ETV Bharat / bharat

ಬಾಲಾಕೋಟ್​ ಏರ್​​ಸ್ಟ್ರೈಕ್​: ಪಾಕಿಸ್ತಾನವನ್ನು ಇನ್ನಿಲ್ಲದಂತೆ ಕಾಡ್ತಿರೋ ವಿಷ್ಯ ಏನು ಗೊತ್ತೇ?

ಪಾಕ್​ ವಾಯುಪಡೆಯಲ್ಲಿರುವ ಎಫ್​-16 ಯುದ್ಧ ವಿಮಾನಗಳನ್ನು ತನ್ನ ನೆಲೆಯಿಂದ ತೆಗೆದುಕೊಂಡು ಸರ್ಗೋದ, ಪಂಜಾಬ್ ಹಾಗೂ ಸಿಂಧ್​ ಭಾಗದಲ್ಲಿ ನಿಯೋಜಿಸಿದ್ದು ಪತ್ತೆಯಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

author img

By

Published : May 18, 2019, 10:24 PM IST

ಪಾಕ್

ನವದೆಹಲಿ: ಬಾಲಾಕೋಟ್​ನಲ್ಲಿ ಜೈಷ್​-ಇ-ಮೊಹಮ್ಮದ್​ನ (ಜೆಇಎಂ) ಉಗ್ರ ಸಂಘಟನೆ ತರಬೇತಿ ಶಿಬಿರದ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿ 75 ದಿನ ಕಳೆದರೂ ಪಾಕಿಸ್ತಾನಕ್ಕೆ ತನ್ನ ಫೈಟರ್ ವಿಮಾನ ಎಫ್​-16 ಸುರಕ್ಷತೆಯ ಕುರಿತು ಇನ್ನೂ ಚಿಂತೆ ಇದೆ.

ಪಾಕ್​ ವಾಯು ಪಡೆಯಲ್ಲಿರುವ ಎಫ್​-16 ಯುದ್ಧ ವಿಮಾನಗಳನ್ನು ತನ್ನ ನೆಲೆಯಿಂದ ತೆಗೆದುಕೊಂಡು ಸರ್ಗೋದ, ಪಂಜಾಬ್ ಹಾಗೂ ಸಿಂಧ್​ ಭಾಗದಲ್ಲಿ ನಿಯೋಜಿಸಿದ್ದು ಪತ್ತೆಯಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಭಾರತದಿಂದ ಯಾವುದೇ ಸಂಭವನೀಯ ದಾಳಿಯನ್ನು ತಡೆಯಲು, ಇಲ್ಲವೇ ಎದುರಾಗಬಹುದಾದ ಯಾವುದೇ ರೀತಿಯ ಸಂಕಷ್ಟವನ್ನು ತಪ್ಪಿಸಲು ಇವುಗಳನ್ನು ನಿಯೋಜಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಭಾರತದ ದಾಳಿಯನ್ನು ಸಮರ್ಪಕವಾಗಿ ಎದುರಿಸಲು ಪಾಕ್​ ವಿಫಲವಾದ ಬಳಿಕ ಲೈನ್ ಆಫ್ ಕಂಟ್ರೋಲ್​ (ಎಲ್​ಒಸಿ) ಹಾಗೂ ಅಂತಾರಾಷ್ಟ್ರೀಯ ಗಡಿ ರೇಖೆ (ಐಬಿ) ಬಳಿ ಏರ್‌ಫೋರ್ಸ್​ ಪಡೆಗಳನ್ನು ನಿಯೋಜಿಸಲಾಗುತ್ತಿದೆ ಎಂಬ ಮಾಹಿತಿ ದೊರೆತಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.