ಇಸ್ಲಾಮಾಬಾದ್(ಪಾಕಿಸ್ತಾನ) : ಭಾರತವನ್ನು ಯುದ್ಧ ಮಾಡಿ ಸೋಲಿಸ್ತೇವೆ ಎಂದು ಬಾಯಿ ಬಡಿದುಕೊಳ್ಳುತ್ತಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಇದೀಗ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.
ಒಂದು ವೇಳೆ ನಾವು ಭಾರತದೊಂದಿಗೆ ಸಾಂಪ್ರದಾಯಿಕ ಯುದ್ಧಕ್ಕಿಳಿದರೆ ಖಂಡಿತ ಸೋಲುತ್ತೇವೆ ಎನ್ನುವ ಮೂಲಕ ಕುತೂಹಲ ಕೆರಳಿಸಿದ್ದಾರೆ. ನೆರೆಹೊರೆಯ ರಾಷ್ಟ್ರಗಳಾದ ಭಾರತ-ಪಾಕಿಸ್ತಾನ ಬಳಿ ಪರಿಣಾಮಕಾರಿಯಾದ ಪರಮಾಣು ಶಸ್ತ್ರಾಸ್ತ್ರಗಳಿವೆ ಪಾಕ್ ಪ್ರಧಾನಿ ತಿಳಿಸಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಇಮ್ರಾನ್ ಖಾನ್, ಯಾವಾಗ ಎರಡು ಸುಸಜ್ಜಿತ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಬಲಿಷ್ಠ ರಾಷ್ಟ್ರಗಳು ಯುದ್ಧಕ್ಕಿಳಿಯುತ್ತವೆಯೋ ಆಗ ಅವು ಪರಮಾಣು ಯುದ್ಧದೊಂದಿಗೆ ಕೊನೆಗೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ. ಇನ್ನು ಸಾಂಪ್ರಾದಾಯಿಕ ಯುದ್ದದಲ್ಲಿ ನಾವೂ ಸೋತರೂ ಪರಮಾಣು ಯುದ್ದದಲ್ಲಿ ಸಾಯುವರೆಗೂ ಹೋರಾಡುವುದಾಗಿ ಇಮ್ರಾನ್ ಸಂದರ್ಶನದಲ್ಲಿ ತಿಳಿಸಿದ್ದಾರೆ. ಭಾರತದೊಂದಿಗೆ ಪರಮಾಣು ಯುದ್ಧ ಮಾಡುವ ಸಾಧ್ಯತೆ ಬಗ್ಗೆ ಇಮ್ರಾನ್ ಪರೋಕ್ಷವಾಗಿ ಯದ್ದೋನ್ಮಾದ ತೋರಿಸಿದ್ದಾರೆ.