ETV Bharat / bharat

ಬಿಜೆಪಿ ಸದಸ್ಯರ ಸಂಖ್ಯೆ 67 ಲಕ್ಷ ಇದ್ದರೂ, ಮತ ಹಾಕಿದವರು ಮಾತ್ರ ಎಷ್ಟು ಗೊತ್ತಾ? - ದೆಹಲಿ ವಿಧಾನಸಭಾ ಚುನಾವಣೆಗೆ

ದೆಹಲಿ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮುಂಚೆ, ಬಿಜೆಪಿ ರಾಜ್ಯ ಸಂಘಟನೆಯು ಸುಮಾರು 62 ಲಕ್ಷ ಹೊಸ ಸದಸ್ಯರನ್ನು ಹೊಂದಿದ್ದೇವೆ ಎಂದಿತ್ತು. ಆದರೆ, ಈ 62 ಲಕ್ಷಗಳಲ್ಲಿ ಕೇವಲ 35 ಲಕ್ಷ ಮತದಾರರು ಮಾತ್ರ ಪಕ್ಷಕ್ಕೆ ಮತ ನೀಡಿದ್ದಾರೆ. ಈ ರೀತಿಯಾಗಿ ಮತಗಳ ಸಂಖ್ಯೆ ಮತ್ತು ಪಕ್ಷದ ಸದಸ್ಯರ ಸಂಖ್ಯೆಯ ನಡುವಿನ ವ್ಯತ್ಯಾಸವು ಸುಮಾರು 27 ಲಕ್ಷ ಇದೆ.

Out of 62 lakh members of B
ಬಿಜೆಪಿ ಸದಸ್ಯರ ಸಂಖ್ಯೆ 67 ಲಕ್ಷ
author img

By

Published : Feb 13, 2020, 4:44 PM IST

ನವದೆಹಲಿ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಗದ ಕಾರಣ, ಕೇಜ್ರಿವಾಲ್ ಸರ್ಕಾರದ ಯೋಜನೆಗಳನ್ನು ಬಿಜೆಪಿ ದೂಷಿಸುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ಬೆಂಬಲಿಗರು 'ಹಿಂದೂ' ಮಧ್ಯಮ ವರ್ಗದವರಿಗೆ ಕೇಜ್ರಿವಾಲ್​​​ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

ಬಿಜೆಪಿ ಸದಸ್ಯರ ಸಂಖ್ಯೆ 67 ಲಕ್ಷ

ಚುನಾವಣೆಗೂ ಮುಂಚೆ ಬಿಜೆಪಿ ರಾಜ್ಯ ಸಂಸ್ಥೆ ನಡೆಸಿದ ಸದಸ್ಯತ್ವ ಅಭಿಯಾನದಲ್ಲಿ ಭಾಗಿಯಾಗಿದ ಹೊಸ ಸದಸ್ಯರ ಸಂಖ್ಯೆ ಸುಮಾರು 62 ಲಕ್ಷ ತಲುಪಿತ್ತು. ಆದ್ರೆ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಕೇವಲ 35 ಲಕ್ಷ ಮತದಾರರ ಮತಗಳನ್ನು ಪಡೆದಿದೆ. ಮತಗಳ ಸಂಖ್ಯೆ ಮತ್ತು ಪಕ್ಷದ ಸದಸ್ಯರ ಸಂಖ್ಯೆಯ ನಡುವಿನ ವ್ಯತ್ಯಾಸವೂ ಸುಮಾರು 27 ಲಕ್ಷವಿದೆ. ಬಿಜೆಪಿಗೆ ಈ ಬಾರಿ ಬಿಜೆಪಿಯ ಮೂಲ ಕಾರ್ಯಕರ್ತರೇ ವೋಟ್​ ನೀಡಿಲ್ಲ ಎಂಬುದು ಇದರಿಂದ ತಿಳಿದಂತಾಗಿದೆ. ಇನ್ನು ಹೊಸದಾಗಿ ಆಯ್ಕೆಯಾದ ಬಿಜೆಪಿಯ ಶಾಸಕರಿಗೂ ಕೂಡಾ ದೆಹಲಿಯಲ್ಲಿ ಪಕ್ಷದ ಸದಸ್ಯರು ವೋಟ್ ಹಾಕಿಲ್ಲ. ಇದರ ಪರಿಣಾಮ ಮರು ಆಯ್ಕೆ ಬಯಸಿದ ಹಾಗು ಪಕ್ಷದ ಹೊಸ ಅಭ್ಯರ್ಥಿಗಳ ಮೇಲೂ ಆಗಿದೆ.

ಪೂರ್ವ ದೆಹಲಿಯ ಶಾಸಕರಾಗಿ ಆಯ್ಕೆಯಾದ ಬಿಜೆಪಿಯ ಅಜಯ್​​ ಮಹಾವರ್​​ ಮಾತನಾಡಿ, ಗೆಲುವು ನನ್ನ ನಿರೀಕ್ಷೆಯಷ್ಟು ಇರಲಿಲ್ಲ. ಜನ ಬಿಜೆಪಿಯ ಎಂಟು ಜನರನ್ನು ಗೆಲ್ಲಿಸಿದ್ದಾರೆ. ನಾವು ಜನರ ನಿರ್ಣಯವನ್ನು ಸ್ವಾಗತಿಸುತ್ತೇವೆ. ಕೇಜ್ರಿವಾಲ್​ ಅವರು ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡಲಿ, ನಾನು ನನ್ನ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ಪಾರ್ಟಿ ನನಗೆ ಯಾವುದೇ ಜವಬ್ದಾರಿ ನಿಡಿದ್ರು ನಾನು ಅದನ್ನ ನಿಭಾಯಿಸುತ್ತೇನೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.