ಭುವನೇಶ್ವರ (ಒಡಿಶಾ): ಕಟಕ್ ಜಿಲ್ಲೆಯ ಅಥಾಗರ್ ಪ್ರದೇಶದ ಕ್ವಾರಂಟೈನ್ ಕೇಂದ್ರದಲ್ಲಿ ರಕ್ಷಿಸಿದ ಪ್ಯಾಂಗೊಲಿನ್ಗೆ(ಚಿಪ್ಪು ಹಂದಿ) ಕೋವಿಡ್-19 ಪರೀಕ್ಷೆ ನಡೆಸಲು ಒಡಿಶಾದ ವನ್ಯಜೀವಿ ವಿಭಾಗ ನಿರ್ಧರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
![Pangolin rescued from quarantine centre in Odisha](https://etvbharatimages.akamaized.net/etvbharat/prod-images/od-pangolianrescued-avo-7204486_26052020201708_2605f_1590504428_796.jpg)
ರಾಜ್ಯದಲ್ಲಿ ಕೋವಿಡ್-19 ಪರೀಕ್ಷೆಗೆ ಪ್ಯಾಂಗೊಲಿನ್‌ನ ಸ್ವ್ಯಾಬ್ ಮಾದರಿಗಳನ್ನು ಕಳುಹಿಸುತ್ತಿರುವುದು ಇದೇ ಮೊದಲು. ಅಥಾಗರ್ ಅರಣ್ಯ ವಿಭಾಗದ ತಂಡವು ಸೋಮವಾರ ರಾತ್ರಿ ಬಾರಂಬಾ ಶ್ರೇಣಿಯ ಮಾಹುಲಿಯಾದಲ್ಲಿರುವ ಕ್ವಾರಂಟೈನ್ ಕೇಂದ್ರದಿಂದ ಹೆಣ್ಣು ಪ್ಯಾಂಗೊಲಿನ್ ಅನ್ನು ರಕ್ಷಿಸಿದೆ.
ಮಾಹುಲಿಯಾ ಗ್ರಾಮದ ಮುಖ್ಯಸ್ಥನಿಂದ ಮಾಹಿತಿ ಪಡೆದ ನಂತರ ಅರಣ್ಯ ಅಧಿಕಾರಿಗಳು ಕ್ವಾರಂಟೈನ್ ಕೇಂದ್ರದಿಂದ ಪ್ಯಾಂಗೊಲಿನ್ ವಶಕ್ಕೆ ಪಡೆದಿದ್ದಾರೆ. ಕ್ವಾರಂಟೈನ್ ಕೇಂದ್ರದಿಂದ ಪ್ಯಾಂಗೊಲಿನ್ ರಕ್ಷಿಸಲಾಗಿರುವುದರಿಂದ, ಕೊರೊನಾ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಥಾಗರ್ ವಿಭಾಗೀಯ ಅರಣ್ಯ ಅಧಿಕಾರಿ ಸಾಸ್ಮಿತಾ ಲೆಂಕಾ ಮಾಹಿತಿ ನೀಡಿದ್ದಾರೆ.