ETV Bharat / bharat

ನಿಸರ್ಗದ ಅಬ್ಬರ: ಗುಜರಾತ್​ ಕರಾವಳಿ ಪ್ರದೇಶದಿಂದ 50 ಸಾವಿರ ಜನ ಶಿಫ್ಟ್​​ - ಗುಜರಾತ್​ ಕರಾವಳಿ ಪ್ರದೇಶದಿಂದ 50000 ಜನ ಶಿಫ್ಟ್​​

ನಿಸರ್ಗ ಚಂಡಮಾರುತದ ಅಬ್ಬರದಾಟ ಜೋರಾಗುತ್ತಿರುವ ಹಿನ್ನೆಲೆ, ದಕ್ಷಿಣ ಗುಜರಾತ್‌ನ ಕರಾವಳಿ ಭಾಗದಲ್ಲಿ ವಾಸಿಸುತ್ತಿದ್ದ 50 ಸಾವಿರ ಜನರು ಹಾಗೂ ದಮನ್​​ನಲ್ಲಿ ವಾಸಿಸುತ್ತಿದ್ದ 4000 ಮಂದಿಯನ್ನು ಕಂದಾಯ ಇಲಾಖೆಯು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ.

cyclone
ನಿಸರ್ಗ ಚಂಡಮಾರುತ
author img

By

Published : Jun 3, 2020, 6:01 PM IST

ಅಹಮದಾಬಾದ್ (ಗುಜರಾತ್): ನಿಸರ್ಗ ಚಂಡಮಾರುತದ ಅಬ್ಬರದಿಂದಾಗಿ ದಕ್ಷಿಣ ಗುಜರಾತ್‌ನ ಕರಾವಳಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸುಮಾರು 50,000 ಜನರು ಮತ್ತು ಅಲ್ಲೇ ಸಮೀಪದಲ್ಲಿರುವ ಕೇಂದ್ರಾಡಳಿತ ಪ್ರದೇಶವಾದ ದಮನ್‌ನಿಂದ ಸುಮಾರು 4,000 ನಿವಾಸಿಗಳನ್ನು ಮುಂಜಾಗ್ರತ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರಾವಳಿ ಪ್ರದೇಶದಲ್ಲಿ ತನ್ನ ಅಬ್ಬರದಾಟ ಮುಂದುವರಿಸಿರುವ ನಿಸರ್ಗ ಚಂಡಮಾರುತ, ಗುಜರಾತ್​ನ ದಕ್ಷಿಣ ಭಾಗ ಹಾಗೂ ದಮನ್​​ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳು ಹೆಚ್ಚಿರುವುದರಿಂದ ಗುಜರಾತ್‌ನ ಕಡಲ ತೀರಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಜನರಿಗೆ ತಮ್ಮ ಮನೆಯೊಳಗೆ ಉಳಿಯುವಂತೆ ಸೂಚನೆ ನೀಡಲಾಗಿದೆ.

ದಕ್ಷಿಣ ಗುಜರಾತ್ ಭಾಗದ ಕರಾವಳಿಯ ಸಮೀಪ ವಾಸಿಸುತ್ತಿರುವ 50,000 ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಇನ್ನೂ ಹೆಚ್ಚಿನ ಜನರನ್ನು ಸ್ಥಳಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಂಕಜ್ ಕುಮಾರ್ ತಿಳಿಸಿದ್ದಾರೆ.

ನಿಸರ್ಗ ಚಂಡಮಾರುತವು ಗುಜರಾತಿನ ಸೂರತ್​ ಮತ್ತು ಭರುಚ್​​ ಭಾಗಗಳ ನಂತರ ವಲ್ಸಾದ್ ಮತ್ತು ನವಸಾರಿ ಜಿಲ್ಲೆಗಳ ಮೇಲೆ ಗರಿಷ್ಠ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಚಂಡಮಾರುತ ದಕ್ಷಿಣ ಗುಜರಾತ್ ಮತ್ತು ಉತ್ತರ ಮಹಾರಾಷ್ಟ್ರದ ನಡುವೆ ಅಪ್ಪಳಿಸಿದಾಗ ವಲ್ಸಾದ್ ಮತ್ತು ನವಸಾರಿ ಜಿಲ್ಲೆಯಲ್ಲಿ ಇದರ ಗಾಳಿಯ ವೇಗ 100 ರಿಂದ 110 ಕಿ.ಮೀ ವೇಗದಲ್ಲಿ ಇರಲಿದೆ ಎಂದು ನಿರೀಕ್ಷಿಸಲಾಗಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಮೀನುಗಾರರನ್ನು ಈಗಾಗಲೇ ಸಮುದ್ರದಿಂದ ಹಿಂದಕ್ಕೆ ಕರೆಸಿಕೊಳ್ಳಲಾಗಿದೆ. ಸೀಗಡಿ ಮೀನಿನ ಕೃಷಿಕರ ಜೊತೆಗೆ ಸಾಲ್ಟ್ ಪ್ಯಾನ್ ಕಾರ್ಮಿಕರನ್ನು ಸಹ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಪಂಕಜ್​ ಕುಮಾರ್​ ಕುಮಾರ್ ಮಾಹಿತಿ ನೀಡಿದ್ದಾರೆ.

ಇದಲ್ಲದೆ, ಪಕ್ಕದ ಕೇಂದ್ರಾಡಳಿತ ಪ್ರದೇಶವಾದ ದಮನ್‌ನಲ್ಲಿ ಸಮುದ್ರ ತೀರದ ಬಳಿ ವಾಸಿಸುತ್ತಿರುವ ಸುಮಾರು 4,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ.

ಚಂಡಮಾರುತದ ರಕ್ಷಣಾ ಕಾರ್ಯಗಳಲ್ಲಿ ಸ್ಥಳೀಯ ಆಡಳಿತಕ್ಕೆ ಸಹಾಯ ಮಾಡಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) 15 ತಂಡಗಳು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಯ (ಎಸ್‌ಡಿಆರ್‌ಎಫ್) ಆರು ತಂಡಗಳನ್ನು ವಿವಿಧ ಸ್ಥಳಗಳಲ್ಲಿ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.

ಯಾವುದೇ ಸಂಭವನೀಯತೆಯನ್ನು ತಡೆಯಲು ದಕ್ಷಿಣ ಗುಜರಾತ್ ಪ್ರದೇಶದಲ್ಲಿ ಸುಮಾರು 250 ಆ್ಯಂಬುಲೆನ್ಸ್​ಗಳು ಹಾಗೂ 170 ತುರ್ತು ವೈದ್ಯಕೀಯ ತಂಡಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಇರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಂದು ಮತ್ತು ನಾಳೆ ದಕ್ಷಿಣ ಗುಜರಾತ್‌ನ ಹಲವು ಭಾಗಗಳಲ್ಲಿ ಚಂಡಮಾರುತದಿಂದ ಭಾರೀ ಗಾಳಿ ಮಳೆಯಾಗಲಿದೆ ಎಂದು ತಿಳಿದುಬಂದಿದ್ದು, ದಕ್ಷಿಣ ಗುಜರಾತ್ ಪ್ರದೇಶವನ್ನು ಹೊರತುಪಡಿಸಿದರೆ, ಚಂಡಮಾರುತವು ರಾಜ್ಯದ ಉಳಿದ ಭಾಗಗಳಲ್ಲಿ ಹೆಚ್ಚು ಪರಿಣಾಮ ಬೀರುವುದಿಲ್ಲ ಎನ್ನಲಾಗ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.