ಶ್ರೀನಗರ: ಗಡಿ ಭಾಗದಲ್ಲಿ ಉದ್ವಿಗ್ನತೆ ಹೆಚ್ಚಿಸುವ ಪ್ರಯತ್ನದಲ್ಲಿರುವ ಪಾಕಿಸ್ತಾನ ಇದೀಗ ಮತ್ತೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಬಾಲಕೋಟ್ ಸೆಕ್ಟರ್ನಲ್ಲಿ ಕದನ ವಿರಾಮ ಉಲ್ಲಂಘಿಸಿದೆ.
ಇಂದು ಬೆಳಗ್ಗೆ 6.30 ರಿಂದ ಬಾಲಕೋಟ್ ಸೆಕ್ಟರ್ನಲ್ಲಿ ಗಡಿ ನಿಯಂತ್ರಣ ರೇಖೆ ಉದ್ದಕ್ಕೂ (ಎಲ್ಒಸಿ) ಪಾಕ್ ಪಡೆ ಲಘು ಶಸ್ತ್ರಾಸ್ತ್ರದೊಂದಿಗೆ ಅಪ್ರಚೋದಿತ ಗುಂಡಿನ ದಾಳಿ ನಡೆಸಲು ಪ್ರಾರಂಭಿಸಿದೆ. ಭಾರತೀಯ ಪಡೆಯೂ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಆ. 6 ರಂದು ಮಾಂಧರ್ ಸೆಕ್ಟರ್ನಲ್ಲಿ ಹಾಗೂ ಆ. 5 ರಂದು ಪೂಂಚ್ ಜಿಲ್ಲೆಯ ಮಂಕೋಟೆ ಸೆಕ್ಟರ್ನಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿತ್ತು. ಪರಿಣಾಮ ಮಂಕೋಟ್ ವಲಯದ ಅನೇಕ ಮನೆಗಳಿಗೆ ಹಾನಿಯಾಗಿತ್ತು.
ಈ ವರ್ಷದ ಆರಂಭದಿಂದಲೂ ಪಾಕ್ ಪಡೆ 2,720 ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿದ್ದು, 21 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ 94 ಮಂದಿ ಗಾಯಗೊಂಡಿದ್ದಾರೆ.