ಹಳ್ಳಿಗಳಲ್ಲಿರುವ ಸಮಸ್ಯೆಗಳಾದ ಶಿಕ್ಷಣದ ಕೊರತೆ, ಬಡತನ ಹಾಗೂ ಇತರ ಅಡೆತಡೆಗಳನ್ನು ನೀಗಿಸಿ ಸಹಬಾಳ್ವೆ ಹಾಗೂ ಸೌಹಾರ್ದತೆ ಮೂಡಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಗಾಂಧಿ ತಿಳಿಸಿದ್ದಾರೆ.

gandhi
author img

By

Published : Sep 12, 2019, 5:25 AM IST

ಭಾರತದ ಸ್ವತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮ ಗಾಂಧಿಯವರ ಕೊಡುಗೆ ಅಪಾರವಾಗಿದ್ದು, ಅದೇ ರೀತಿ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಅವರ ಪಾತ್ರ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರಿಂದಲೇ ಭಾರತ ಸಾರ್ವಭೌಮತ್ವ ದೇಶವಾಗಿ ಹೊರಹೊಮ್ಮಿದೆ.

ಆದರೆ ಸದ್ಯ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಗಾಂಧಿ ಹಾಕಿಕೊಟ್ಟಿರುವ ದಾರಿಯಲ್ಲೇ ಸಾಗುತ್ತಿರುವುದೇ ಎಂಬ ಗಂಭೀರ ಪ್ರಶ್ನೆ ಉದ್ಭವವಾಗಿದೆ. ಜತೆಗೆ ಸಂಸದೀಯ ಪ್ರಜಾಪ್ರಭುತ್ವವು ಗಾಂಧಿ ಸಿದ್ಧಾಂತಗಳಿಗೆ ಪೂರಕವಾಗಿರುವುದೇ? ಗಾಂಧೀಜಿಯವರನ್ನ ಫಾದರ್​ ಆಫ್​ ನೇಷನ್​ ಎಂದು ಹೆಮ್ಮೆಯಿಂದ ಘೋಷಣೆ ಮಾಡಬಹುದೇ ಎಂಬ ಪ್ರಶ್ನೆ ಉದ್ಭವವಾಗುತ್ತದೆ.

ಈ ಪ್ರಶ್ನೆಗಳಿಗೆ ಇದೀಗ ಉತ್ತರ ಹುಡುಕುವುದು ಅತ್ಯಗತ್ಯವಾಗಿದೆ. ವಿಶೇಷವಾಗಿ ಭಾರತಕ್ಕೆ ಸ್ವತಂತ್ರ್ಯ ಸಿಕ್ಕು 75 ವರ್ಷಗಳು ಕಳೆದಿದ್ದು, ಭಾರತದ ಪ್ರಜಾಪ್ರಭುತ್ವಕ್ಕೆ ತನ್ನ ಅನನ್ಯತೆ ಮತ್ತು ಗುರುತು ಸ್ಥಾಪಿಸಲು ಸಾಕಷ್ಟು ಸಮಯ ಬೇಕಾಗುತ್ತದೆ.

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಅಥವಾ ಪದ್ಧತಿ ಅತ್ಯುತ್ತಮ ವ್ಯವಸ್ಥೆ ಎಂದು ಪರಿಗಣಿಸಲ್ಪಟ್ಟಿದ್ದು, ಅದು ವಿಭಿನ್ನ ಅಭಿಪ್ರಾಯ ಮತ್ತು ಜೀವನ ವಿಧಾನ, ಆದೇಶ ಹಾಗೂ ವಿಮರ್ಶೆ ಒಳಗೊಂಡಿರುತ್ತದೆ. ಬಹುಮತದ ಬೆಂಬಲದಿಂದ ಆಡಳಿತ ನಡೆಸುವ ವ್ಯವಸ್ಥೆಯಾಗಿದ್ದು,ಇನ್ನೊಂದೆಡೆ ಸಣ್ಣ ಸಣ್ಣ ಚಿಂತನೆ ಮತ್ತು ಪ್ರಯೋಗಕ್ಕೂ ಮಾನ್ಯತೆ ನೀಡಲಾಗುತ್ತದೆ.

gandhi
ಗಾಂಧಿ ತಿಳಿಸಿದ ಮಾರ್ಗದಲ್ಲೇ ಪ್ರಜಾಪ್ರಭುತ್ವ ವ್ಯವಸ್ಥೆ ಸಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆಯಿದೆ

ಒಂದು ವೇಳೆ ದೇಶದಲ್ಲಿ ಸಂಸದೀಯ ಪ್ರಜಾಪ್ರಭುತ್ವ ಜಾರಿಯಲ್ಲಿ ಇಲ್ಲದೇ ಹೋಗಿದ್ದರೆ ಹಿಂಸಾತ್ಮಕ ಕೃತ್ಯಗಳು ನಡೆದು, ರಾಜಕೀಯ ವ್ಯವಸ್ಥೆ ನಿರಂತರವಾಗಿ ರಕ್ತಪಾತದಿಂದಲೇ ನಡೆದುಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು. ಆದರೆ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದೇ ದೇಶದ ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಸಮಾನತೆ ಮತ್ತು ನ್ಯಾಯ ಸಂವಿಧಾನದ ಅಡಿಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ಇದರೊಂದಿಗೆ ಕಲ್ಯಾಣ ರಾಜ್ಯ ನಿರ್ಮಾಣದ ಗುರಿಗೆ ದಾರಿ ಮಾಡಿಕೊಡಲಾಗುತ್ತಿದೆ.

ತನ್ನ ನೆರೆಹೊರೆಯವರಂತಲ್ಲದೇ, ಭಾರತ ಸ್ವಲ್ಪಮಟ್ಟಿಗೆ ಅತ್ಯತ್ತಮವಾದ ಪ್ರಜಾಪ್ರಭುತ್ವ ಸಂವಿಧಾನ ವ್ಯವಸ್ಥೆ ಉಳಿಸಿಕೊಂಡಿದೆ. ಆದರೆ ಈ ವ್ಯವಸ್ಥೆಯಲ್ಲಿ ತೊಂದರೆಗಳು ಇಲ್ಲ ಎಂದು ಹೇಳುವುದು ಅಸಾಧ್ಯದ ಮಾತಾಗಿದೆ.

ಗಾಂಧಿಯವರು ತಮ್ಮ ಮೂಲ ಕೃತಿಯಾದ ಹಿಂದ್ ಸ್ವರಾಜ್​​ನಲ್ಲಿ ಆಗಿನ ಬ್ರಿಟನ್​ ಸಂಸದೀಯ ವ್ಯವಸ್ಥೆ ಬಗ್ಗೆ ಬಿಚ್ಚಿಡುತ್ತಾ ಎರಡು ಪ್ರಬಲವಾದ ಪದ ಬಳಕೆ ಮಾಡಿದ್ದರು. 'ದುರ್ಬಲ' ಮತ್ತು 'ವೇಶ್ಯೆ' ಈ ಶಬ್ದ ಬಳಕೆ ಮಾಡಲು ಅವರು ಎಂದು ಹಿಂದೇಟು ಸಹ ಹಾಕಲಿಲ್ಲ.

ಸಂಸತ್ತು ಅಥವಾ ಶಾಸಕಾಂಗ ಸದನದಲ್ಲಿರುವ ಸದಸ್ಯರು ದೇಶದ ಅಭಿವೃದ್ಧಿಯ ಹರಿಕಾರರು ಎಂದು ಪರಿಣಗಣಿಸಿಲ್ಲ. ಸಂಸತ್ತು ಕೈಗೊಂಡ ಯಾವುದೇ ನೀತಿ ಜಾರಿಗೊಳ್ಳಬೇಕಾದರೆ ಸಾರ್ವಜನಿಕ ಜಾರಿಗೆ ಬರುತ್ತವೆ. ಆದ್ದರಿಂದ ಪ್ರತಿಯೊಂದು ಬದಲಾವಣೆ ಸಾಮಾನ್ಯ ಒಮ್ಮತದಿಂದ ಸಜ್ಜುಗೊಳ್ಳುತ್ತದೆ ಅಥವಾ ಜನಸಾಮಾನ್ಯರು ನಡೆಸುವ ಹೋರಾಟದ ಫಲವಾಗಿ ಜಾರಿಯಾಗುತ್ತವೆ. ಹೀಗಾಗಿ ಮಹಾತ್ಮ ಗಾಂಧಿಯವರು ಸಂಸತ್ತನ್ನು ದುರ್ಬಲ ಎಂದು ಕರೆದರು. ಕೆಲವೊಮ್ಮೆ ಸಂಸದೀಯ ವ್ಯವಸ್ಥೆ ಜನರಿಗೆ ಭ್ರಮನಿರಸನ ತೋರಿಸುತ್ತದೆ ಹೀಗಾಗಿ ವೇಶ್ಯೆ ಎಂದು ಅವರು ಕರೆದಿದ್ದಾರೆ.

ಇಂತಹ ಬಲವಾದ ಟೀಕೆಗಳ ಹೊರತಾಗಿಯೂ ಗಾಂಧೀಜಿ ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ತಿರಸ್ಕರಿಸಲಿಲ್ಲ. ಸ್ವಾತಂತ್ರ್ಯದ ನಂತರ ಇದೇ ವ್ಯವಸ್ಥೆಯನ್ನು ಸ್ವೀಕರಿಸಿದ ಶಿಷ್ಯರೊಡನೆ ಅವರು ತಮ್ಮ ಸಂಬಂಧವನ್ನು ಕಡಿದುಕೊಂಡಿರಲಿಲ್ಲ. ಸಂಸದೀಯ ವ್ಯವಸ್ಥೆಯ ಇತಿ ಮಿತಿಗಳನ್ನು ಅವರು ತಿಳಿದಿದ್ದರು, ಜೊತೆಗೆ ಇದೊಂದೇ ಪರ್ಯಾಯ ಮಾರ್ಗ ಎಂದು ಕೂಡಾ ಅವರು ಅರಿತಿದ್ದರು.

ಸಮಾಜದೆದುರು ಉತ್ತಮ ವ್ಯಕ್ತಿಯೆಂದು ನಟಿಸುತ್ತಾ, ಒಳಗೊಳಗೆ ಭ್ರಷ್ಟಾಚಾರ, ಅನೈತಿಕತೆ ಹಾಗೂ ದಬ್ಬಾಳಿಕೆ ನಡೆಸುವುದು ಸಂಸದೀಯ ಪ್ರಜಾಪ್ರಭುತ್ವದ ಲಕ್ಷಣವಲ್ಲ. ನಾಗರಿಕ ಸಮಾಜದಲ್ಲಿ ಏಕೀಕೃತ ರಾಜಕೀಯ ಪ್ರಜ್ಞೆಯಿಲ್ಲದಿದ್ದಲ್ಲಿ, ಭ್ರಷ್ಟಾಚಾರವನ್ನು ತಗ್ಗಿಸಲು ಹಾಗೂ ನಾಗರಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಸಾಧ್ಯವಿಲ್ಲ.

ರಾಜ್ಯಗಳನ್ನು ರಚಿಸುವ ಪ್ರಕ್ರಿಯೆಯಲ್ಲಿ, ಸಾಮೂಹಿಕ ವ್ಯವಸ್ಥೆಗಿಂತ ವ್ಯಕ್ತಿಗಳು ಮುಖ್ಯ ಎಂದು ಗಾಂಧೀಜಿ ಪರಿಗಣಿಸಿದ್ದರು. ವ್ಯಕ್ತಿಗಳು ಒಟ್ಟಾಗಿ ಒಂದು ವ್ಯವಸ್ಥೆಯನ್ನು ರೂಪಿಸುತ್ತಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದರು. ಗಾಂಧೀಜಿಯವರು ಮಾನವೀಯತೆಯಲ್ಲಿ ನಂಬಿಕೆ ಇರಿಸಿದ್ದರು. ಹಾಗೂ ಪ್ರತಿಯೊಬ್ಬ ವ್ಯಕ್ತಿಯೂ ಆತ್ಮಸಾಕ್ಷಿ ಹೊಂದಿರಬೇಕು ಎಂದು ಬಯಸಿದ್ದರು. ಆತ್ಮಸಾಕ್ಷಿಯು ವ್ಯಕ್ತಿಯ ಆಲೋಚನೆ ಹಾಗೂ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ಇದರಿಂದ ಪ್ರತಿಯೊಂದು ಕಾರ್ಯವೂ ನೈತಿಕತೆಯ ವ್ಯಾಪ್ತಿಯಲ್ಲಿ ನಡೆಯುತ್ತದೆ. ಇಂತಹ ಆತ್ಮಸಾಕ್ಷಿಯುಳ್ಳ ವ್ಯಕ್ತಿಗಳು ಒಟ್ಟು ಸೇರಿ ಸಮಾಜದ ಅನ್ಯಾಯ ಮತ್ತು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ವ್ಯವಸ್ಥೆ ರೂಪಿಸುತ್ತಾರೆ.

ಜನರಿಂದಾಗಿಯೇ ರಾಜ್ಯಗಳು ನಿರ್ಮಾಣವಾಗಿದ್ದು, ಪ್ರಜಾಪ್ರಭುತ್ವವು ಜನರ ಒಳಿತಿಗಾಗಿರಬೇಕು. ಜನರ ವೈಯಕ್ತಿಕ ಸ್ವಾತಂತ್ರ್ಯವನ್ನು ಕಾಪಾಡುವ ಶಾಂತಿಯುತ ಸಾಮಾಜಿಕ ವ್ಯವಸ್ಥೆಯನ್ನು ಗಾಂಧೀಜಿ ಬೆಂಬಲಿಸಿದ್ದರು.

gandhi
ಗಾಂಧಿ ನಂಬಿರುವ ಸಾಮಾಜಿಕ ವ್ಯವಸ್ಥೆಯು ಹಳ್ಳಿಗಳಲ್ಲಿ ನೆಲೆ ಹೊಂದಿದೆ

ಗಾಂಧಿ ನಂಬಿರುವ ಸಾಮಾಜಿಕ ವ್ಯವಸ್ಥೆಯು ಹಳ್ಳಿಗಳಲ್ಲಿ ತನ್ನ ನೆಲೆ ಹೊಂದಿದೆ. ಹಳ್ಳಿಗಳೇ ಸಮಾಜದ ಆಧಾರವಾಗಿರುವ ಕಾರಣ, ಹಳ್ಳಿಗಳಲ್ಲಿರುವ ಸಮಸ್ಯೆಗಳಾದ ಶಿಕ್ಷಣದ ಕೊರತೆ, ಬಡತನ ಹಾಗೂ ಇತರ ಅಡೆತಡೆಗಳನ್ನು ನೀಗಿಸಿ ಸಹಬಾಳ್ವೆ ಹಾಗೂ ಸೌಹಾರ್ದತೆ ಮೂಡಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಗಾಂಧಿ ತಿಳಿಸಿದ್ದಾರೆ. ನಗರಾಧಾರಿತ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮಹಾತ್ಮಾ ಗಾಂಧಿ ವಿರೋಧಿಸಿದ್ದರು. ಸ್ವಾತಂತ್ರ್ಯ ನಂತರ ಕಾಂಗ್ರೆಸನ್ನು ವಿಸರ್ಜಿಸಿ, ಹಳ್ಳಿಗಳಿಗೆ ಸೇವಕರಾಗಿ ತೆರಳುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಅವರು ಸೂಚನೆ ನೀಡಿದ್ದರು.

ಚುನಾವಣಾ ರಾಜಕೀಯದ ಮಾಲಿನ್ಯತೆಯಿಂದ ಮುಕ್ತವಾಗಿರುವ ಗ್ರಾಮವೇ ಸಾಮಾಜಿಕ ವ್ಯವಸ್ಥೆಯ ಕೆಂದ್ರ ಬಿಂದು ಎಂದು ಗಾಂಧಿ ಯಾವಾಗಲೂ ಹೇಳುತ್ತಿದ್ದರು. ಆ ಮೂಲಕ ಭವಿಷ್ಯದ ಸಮಾಜಕ್ಕೆ ಮಾರ್ಗಸೂಚಿಯನ್ನು ನೀಡುತ್ತಿದ್ದರು. ಇಂದಿನ ರಾಜಕಾರಣಿಗಳಿಗೆ ಇದು ಅಸಾಧ್ಯವೆಂದು ತೋರಬಹುದು; ಆದರೆ ಗಾಂಧೀಜಿಯವರ ಪ್ರಕಾರ ಸಮಾಜದ ಏಳಿಗೆಗೆ ಇದುವೇ ರಹದಾರಿಯಾಗಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.