ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ (ಐಬಿ) ಉದ್ದಕ್ಕೂ ಪಾಕಿಸ್ತಾನ ರೇಂಜರ್ಸ್ ಅಪ್ರಚೋದಿತ ಗುಂಡಿನ ದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂಘನೆ ಮಾಡಿದೆ.
ದಾಳಿಯಲ್ಲಿ ಭಾರತೀಯ ಪ್ರಜೆಗಳಿಗೆ ಮತ್ತು ಸೈನಿಕರಿಗೆ ಯಾವುದೇ ಹಾನಿಯಾಗಿಲ್ಲ. ಗಡಿಯುದ್ದಕ್ಕೂ ಶುಕ್ರವಾರ ರಾತ್ರಿ 9: 45 ರ ಸುಮಾರಿಗೆ ಹಿರಾನಗರ್ ಸೆಕ್ಟರ್‌ನ ಚಂದ್ವಾ, ಮಾಯಾರಿ ಮತ್ತು ಫಕೀರದಲ್ಲಿ ಗುಂಡಿನ ದಾಳಿ ಪ್ರಾರಂಭವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿ ಭದ್ರತಾ ಪಡೆ ಕೂಡ ಇದಕ್ಕೆ ಸರಿಯಾದ ಪ್ರತ್ಯುತ್ತರ ನೀಡಿದೆ ಶನಿವಾರ ಮುಂಜಾನೆ 4: 15 ರವರೆಗೆ ಗುಂಡಿನ ಚಕಮಕಿ ಮುಂದುವರೆಯಿತು ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.