ಪೂಂಚ್(ಜಮ್ಮು): ಗಡಿಯಲ್ಲಿ ಪಾಕ್ ಪುಂಡಾಟ ಮುಂದುವರೆದಿದ್ದು ಮತ್ತೆ ಕದನ ವಿರಾಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ.
-
J-K: Pak violates ceasefire in Poonch's Krishna Ghati sector
— ANI Digital (@ani_digital) January 2, 2020 " class="align-text-top noRightClick twitterSection" data="
Read @ANI Story | https://t.co/obr78bYrkp pic.twitter.com/QNoSxsqm15
">J-K: Pak violates ceasefire in Poonch's Krishna Ghati sector
— ANI Digital (@ani_digital) January 2, 2020
Read @ANI Story | https://t.co/obr78bYrkp pic.twitter.com/QNoSxsqm15J-K: Pak violates ceasefire in Poonch's Krishna Ghati sector
— ANI Digital (@ani_digital) January 2, 2020
Read @ANI Story | https://t.co/obr78bYrkp pic.twitter.com/QNoSxsqm15
ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ ಸೆಕ್ಟರ್ ಬಳಿಯಿರುವ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಕದನ ವಿರಾಮ ಉಲ್ಲಂಘಿಸಿದ್ದು, ಸೇನೆಯನ್ನು ಗುರಿಯಾಗಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ.
ಬಳಿಕ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದ್ದು, ರಾತ್ರಿ 11 ಗಂಟೆವರೆಗೂ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.