ನವದೆಹಲಿ: ಪುಲ್ವಾಮ ದಾಳಿ ವಿಚಾರವಾಗಿ ಭಾರತ - ಪಾಕ್ ನಡುವೆ ಸಂಘರ್ಷ ನಡೆಯುತ್ತಿದ್ದರೂ, ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ಮತ್ತೆ ಅಪ್ರಚೋದಿತ ದಾಳಿ ಮುಂದುವರೆದಿದೆ.
Jammu & Kashmir: Ceasefire violation by Pakistan in Nowshera sector of Rajouri district at 4:30 pm today. pic.twitter.com/Ighs2qF6tr
— ANI (@ANI) February 23, 2019 " class="align-text-top noRightClick twitterSection" data="
">Jammu & Kashmir: Ceasefire violation by Pakistan in Nowshera sector of Rajouri district at 4:30 pm today. pic.twitter.com/Ighs2qF6tr
— ANI (@ANI) February 23, 2019Jammu & Kashmir: Ceasefire violation by Pakistan in Nowshera sector of Rajouri district at 4:30 pm today. pic.twitter.com/Ighs2qF6tr
— ANI (@ANI) February 23, 2019
ಇಂದು ಸಂಜೆ 4:30ಕ್ಕೆ ನೌಶೇರಾ ಭಾಗದ ಗಡಿ ನಿಯಂತ್ರಣ ರೇಖೆ ಬಳಿ ಪಾಕ್ ಕದನ ವಿರಾಮ ಉಲ್ಲಂಘಿಸಿದೆ ಎಂದು ತಿಳಿದುಬಂದಿದೆ. ಪಾಕ್ ಪಡೆ ಅಪ್ರಚೋದಿತವಾಗಿ ಶೆಲ್ ಹಾಗೂ ಗುಂಡಿನ ದಾಳಿ ನಡೆಸಿದೆ. ಭಾರತೀಯ ಸೇನೆ ಸಹ ಇದಕ್ಕೆ ಪ್ರತ್ಯುತ್ತರ ನೀಡಿದೆ ಎಂದು ಭದ್ರತಾ ವಕ್ತಾರರು ತಿಳಿಸಿದ್ದಾರೆ.
ಎರಡೂ ಕಡೆಯಿಂದ ಗುಂಡಿನ ಚಕಮಕಿ ನಡೆದಿದ್ದು, ಸಾವು-ನೋವುಗಳ ಬಗ್ಗೆ ವರದಿಯಾಗಿಲ್ಲ.
ಗುರುವಾರ ಸಹ ಪೂಂಚ್ ಭಾಗದಲ್ಲಿ ಪಾಕ್ನಿಂದ ಗುಂಡಿನ ದಾಳಿ ನಡೆದಿತ್ತು. ಮಂಗಳವಾರ, ಬುಧವಾರ ಸಹ ಇಂತಹುದೇ ದಾಳಿಗಳು ನಡೆದಿದ್ದವು.
ಪುಲ್ವಾಮ ದಾಳಿಯಲ್ಲಿ 45ಕ್ಕೂ ಹೆಚ್ಚು ಸಿಆರ್ಪಿಎಫ್ ಯೋಧರು ಹುತಾತ್ಮರಾದ ನಂತರವೂ ಪಾಕ್ನಿಂದ ನಿರಂತರವಾಗಿ ಅಪ್ರಚೋದಿತ ದಾಳಿ ನಡೆಯುತ್ತಲೇ ಇದೆ ಎಂದು ವರದಿಯಾಗಿದೆ.