ಇಸ್ಲಾಮಾಬಾದ್: ಪಾಕಿಸ್ತಾನದ ಜನತೆ ಕೊರೊನಾ ಎದುರಿಸುವಷ್ಟು ರೋಗ ನಿರೋಧಕ ಶಕ್ತಿಯಿಲ್ಲ, ಆದ್ದರಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಎಚ್ಚರಿಕೆ ನೀಡಿದ್ದಾರೆ.
ಲಾಹೋರ್ಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡಿದ ಅವರು ಪಾಕಿಸ್ತಾನಕ್ಕೆ ಕೊರೊನಾ ಸೋಂಕನ್ನು ಎದುರಿಸುವ ಶಕ್ತಿಯಿದೆ ಎಂದು ಭರವಸೆ ನೀಡಿದ್ದಾರೆ. ಸರ್ಕಾರ ಕೊರೊನಾ ನಿವಾರಣೆಗೆ ಬೇಕಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ನಿನ್ನೆಯಷ್ಟೇ ಟ್ವೀಟ್ ಮಾಡಿದ್ದ ಅವರು ಶೈಕ್ಷಣಿಕ ಸಂಸ್ಥೆಗಳು, ಮಾಲ್ಗಳು, ಸಾರ್ವಜನಿಕ ಸ್ಥಳಗಳನ್ನು ಬಂದ್ ಮಾಡಿ ಕೊರೊನಾ ವಿರುದ್ಧ ಹೋರಾಟಕ್ಕೆ ಸಹಕಾರ ನೀಡಬೇಕೆಂದು ಸೂಚಿಸಿದ್ದರು.
-
We have locked down educational institutions, Malls, marriage halls, restaurants & other places where public congregates. But, to stop the devastation of the lockdown we have kept our agri sector open & now we are opening up our construction sector.
— Imran Khan (@ImranKhanPTI) April 4, 2020 " class="align-text-top noRightClick twitterSection" data="
">We have locked down educational institutions, Malls, marriage halls, restaurants & other places where public congregates. But, to stop the devastation of the lockdown we have kept our agri sector open & now we are opening up our construction sector.
— Imran Khan (@ImranKhanPTI) April 4, 2020We have locked down educational institutions, Malls, marriage halls, restaurants & other places where public congregates. But, to stop the devastation of the lockdown we have kept our agri sector open & now we are opening up our construction sector.
— Imran Khan (@ImranKhanPTI) April 4, 2020
ಶನಿವಾರದ ಅಂಕಿ ಅಂಶಗಳಂತೆ ಪಾಕಿಸ್ತಾನದಲ್ಲಿ 2818 ಸೋಂಕಿತರಿದ್ದು, 41 ಮಂದಿ ಬಲಿಯಾಗಿದ್ದಾರೆ. ಪಂಜಾಬ್ನಲ್ಲಿ 1131, ಸಿಂಧ್ನಲ್ಲಿ 839, ಖೈಬರ್-ಪಖ್ತುಂಖ್ವಾದಲ್ಲಿ 383 , ಬಲೂಚಿಸ್ತಾನದಲ್ಲಿ 175, ಗಿಲ್ಗಿಟ್ ಬಾಲ್ಟಿಸ್ತಾನದಲ್ಲಿ 193, ಇಸ್ಲಾಮಾಬಾದ್ನಲ್ಲಿ 75 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಪಾಕಿಸ್ತಾನ ಪಂಜಾಬ್ನಲ್ಲಿ ಸೋಂಕಿತರ ಸಂಖ್ಯೆ ಸಾವಿರ ಗಡಿ ದಾಟಿದೆ. ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ವಿಶೇಷ ಆಸ್ಪತ್ರೆಗಳನ್ನು ಕೂಡಾ ಸಿದ್ಧಪಡಿಸಲಾಗಿದೆ. ಏಪ್ರಿಲ್ ಅಂತ್ಯದ ವೇಳೆಗೆ ಪಾಕ್ನ ಒಟ್ಟು ಸೋಂಕಿತರ ಸಂಖ್ಯೆ 50 ಸಾವಿರ ಮೀರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.