ETV Bharat / bharat

ಕೊರೊನಾ ವಿಪತ್ತು ನಿರ್ವಹಣೆ ಅತ್ಯಗತ್ಯ: ಐರೋಪ್ಯ ಒಕ್ಕೂಟದ ರಾಯಭಾರಿ

ನವದೆಹಲಿಯಲ್ಲಿರುವ ಐರೋಪ್ಯ ಒಕ್ಕೂಟದ ರಾಯಭಾರಿ ಯುಗೋ ಆಸ್ಟುಟೋ, ವೈಜ್ಞಾನಿಕ ಆಧಾರದಲ್ಲಿ ಕಠಿಣ ಕ್ರಮಗಳು ಮತ್ತು ಲಾಕ್‌ಡೌನ್‌ ಮಾಡುವುದು ಸದ್ಯದ ಅಗತ್ಯ ಎಂದಿದ್ದಾರೆ. ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ಜೊತೆಗೆ ನಡೆಸಿದ ವಿಶೇಷ ಸಂದರ್ಶನದಲ್ಲಿ, ಕೋವಿಡ್ 19 ಕ್ಕೆ ತುರ್ತಾಗಿ ವ್ಯಾಕ್ಸಿನ್ ಕಂಡುಹಿಡಿಯುವ ಅಗತ್ಯವಿದೆ. ನಿಖರ ಡೇಟಾ ಮತ್ತು ಪಾರದರ್ಶಕತೆಯು ಸದ್ಯದ ಅಗತ್ಯವಾಗಿದೆ ಎಂದಿದ್ದಾರೆ.

open-and-accurate-information-is-needed-to-manage-the-corona-virus-disaster
ಕೊರೊನಾ ವೈರಸ್‌ ವಿಪತ್ತು
author img

By

Published : Mar 23, 2020, 8:16 PM IST

Updated : Mar 23, 2020, 8:55 PM IST

ನವದೆಹಲಿ: ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗದಿಂದ ಕುಸಿಯುತ್ತಿರುವ ಆರ್ಥಿಕತೆಯನ್ನು ನಿರ್ವಹಿಸಲು ವಿತ್ತೀಯ ಬೆಂಬಲ ಪ್ರಸ್ತಾವನೆಯನ್ನು 27 ಸದಸ್ಯರ ರಾಯಕೀಯ ಮತ್ತು ಆರ್ಥಿಕ ವಿಭಾಗವನ್ನು ಒಳಗೊಂಡ ಐರೋಪ್ಯ ಒಕ್ಕೂಟ ತಂಡವು ರೂಪಿಸುತ್ತಿದೆ. ಚೀನಾವನ್ನೂ ಮೀರಿಸಿ ಅತಿ ಹೆಚ್ಚು ಮರಣ ಸಂಖ್ಯೆಯನ್ನು ದಾಖಲಿಸಿದ ಇಟಲಿ ಆರ್ಥಿಕ ಸಂಕಷ್ಟದ ಸ್ಥಿತಿಯನ್ನು ನಿರ್ವಹಿಸಲು ನೆರವು ನೀಡುವಂತೆ ಐರೋಪ್ಯ ಒಕ್ಕೂಟವನ್ನು ಕೋರಿಕೊಂಡಿದೆ.

ನವದೆಹಲಿಯಲ್ಲಿರುವ ಐರೋಪ್ಯ ಒಕ್ಕೂಟದ ರಾಯಭಾರಿ ಯುಗೋ ಆಸ್ಟುಟೋ, ವೈಜ್ಞಾನಿಕ ಆಧಾರದಲ್ಲಿ ಕಠಿಣ ಕ್ರಮಗಳು ಮತ್ತು ಲಾಕ್‌ಡೌನ್‌ ಮಾಡುವುದು ಸದ್ಯದ ಅಗತ್ಯ ಎಂದಿದ್ದಾರೆ. ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ಜೊತೆಗೆ ನಡೆಸಿದ ವಿಶೇಷ ಸಂದರ್ಶನದಲ್ಲಿ, ಕೋವಿಡ್ 19 ಕ್ಕೆ ತುರ್ತಾಗಿ ವ್ಯಾಕ್ಸಿನ್ ಕಂಡುಹಿಡಿಯುವ ಅಗತ್ಯವಿದೆ. ನಿಖರ ಡೇಟಾ ಮತ್ತು ಪಾರದರ್ಶಕತೆಯು ಸದ್ಯದ ಅಗತ್ಯವಾಗಿದೆ. ಭಾರತ ಮತ್ತು ಐರೋಪ್ಯ ಒಕ್ಕೂಟವು ತನ್ನ ನಾಗರಿಕರಿಗೆ ದೇಶಕ್ಕೆ ವಾಪಸಾಗಲು ವೀಸಾ ವಿಸ್ತರಣೆ ಮಾಡುತ್ತಿದೆ. ಸಾಂಕ್ರಾಮಿಕ ರೋಗದ ವಿಚಾರದಲ್ಲಿ ಕೆಲವು ವ್ಯಕ್ತಿಗಳು ಜನಾಂಗೀಯ ನಿಂದನೆ ನಡೆಸುತ್ತಿರುವ ಕುರಿತು ಅವರನ್ನು ಕೇಳಿದಾಗ, ಮಾನವ ತಾದಾತ್ಮ್ಯವನ್ನು ಜನರು ನಿರ್ವಹಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ಪ್ರಶ್ನೆ: ಐರೋಪ್ಯ ಒಕ್ಕೂಟ ಸದ್ಯ ಎದುರಿಸುತ್ತಿರುವ ರಿಸ್ಕ್‌ನ ವ್ಯಾಪ್ತಿ ಎಷ್ಟಿದೆ?

ಈ ಸಾಂಕ್ರಾಮಿಕ ರೋಗ ಇಡೀ ದೇಶವನ್ನು ವ್ಯಾಪಿಸಿದೆ. ಇದೊಂದು ಜಾಗತಿಕ ಭೀತಿಯಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದಕ್ಕೆ ಪ್ರತಿಕ್ರಿಯೆ ಅಗತ್ಯವಿದೆ. ನಾವೆಲ್ಲರೂ ಕ್ರಮ ಕೈಗೊಂಡು ಸಾರ್ವಜನಿಕರ ಆರೋಗ್ಯವನ್ನು ರಕ್ಷಿಸಬೇಕಾಗಿದೆ ಮತ್ತು ಇನ್ನಷ್ಟು ಸಾವು ಸಂಭವಿಸದಂತೆ ತಡೆಯಬೇಕಿದೆ. ಯುರೋಪ್‌ನಲ್ಲಿ ನಾವು ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಂಡಿದ್ದೇವೆ. ಗಡಿಯನ್ನು ಮುಚ್ಚುವುದು, ಲಾಕ್‌ಡೌನ್‌ ಮಾಡುವುದು ಎಲ್ಲವೂ ಸದ್ಯ ಲಭ್ಯ ವೈಜ್ಞಾನಿಕ ಸಾಕ್ಷಿ ಮತ್ತು ಪರಿಣಿತಿ ಆಗಿವೆ. ನಾವು ಎಲ್ಲ ರಾಜ್ಯಗಳ ಸದಸ್ಯರ ಕೋವಿಡ್ ಕೋಆರ್ಡಿನೇಶನ್‌ ತಂಡವನ್ನು ರಚಿಸಿದ್ದು, ಕೈಗೊಳ್ಳಬೇಕಾದ ತುರ್ತು ಕ್ರಮಗಳನ್ನು ನಿರ್ಧರಿಸುತ್ತಿದ್ದೇವೆ. ಈ ವಿಪತ್ತಿನಿಂದಾಗಿ ಆರ್ಥಿಕತೆಯ ಮೇಲೆ ಉಂಟಾಗುವ ಪರಿಣಾಮವನ್ನೂ ನಾವು ಪರಿಶೀಲಿಸುತ್ತಿದ್ದೇವೆ. ಇದೇ ಸಮಯದಲ್ಲಿ, ವೈರಸ್ ಅನ್ನು ಎದುರಿಸಲು ಮತ್ತು ಇದರ ಪರಿಣಾಮವನ್ನು ನಿವಾರಿಸುವಲ್ಲಿ ನಾವು ಸಂಪೂರ್ಣ ಸಿದ್ಧವಾಗಿದ್ದೇವೆ. ಈ ಯುದ್ಧದಲ್ಲಿ ನಾವು ಗೆಲ್ಲಬಹುದು. ಐರೋಪ್ಯ ಒಕ್ಕೂಟದಲ್ಲಿ ನಾವು ಉತ್ತಮ ವಿಜ್ಞಾನಿಗಳನ್ನು ಹೊಂದಿದ್ದೇವೆ. ಸಾರ್ವಜನಿಕ ಮತ್ತು ಖಾಸಗಿ ಫಂಡಿಂಗ್‌ ಮೂಲಕ ನಾವು 140 ಮಿಲಿಯನ್ ಯೂರೋಗಳನ್ನು ಚುಚ್ಚುಮದ್ದು, ಪತ್ತೆ ಮತ್ತು ಚಿಕಿತ್ಸೆಗೆ ಸಂಗ್ರಹಿಸಿದ್ದೇವೆ. ಸಾಧ್ಯವಾದಷ್ಟೂ ಬೇಗ ವ್ಯಾಕ್ಸಿನ್ ಕಂಡುಕೊಳ್ಳುವುದು ಅತ್ಯಂತ ಅಗತ್ಯ. ನಾವು ಸಂಪೂರ್ಣ ಪಾರದರ್ಶಕತೆಯನ್ನು ನಿರ್ವಹಿಸುತ್ತಿದ್ದೇವೆ. ಯುರೋಪಿಯನ್ ಕಮಿಷನ್ ಸೇರಿದಂತೆ ಹಲವು ವೆಬ್‌ಸೈಟ್‌ಗಳಲ್ಲಿ ಪ್ರಸ್ತುತ ಮಾಹಿತಿಯು ಜೊತೆಗೆ ಎಲ್ಲ ಕ್ರೋಢೀಕೃತ ಸಂಖ್ಯೆಗಳು ಲಬ್ಯವಿವೆ. ಈ ವಿಪತ್ತನ್ನು ನಿರ್ವಹಿಸಲು ಮುಕ್ತ ಮತ್ತು ನಿಖರ ಮಾಹಿತಿಯು ಅತ್ಯಂತ ಪ್ರಮುಖ ಎಂದು ನಾವು ನಂಬಿದ್ದೇವೆ. ಸ್ಥಳೀಯ ಮತ್ತು ರಾಷ್ಟ್ರೀಯ ಕ್ರಮಗಳ ಜೊತೆಗೆ ನಾವು ಜಾಗತಿಕ ಮಟ್ಟದಲ್ಲೂ ಶ್ರಮಿಸಬೇಕಿದೆ. ಯಾಕೆಂದರೆ ರಾಷ್ಟ್ರೀಯ ಗಡಿಯ ಕುರಿತು ವೈರಸ್‌ಗೆ ಯಾವ ಅರಿವೂ ಇರುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಜೊತೆಗೆ ನಾವೆಲ್ಲರೂ ಒಟ್ಟಾಗಿ ಈ ನಿಟ್ಟಿನಲ್ಲಿ ಶ್ರಮಿಸಬೇಕಿದೆ.

ಪ್ರಶ್ನೆ : ಈ ವೈರಸ್‌ ಹರಡಿದಂದಿನಿಂದ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಐರೋಪ್ಯ ಒಕ್ಕೂಟದಲ್ಲಿ ಪ್ರಯಾಣಿಸಿದ್ದರಿಂದಾಗಿ ಎಷ್ಟು ಪ್ರಮಾಣದಲ್ಲಿ ರಿಸ್ಕ್ ಉಂಟಾಗಿರಬಹುದು? ಈ ಹಿಂದೆ ಪ್ರಯಾಣಿಸಿದ ಎಲ್ಲ ಕೋವಿಡ್ 19 ಪ್ರಕರಣಗಳನ್ನೂ ಗುರುತಿಸುವುದು ಸಾಧ್ಯವಿದೆಯೇ?

ನಾವು ಈ ಪ್ರಕರಣವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಲಾಕ್‌ಡೌನ್ ಹೆಚ್ಚು ಪರಿಣಾಮಕಾರಿಯಾಗುತ್ತಿದೆ. ನಾವೆಲ್ಲರೂ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಈ ಸಾರ್ವಜನಿಕ ಆರೋಗ್ಯ ಸಮಸ್ಯೆಯನ್ನು ಎದುರಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನೂ ತೆಗೆದುಕೊಳ್ಳಲು ನಾವು ಸಿದ್ಧವಿದ್ದೇವೆ. ಡಬ್ಲ್ಯೂಎಚ್‌ಒ ಪ್ರಸ್ತಾಪಿಸಿದ ಸಲಹೆಗಳನ್ನು ನಾವು ಈಗಾಗಲೇ ಅನುಸರಿಸಿದ್ದೇವೆ. ಆರೋಗ್ಯ ಸಂಸ್ಥೆಗಳ ಜೊತೆಗೆ ನಾವು ಸಂಪರ್ಕದಲ್ಲಿದ್ದೇವೆ. ಈಗ ಅಗತ್ಯವಿರುವ ಕಟ್ಟುನಿಟ್ಟಿನ ಮತ್ತು ಕಠಿಣ ಕ್ರಮಗಳನ್ನು ನಾವು ತೆಗೆದುಕೊಳ್ಳುತ್ತಿದ್ದೇವೆ. ಇದೇ ಸಮಯದಲ್ಲಿ, ನಮ್ಮ ಒಟ್ಟಾರೆ ಸಾಮಾಜಿಕ ಮತ್ತು ಆರ್ಥಿಕ ಫ್ರೇಮ್ವರ್ಕ್‌ ಅನ್ನು ರೂಪಿಸಬೇಕಿದೆ. ಈಗಿನ ಆದ್ಯತೆಯು ಈ ಸಾರ್ವಜನಿಕ ಆರೋಗ್ಯ ರಿಸ್ಕ್ ಅನ್ನು ನಿರ್ವಹಿಸುವುದಾಗಿದೆ.

ಪ್ರಶ್ನೆ: ಭಾರತವು ಐರೋಪ್ಯ ಒಕ್ಕೂಟದ ಪ್ರಯಾಣಿಕರಿಗೆ ನಿಷೇಧ ಹೇರಿದ್ದು, ಹಲವು ಭಾರತೀಯರು ಕೂಡ ವಿವಿಧ ನಗರಗಳಲ್ಲಿ ಸಿಕ್ಕಿಕೊಂಡಿದ್ದಾರೆ ಇನ್ನೂ ಕೆಲವರಿಗೆ ವಸತಿ ಸೌಲಭ್ಯದ ಸಮಸ್ಯೆಯೂ ಎದುರಾಗಿದೆ. ಐರೋಪ್ಯ ಒಕ್ಕೂಟದಲ್ಲಿರುವ ಭಾರತೀಯರು ಅಥವಾ ಭಾರತೀಯ ಪೌರರಿಗೆ ಅಗತ್ಯವಿದ್ದಲ್ಲಿ ವೀಸಾ ವಿಸ್ತರಣೆ ಮಾಡಲಾಗುತ್ತಿದೆಯೇ?

ಹೌದು. ಎಲ್ಲ ರಾಜ್ಯಗಳೂ ಇದನ್ನು ಮಾಡುತ್ತಿವೆ. ನಾವು ಯರೋಪ್ಯ ಒಕ್ಕೂಟಕ್ಕೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇವೆ. ನಾವೆಲ್ಲರೂ ಒಟ್ಟಾಗಿದ್ದೇವೆ ಮತ್ತು ನಾವೆಲ್ಲರೂ ಒಟ್ಟಾಗಿರುವುದು ಸದ್ಯದ ಅಗತ್ಯವೂ ಆಗಿದೆ. ಇದು ಭಾರತದಲ್ಲಿರುವ ಯುರೋಪಿಯನ್ನರಿಗೇ ಆಗಲಿ ಅಥವಾ ಯುರೋಪ್‌ನಲ್ಲಿರುವ ಭಾರತೀಯರಿಗೇ ಆಗಲಿ, ಸದ್ಯ ನಾವು ನೆರವಾಗುವುದು ಅತ್ಯಂತ ಅಗತ್ಯದ್ದಾಗಿದೆ.

ಪ್ರಶ್ನೆ : ಈ ಸಾಂಕ್ರಾಮಿಕ ರೋಗವನ್ನು ತಡೆಯಲು ಗಡಿಗಳನ್ನು ಬಂದ್ ಮಾಡುವುದು ಅತ್ಯಂತ ಉತ್ತಮ ವಿಧಾನ ಎಂದು ನೀವು ಭಾವಿಸುತ್ತೀರಾ?

ನಾನು ವೈದ್ಯಕೀಯ ಪರಿಣಿತನಲ್ಲ. ಆದರೆ, ಸದ್ಯ ಲಭ್ಯವಿರುವ ಉತ್ತಮ ವೈಜ್ಞಾನಿಕ ಸಲಹೆಯನ್ನು ಆಧರಿಸಿ ಕ್ರಮ ಕೈಗೊಳ್ಳುತ್ತಿದೆ. ನಾವು ಮಾಡುತ್ತಿರುವ ಕ್ರಮಗಳೆಲ್ಲವೂ ವೈಜ್ಞಾನಿಕ ಸಾಕ್ಷಿಯನ್ನು ಹೊಂದಿರುತ್ತವೆ.

ಪ್ರಶ್ನೆ : ಈ ಸಾಂಕ್ರಾಮಿಕ ರೋಗದಿಂದ ಉಂಟಾದ ಆರ್ಥಿಕ ಸಂಕಷ್ಟಕ್ಕೆ ಯಾವ ರೀತಿಯ ಉತ್ತೇಜಕ ಪ್ಯಾಕೇಜ್‌ಗಳನ್ನು ಸರ್ಕಾರಗಳು ಒದಗಿಸಬೇಕಿದೆ?

ಸಂಶೋಧನೆ ಮತ್ತು ವ್ಯಾಕ್ಸಿನ್‌ಗಳಿಗೆ ನಾವು 140 ಮಿಲಿಯನ್ ಯೂರೋಗಳನ್ನು ಕ್ರೋಢೀಕರಿಸಿದೆ. ನಾವು ಕೂಡ ಡಬ್ಲ್ಯೂಎಚ್‌ಒಗೆ 400 ಮಿಲಿಯನ್ ಯೂರೋಗಳನ್ನು ನೀಡಿದ್ದೇವೆ. ಈ ವೈರಸ್ ಅನ್ನು ನಿರ್ವಹಿಸಲು ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕಿದೆ. ಇದರಿಂದ ಉಂಟಾದ ಆರ್ಥಿಕ ಸಂಕಷ್ಟವನ್ನು ನಿರ್ವಹಿಸಲು ಕ್ರಮ ಕೈಗೊಳ್ಳಲು ಪ್ರಯತ್ನಿಸುತ್ತಿದ್ದೇವೆ.

ಈಗಾಗಲೇ ನಾವು ಹಲವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ನಾವು ಹಲವು ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಮತ್ತು ಫ್ಲೆಕ್ಸಿಬಿಲಿಟಿ ಹಾಗೂ ಸ್ಥಿರತೆಯನ್ನೂ ಬಳಸಿಕೊಂಡು ಹೊಸ ಬಜೆಟ್ ಅನ್ನು ರೂಪಿಸಲಿದ್ದೇವೆ. ಎಲ್ಲವನ್ನೂ ವೈರಸ್ ಹರಡುವುದನ್ನು ತಡೆಯುವ ಉದ್ದೇಶದಿಂದಲೇ ಕೈಗೊಳ್ಳುತ್ತಿದ್ದೇವೆ. ಸನ್ನಿವೇಶವನ್ನು ನಿರ್ವಹಿಸಲು ಅಗತ್ಯ ಕ್ರಮವನ್ನು ನಾವು ತೆಗೆದುಕೊಳ್ಳಲೇಬೇಕಿದೆ. ಕ್ರಿಯಾಶೀಲ ಮತ್ತು ಹೊಸ ಸೌಲಭ್ಯಗಳ ಜೊತೆಗೆ ಸಿದ್ಧವಿದ್ದೇವೆ.

ಪ್ರಶ್ನೆ: ಪ್ರಧಾನಿ ಮೋದಿಯವರು ಸಾರ್ಮ್‌ ಸಮ್ಮಿಟ್ ವೀಡಿಯೋ ಕಾನ್ಫರೆನ್ಸ್ ರೀತಿಯಲ್ಲೇ ಜಿ20 ಆನ್‌ಲೈನ್‌ ಲಿಂಕ್‌ ಅನ್ನು ಪ್ರಸ್ತಾಪಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಈ ವೈರಸ್‌ನಿಂದ ಚೇತರಿಸಿಕೊಳ್ಳಲು ಬಹುತ್ವವೇ ಒಂದು ಉತ್ತಮ ವಿಧಾನವಾಗಿದೆಯೇ?

ನಾವು ಇದನ್ನು ಅಗತ್ಯವಾಗಿ ಮಾಡಬೇಕಿದೆ. ಪ್ರಧಾನಿ ಮೋದಿ ಕೈಗೊಂಡ ಕ್ರಮಗಳನ್ನು ನಾವು ಮೆಚ್ಚಿದ್ದೇವೆ. ಇದು ಸಮಯಕ್ಕೆ ಸರಿಯಾದ ಕ್ರಮವಾಗಿದೆ. ಈ ಸಮಯದಲ್ಲಿ ನಾವು ಬಹುತ್ವದ ಪ್ರಾಮುಖ್ಯತೆಯನ್ನು ನೋಡುತ್ತಿದ್ದೇವೆ. ಅಂತಾರಾಷ್ಟ್ರೀಯ ಸಹಕಾರ ಮತ್ತು ಸ್ಥೈರ್ಯ ಈ ಸಮಯದಲ್ಲಿ ಅಗತ್ಯವಿದೆ. ಈ ಸಾಂಕ್ರಾಮಿಕ ರೋಗವನ್ನು ಎದುರಿಸಲು ನಾವು ಉತ್ತಮ ಸಹಕಾರದ ಕಾರ್ಯತಂತ್ರಗಳನ್ನು ಕಂಡುಕೊಳ್ಳುತ್ತಿದ್ದೇವೆ.

ಪ್ರಶ್ನೆ : ಒಂದೆಡೆ ದೇಶಗಳು ಲಾಕ್‌ಡೌನ್‌ ಆಗಿದ್ದರೆ, ಇನ್ನೊಂದೆಡೆ ಜಿ7 ಮತ್ತು ಜಿ20ಯಲ್ಲಿ ಪ್ರಸ್ತಾಪಿಸಿದ ಐಡಿಯಾಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಬಹುದೇ?

ಎಲ್ಲ ದೇಶಗಳೂ ಸನ್ನಿವೇಶವನ್ನು ಗಂಭೀರವಾಗಿ ಪರಿಗಣಿಸಿವೆ. ನಾವು ಉತ್ತಮ ಅಭ್ಯಾಸಗಳು ಮತ್ತು ಪರಿಣಿತಿಯನ್ನು ಈಗಾಗಲೇ ಜಾರಿಗೊಳಿಸಿದ್ದೇವೆ. ನಾವು ಬಹುತ್ವದ ಹಂತದಲ್ಲಿ ಇದನ್ನು ಪರಿಗಣಿಸಿ, ಪರಿಣಿತಿ ಮತ್ತು ಇತರರ ಅನುಭವದಿಂದ ಪಾಠವನ್ನು ಕಲಿಯಬೇಕಿದೆ.

Last Updated : Mar 23, 2020, 8:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.