ಲಾಹೋರ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಹಿಂದೂಗಳ ಪವಿತ್ರ ಸ್ಥಳ ಶಾರದಾ ಪೀಠಕ್ಕೆ ಕಾರಿಡಾರ್ ಕಲ್ಪಿಸಲು ಪಾಕಿಸ್ತಾನ ಹಸಿರು ನಿಶಾನೆ ತೋರಿಸಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
Pakistan media: Pakistan gives green signal for the opening of Sharda Peeth Corridor. pic.twitter.com/gTWSjnoL47
— ANI (@ANI) March 25, 2019 " class="align-text-top noRightClick twitterSection" data="
">Pakistan media: Pakistan gives green signal for the opening of Sharda Peeth Corridor. pic.twitter.com/gTWSjnoL47
— ANI (@ANI) March 25, 2019Pakistan media: Pakistan gives green signal for the opening of Sharda Peeth Corridor. pic.twitter.com/gTWSjnoL47
— ANI (@ANI) March 25, 2019
ಈಗಾಗಲೇ ಭಾರತೀಯ ವಿದೇಶಾಂಗ ಸಚಿವಾಲಯ ಶಾರದಾ ಪೀಠಕ್ಕೆ ಸಂಪರ್ಕ ಕಲ್ಪಿಸಲು ಸಾಕಷ್ಟು ಬಾರಿ ಪ್ರಸ್ತಾವನೆ ಸಲ್ಲಿಸಿತ್ತು. ಇದನ್ನು ಸದ್ಯ ಪರಿಗಣಿಸಿರುವ ಇಮ್ರಾನ್ ಖಾನ್ ಸರ್ಕಾರ ಕೆಲ ದಿನಗಳಲ್ಲಿ ಈ ಕುರಿತಾಗಿ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.
ಶಾರದಾ ಪೀಠ ಕುಪ್ವಾರದಿಂದ 22 ಕಿ.ಮೀ ದೂರದಲ್ಲಿದೆ. ಈ ಪೀಠ 5,000 ಹಳೆಯ ಇತಿಹಾಸ ಹೊಂದಿದೆ. ಅಶೋಕ ಮಹಾರಾಜ ಇದನ್ನು ಸ್ಥಾಪನೆ ಮಾಡಿದ ಎನ್ನುವ ಐತಿಹ್ಯ ಇದೆ.
1947ರ ತನಕ ಹಿಂದೂಗಳು ಈ ಪೀಠಕ್ಕೆ ಭೇಟಿ ನೀಡುತ್ತಿದ್ದರು. ಆ ಬಳಿಕ ಈ ಜಾಗ ಪಾಕಿಸ್ತಾನ ಆಕ್ರಮಿಸಿಕೊಂಡ ನಂತರ ಹಿಂದೂಗಳ ಭೇಟಿ ನಿಂತು ಹೋಗಿತ್ತು.