ಇಸ್ಲಾಮಾಬಾದ್: ಪಾಕ್‌ನಲ್ಲಿರುವ ಸಿಖ್ಖರ ಪವಿತ್ರ ದರ್ಬಾರ್ ಸಾಹಿಬ್ ಗುರುದ್ವಾರದ ಕರ್ತಾರ್ಪುರ ಕಾರಿಡಾರ್ ಯೋಜನೆ ಉದ್ಘಾಟನೆ ನವೆಂಬರ್ 9ರಂದು ನಡೆಯಲಿದ್ದು, ಅದಕ್ಕಾಗಿ ಪಾಕ್ನಿಂದ ಪ್ರಧಾನಿ ನರೇಂದ್ರ ಮೋದಿ ಬದಲಿಗೆ ದೇಶದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ಗೆ ಆಹ್ವಾನ ನೀಡಲು ಮುಂದಾಗಿದೆ.
ಕರ್ತಾರ್ಪುರ ಕಾರಿಡಾರ್ ಯೋಜನೆಯಲ್ಲಿ ಭಾರತದೊಂದಿಗೆ ಹೊಸ ಗೇಮ್ ಶುರು ಮಾಡಿರುವ ಪಾಕಿಸ್ತಾನ, ಇದೀಗ ಪ್ರಧಾನಿ ನರೇಂದ್ರ ಮೋದಿ ಬದಲು ಮಾಜಿ ಪ್ರಧಾನಿಗೆ ಆಹ್ವಾನ ನೀಡುತ್ತಿರುವುದಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಹೇಳಿಕೆ ನೀಡಿದ್ದು, ಆದಷ್ಟು ಬೇಗ ಅವರಿಗೆ ಇದಕ್ಕೆ ಸಂಬಂಧಿಸಿದಂತೆ ಆಹ್ವಾನ ಕಳುಹಿಸುವುದಾಗಿ ತಿಳಿಸಿದ್ದಾರೆ. ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಭಾರತದಿಂದ ಹೆಚ್ಚಿನ ಪ್ರಮಾಣದಲ್ಲಿ ಸಿಖ್ಖರು ಭೇಟಿ ನೀಡುವ ಕಾರಣ, ಮಾಜಿ ಪ್ರಧಾನಿ ಸಿಂಗ್ಗೆ ಆಹ್ವಾನ ನೀಡಿ ಇಲ್ಲೂ ಸಹ ಗೇಮ್ ಪ್ಲಾನ್ ಮಾಡಲು ಪಾಕ್ ಮುಂದಾಗಿದೆ.
-
Pakistan Foreign Minister Shah Mehmood Qureshi: We would like to extend an invitation to former Indian PM Manmohan Singh for the inauguration function of Kartarpur Corridor. He also represents the Sikh community. We will also send him a formal invitation. pic.twitter.com/ehcjBQxp8L
— ANI (@ANI) September 30, 2019 " class="align-text-top noRightClick twitterSection" data="
">Pakistan Foreign Minister Shah Mehmood Qureshi: We would like to extend an invitation to former Indian PM Manmohan Singh for the inauguration function of Kartarpur Corridor. He also represents the Sikh community. We will also send him a formal invitation. pic.twitter.com/ehcjBQxp8L
— ANI (@ANI) September 30, 2019Pakistan Foreign Minister Shah Mehmood Qureshi: We would like to extend an invitation to former Indian PM Manmohan Singh for the inauguration function of Kartarpur Corridor. He also represents the Sikh community. We will also send him a formal invitation. pic.twitter.com/ehcjBQxp8L
— ANI (@ANI) September 30, 2019
ನವೆಂಬರ್ನಲ್ಲಿ ಗುರು ನಾನಕ್ 550ನೇ ಜಯಂತಿ ಆಚರಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ನವೆಂಬರ್ 9ರಂದು ಕರ್ತಾರ್ಪುರದ ಕಾರಿಡಾರ್ ಯೋಜನೆ ಉದ್ಘಾಟನೆ ನಡೆಯಲಿದೆ. ಕರ್ತಾರ್ಪುರ ಕಾರಿಡಾರ್ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಪಾಕಿಸ್ತಾನದ ಅಧಿಕಾರಿಗಳು ನಡುವೆ ಮೇಲಿಂದ ಮೇಲೆ ಅನೇಕ ಸಲ ಸಭೆ ನಡೆದಿವೆ.
ಆಹ್ವಾನ ಒಪ್ಪಲ್ಲ ಎಂದ ಕಾಂಗ್ರೆಸ್
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ಗೆ ಪಾಕ್ ಆಹ್ವಾನ ನೀಡಲು ಮುಂದಾಗುವ ವಿಷಯ ಗೊತ್ತಾಗುತ್ತಿದ್ದಂತೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದ್ದು, ಪಾಕ್ ನೀಡುವ ಆಮಂತ್ರಣವನ್ನ ಮಾಜಿ ಪ್ರಧಾನಿ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದೆ ಎನ್ನಲಾಗಿದೆ. ಈ ಮೂಲಕ ವಿವಾದದಿಂದ ಹೊರಗುಳಿಯಲು ಕಾಂಗ್ರೆಸ್ ಎಚ್ಚರಿಕೆ ಹೆಜ್ಜೆ ಇಟ್ಟಿದೆ ಎಂದು ತಿಳಿದು ಬಂದಿದೆ.