ETV Bharat / bharat

ಡ್ರಗ್ಸ್ ಸಾಗಣೆ: ಮೂವರ ಬಂಧನ, 74 ಲಕ್ಷ ರೂ. ನಗದು ವಶ - 74 ಲಕ್ಷಕ್ಕೂ ಹೆಚ್ಚಿನ ಹಣ ವಶಕ್ಕೆ ಪಡೆದ ಅಸ್ಸಾಂ ಪೊಲೀಸ್

ಡ್ರಗ್ಸ್ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸೋಂ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, 74 ಲಕ್ಷಕ್ಕೂ ಹೆಚ್ಚಿನ ನಗದು ವಶಪಡಿಸಿಕೊಂಡ ಘಟನೆ ನಡೆದಿದೆ.

Arrest
Arrest
author img

By

Published : Jul 29, 2020, 1:41 PM IST

ಗುವಾಹಟಿ /ಅಸ್ಸೋಂ: ಮಾದಕದ್ರವ್ಯ ಸಾಗಣೆಗೆ ಸಂಬಂಧಿಸಿದಂತೆ ಅಸ್ಸೋಂ ಪೊಲೀಸರು 74 ಲಕ್ಷಕ್ಕೂ ಹೆಚ್ಚಿನ ಹಣವನ್ನು ವಶಪಡಿಸಿಕೊಂಡು ಮೂವರನ್ನು ಬಂಧಿಸಿರುವ ಘಟನೆ ನಿನ್ನೆ ಸೋಲಾಪರದಲ್ಲಿ ನಡೆದಿದೆ.

Arrest
ಡ್ರಗ್​ ಸಾಗಣೆ: 74 ಲಕ್ಷ ರೂ ನಗದು ವಶ

ಸಂಗೀತಾ ಲೈಶನ್‌ಬಾಮ್, ಶ್ಯಾಮ್ ಲೈಥಂಗ್‌ಬಾಮ್ ಮತ್ತು ಥಂಗ್‌ಕೋಸತ್‌ ಬಂಧಿತ ಆರೋಪಿಗಳು. ಅಕ್ರಮವಾಗಿ ಡ್ರಗ್ಸ್ ಸಾಗಣೆ ಮಾಡುತ್ತಿರುವ ಕುರಿತು ಶಂಕೆ ವ್ಯಕ್ತವಾದ ಹಿನ್ನೆಲೆ ಸೋಲಾಪರದ ಕಲಾಚಿನಿ ಅಪಾರ್ಟ್​​​ಮೆಂಟ್​​​ನ ನಾಲ್ಕನೇ ಮಹಡಿಗೆ ಪೊಲೀಸರು ದಿಢೀರ್ ಭೇಟಿ ನೀಡಿ ಕಾರ್ಯಾಚರಣೆ ನಡೆಸಿ 74,05,600( 74 ಲಕ್ಷ) ರೂ. ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮಾದಕ ದ್ರವ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಸಂಗೀತಾ ಲೈಶನ್‌ಬಾಮ್‌ಳನ್ನು ಈ ಹಿಂದೆ ಬಸಿಸ್ತಾದಲ್ಲಿ ಸೆಕ್ಷನ್ 22ರ ಅಡಿ ಬಂಧಿಸಲಾಗಿತ್ತು. ಈ ಕುರಿತು ಈಗಾಗಲೇ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.