ETV Bharat / bharat

ಆಂಧ್ರಪ್ರದೇಶದಲ್ಲಿ ಪಟಾಕಿ ಸಿಡಿಸಲು 2 ಗಂಟೆ ಅವಕಾಶ: ಆದರೆ ಷರತ್ತುಗಳು ಅನ್ವಯ!

author img

By

Published : Nov 11, 2020, 12:49 PM IST

ದೀಪಾವಳಿ ದಿನದಂದು ಪಟಾಕಿಗಳ ಬಳಕೆ ಮತ್ತು ಸಿಡಿಸುವ ಸಮಯವನ್ನು ರಾತ್ರಿ 8 ರಿಂದ 10ಕ್ಕೆ ಎರಡು ಗಂಟೆಗಳ ಕಾಲ ಸೀಮಿತಗೊಳಿಸಲಾಗಿದೆ ಎಂದು ಆಂಧ್ರಪ್ರದೇಶ ಸರ್ಕಾರ ತಿಳಿಸಿದೆ.

Only green crackers allowed in Andhra
ಅಂಧ್ರಪ್ರದೇಶದಲ್ಲಿ ಪಟಾಕಿ ಸಿಡಿಸಲು 2 ಗಂಟೆ ಅವಕಕಾಶ

ಅಮರಾವತಿ (ಆಂಧ್ರಪ್ರದೇಶ): ವಾಯುಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಆಂಧ್ರಪ್ರದೇಶದಲ್ಲಿ ಪಟಾಕಿ ಮಾರಾಟ ಮತ್ತು ಸಿಡಿಸುವುದನ್ನು ನಿರ್ಬಂಧಿಸಲಾಗಿದೆ. ದಿಪಾವಳಿ ಹಬ್ಬದಂದು ರಾತ್ರಿ 8 ರಿಂದ 10ರ ವರೆಗೆ ಕೇವಲ ಹಸಿರು ಪಟಾಕಿ ಸಿಡಿಸಲು ಅಲ್ಲಿನ ಸರ್ಕಾರ ಅವಕಾಶ ನೀಡಿ ಆದೇಶ ಹೊರಡಿಸಿದೆ.

"ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಿ ಬಳಸಬೇಕು ಮತ್ತು ದೀಪಾವಳಿ ದಿನದಂದು ಪಟಾಕಿಗಳ ಬಳಕೆ ಮತ್ತು ಸಿಡಿಸುವ ಸಮಯವನ್ನು ರಾತ್ರಿ 8 ರಿಂದ 10ಕ್ಕೆ ಎರಡು ಗಂಟೆಗಳ ಕಾಲ ಮಾತ್ರ ಸೀಮಿತಗೊಳಿಸಲಾಗಿದೆ" ಎಂದು ರಾಜ್ಯ ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಆದೇಶದಂತೆ ಆಂಧ್ರಪ್ರದೇಶ ಸರ್ಕಾರವು ಪಟಾಕಿ ಸಿಡಿಸುವುದು ಮತ್ತು ಮಾರಾಟ ಮಾಡುವುದನ್ನು ನಿರ್ಬಂಧಿಸಲು ಆದೇಶಿಸಿದೆ.

ಕೋವಿಡ್-19 ಸಾಂಕ್ರಾಮಿಕದ ಮಧ್ಯೆ ದೀಪಾವಳಿ ಆಚರಿಸಲಾಗುತ್ತಿರುವುದರಿಂದ, ಎಲ್ಲ ಆರೋಗ್ಯ ಪ್ರೋಟೋಕಾಲ್‌ಗಳನ್ನು ಅನುಸರಿಸುವಂತೆ ಆಂಧ್ರಪ್ರದೇಶ ಸರ್ಕಾರ ಗ್ರಾಹಕರು ಮತ್ತು ಮಾರಾಟಗಾರರನ್ನು ಒತ್ತಾಯಿಸಿದೆ.

ಪಟಾಕಿ ಮಾರಾಟ ಮಾಡುವ ಎಲ್ಲ ಅಂಗಡಿಗಳ ನಡುವೆ 10 ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು. ಗ್ರಾಹಾಕರು ಅಂಗಡಿಯಲ್ಲಿ 6 ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು. ಪಟಾಕಿ ಸಿಡಿಯುವಾಗ ಸ್ಯಾನಿಟೈಸರ್ ಬಳಸದೇ ಸಾಬೂನುಗಳನ್ನು ಬಳಸಲು ಸೂಚಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.