ETV Bharat / bharat

ಸಿಎಎ ಜಾರಿಯಾಗಿ ಇಂದಿಗೆ ಒಂದು ವರ್ಷ: ಕಾಯ್ದೆ ಸಂಬಂಧ ನ್ಯಾಯಾಲಯಗಳ ಪ್ರತಿಕ್ರಿಯೆ ಹೀಗಿದೆ.. - COURTS RESPONSE ON CAA

ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಂಸತ್ತು 2019ರ ಡಿ.11ರಂದು ಅಂಗೀಕರಿಸಿತು. ಈ ಕಾಯ್ದೆ ಅಂಗೀಕಾರಗೊಂಡು ಇಂದಿಗೆ ಒಂದು ವರ್ಷವಾಗಿದೆ.

ಸಿಎಎ ಜಾರಿಯಾಗಿ ಇಂದಿಗೆ ಒಂದು ವರ್ಷ
ಸಿಎಎ ಜಾರಿಯಾಗಿ ಇಂದಿಗೆ ಒಂದು ವರ್ಷ
author img

By

Published : Dec 11, 2020, 6:21 PM IST

ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ, ಕ್ರಿಶ್ಚಿಯನ್ ಅಥವಾ ಯಾವುದೇ ಅಲ್ಪಸಂಖ್ಯಾತ ಗುಂಪಿಗೆ ಸೇರಿದವರು ಅಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನದಿಂದ ಡಿಸೆಂಬರ್ 31, 2014 ರಂದು ಅಥವಾ ಮೊದಲು ಬಂದವರು ಈ ಕಾಯ್ದೆಯಿಂದ ವಿನಾಯಿತಿ ಪಡೆದಿದ್ದಾರೆ. ಸಂವಿಧಾನದ ಆರನೇ ಪರಿಚ್ಛೇದದ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಿಗೆ ಈ ತಿದ್ದುಪಡಿ ಮಸೂದೆ ಅನ್ವಯವಾಗುವುದಿಲ್ಲ. ಅಂದರೆ, ಬುಡಕಟ್ಟು ಪ್ರಾಬಲ್ಯ ಹೊಂದಿರುವ ಸ್ವಾಯತ್ತ ಜಿಲ್ಲಾ ಮಂಡಳಿಗಳನ್ನು ಹೊಂದಿರುವ ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂಗಳಿಗೆ ಅನ್ವಯವಾಗುವುದಿಲ್ಲ.

ಸಿಎಎ ಕಾಯ್ದೆ ಜಾರಿಯಾದ ಬಳಿಕ ಅನೇಕ ರಾಜ್ಯಗಳಲ್ಲಿ ಪ್ರತಿಭಟನೆ ಕಾವೇರಿತು. ಇದನ್ನು ತಡೆಯುವಲ್ಲಿ ಮತ್ತು ಈ ಹಕ್ಕನ್ನು ಎತ್ತಿಹಿಡಿಯುವಲ್ಲಿ ಸುಪ್ರೀಂಕೋರ್ಟ್ ಹಾಗೂ ರಾಜ್ಯದ ಹೈಕೋರ್ಟ್‌ಗಳು ಪ್ರಮುಖ ಪಾತ್ರವಹಿಸಿವೆ.

ಸಿಎಎ-ಎನ್‌ಪಿಆರ್-ಎನ್‌ಆರ್‌ಸಿಯನ್ನು ಪ್ರಶ್ನಿಸಿ ರಾಷ್ಟ್ರದಾದ್ಯಂತ ವಿವಿಧ ಪಕ್ಷಗಳು 140ಕ್ಕೂ ಹೆಚ್ಚು ರಿಟ್ ಅರ್ಜಿಗಳನ್ನು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದವು. ಅನೇಕ ರಾಜ್ಯ ಸರ್ಕಾರಗಳು ಅದರ ನಿಬಂಧನೆಗಳನ್ನು ಕಾರ್ಯಗತಗೊಳಿಸದಿರಲು ನಿರ್ಧರಿಸಿದ್ದವು. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆಯಂತಹ ಅಂತಾರಾಷ್ಟ್ರೀಯ ಸಂಸ್ಥೆಗಳು ಕಾಯ್ದೆಯ "ಮೂಲಭೂತ ತಾರತಮ್ಯದ ಸ್ವರೂಪ" ದ ಬಗ್ಗೆ ಪ್ರತಿಕ್ರಿಯಿಸಲು ನಿರ್ಬಂಧಿಸಲ್ಪಟ್ಟಿದ್ದವು. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯುಕ್ತರು ಸಹ ಸುಪ್ರೀಂಕೋರ್ಟ್‌ನಲ್ಲಿ ಮಧ್ಯಪ್ರವೇಶಿಸಿ ಸಿಎಎಯಲ್ಲಿ ಪ್ರಶ್ನೆಗಳನ್ನು ಎತ್ತಿದ್ದರು.

ಈ ಶಾಸನವು ದೇಶಾದ್ಯಂತ ಪ್ರತಿಭಟನಾ ಆಂದೋಲನಗಳನ್ನು ಹುಟ್ಟುಹಾಕಿದೆ. ಈ ಪ್ರತಿಭಟನೆಗಳನ್ನು ತಡೆಯಲು ಸೆಕ್ಷನ್ 144 ಜಾರಿ, ಇಂಟರ್​ನೆಟ್​​ ಸೇವೆ ಸ್ಥಗಿತ ಇತ್ಯಾದಿಗಳ ಕ್ರಮಗಳನ್ನು ರಾಜ್ಯ ಸರ್ಕಾರಗಳು ತೆಗೆದುಕೊಂಡಿವೆ ಎಂದು ಕೋರ್ಟ್​ನಲ್ಲಿ ಹೇಳಲಾಗಿತ್ತು.

ಓದಿ: ಕೊರೊನಾಗೆ ಜಗತ್ತು ತಲ್ಲಣ: ಒಂದು ವರ್ಷದಲ್ಲಿ 7 ಕೋಟಿ ಜನರಿಗೆ ಅಂಟಿದ ವೈರಸ್​​

ಸಿಎಎಗೆ ಸಂಬಂಧಿಸಿ ನ್ಯಾಯಾಲಯಗಳ ಪ್ರತಿಕ್ರಿಯೆ:

ಅಲಹಾಬಾದ್ ಹೈಕೋರ್ಟ್:

ಅಲಿಘಡ್​ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪೊಲೀಸರಿಂದ ಲಾಠಿ ಪ್ರಹಾರ:

ವರದಿಗಳ ಪ್ರಕಾರ, ಹಿಂಸಾತ್ಮಕ ಸಿಎಎ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಉತ್ತರ ಪ್ರದೇಶದಾದ್ಯಂತ ಕನಿಷ್ಠ 23 ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಜನರನ್ನು ಬಂಧಿಸಲಾಗಿದೆ. ನೂರಾರು ಎಫ್‌ಐಆರ್​ಗಳು ದಾಖಲಾಗಿವೆ. ಇದರಲ್ಲಿ ಡಿಸೆಂಬರ್ 15, 2020 ರಂದು ಅಲಿಘಡ್​​ ಮುಸ್ಲಿಂ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆ ಕೂಡ ಒಳಗೊಂಡಿದೆ.

ಈ ಪ್ರತಿಭಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳಿಗೆ ಮತ್ತು ವ್ಯಕ್ತಿಗಳಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ನೆರವು ಒದಗಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ ಎಂದು ಮುಖ್ಯ ನ್ಯಾಯಾಧೀಶರ ನೇತೃತ್ವದ ವಿಭಾಗೀಯ ಪೀಠವು ಆಲಿಘರ್​ನ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ನೀಡಿತ್ತು. ಅಂತಿಮವಾಗಿ ಫೆಬ್ರವರಿ 24 ರಂದು ಅಲಹಾಬಾದ್ ಹೈಕೋರ್ಟ್ ಪೊಲೀಸ್ ನಿರ್ದೇಶಕರನ್ನು ತಪ್ಪಿತಸ್ಥರೆಂದು ಗುರುತಿಸಿ ತಪ್ಪು ಮಾಡಿದವರ ವಿರುದ್ಧ ಕ್ರಮಕೈಗೊಳ್ಳಲು ಯುಪಿ ಸರ್ಕಾರದ ಪೊಲೀಸ್ ಜನರಲ್​ಗೆ ಸೂಚನೆ ನೀಡಿತ್ತು.

ಡಾ. ಕಫೀಲ್ ಖಾನ್ ಬಂಧನ:

ಸಿಎಎ ವಿರೋಧಿ ಪ್ರತಿಭಟನೆಗಳ ಮಧ್ಯೆ 2019 ರ ಡಿಸೆಂಬರ್ 13 ರಂದು ಅಲಿಘಡ್​ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಗೋರಖ್‌ಪುರ ಮೂಲದ ಉಪನ್ಯಾಸಕ ಡಾ.ಕಫೀಲ್ ಖಾನ್ ಅವರನ್ನು 2020 ರ ಜನವರಿಯಲ್ಲಿ ಮುಂಬೈನಲ್ಲಿ ಬಂಧಿಸಲಾಗಿತ್ತು.

ಹಿಂಸಾತ್ಮಕ ಘಟನೆಗಳ ನಂತರ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು, ಸಿಎಎ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಹಿಂಸಾಚಾರ ಮತ್ತು ಸಾರ್ವಜನಿಕ, ಖಾಸಗಿ ಆಸ್ತಿಗಳಿಗೆ ಹಾನಿ ಮಾಡಿದ ಆರೋಪ ಹೊತ್ತ ವ್ಯಕ್ತಿಗಳ ಹೆಸರುಗಳು, ಛಾಯಾಚಿತ್ರ ಮತ್ತು ವಿಳಾಸಗಳನ್ನು ಬ್ಯಾನರ್ ಮೇಲೆ ಹಾಕಿ ರಾಜಧಾನಿಯಲ್ಲಿ ಅಂಟಿಸಿತ್ತು.​

ಕೆಲವೇ ವ್ಯಕ್ತಿಗಳ ವೈಯಕ್ತಿಕ ಡೇಟಾವನ್ನು ಬ್ಯಾನರ್‌ಗಳಲ್ಲಿ ಏಕೆ ಹಾಕಲಾಗಿದೆ ಎಂಬುದನ್ನು ತೋರಿಸಲು ಯುಪಿ ಸರ್ಕಾರ ವಿಫಲವಾಗಿದೆ ಎಂದು ನ್ಯಾಯಾಲಯ ಪ್ರಶ್ನಿಸಿತ್ತು. ಇದು ನಾಗರಿಕರ ಗೌಪ್ಯತೆಯ ಹಕ್ಕಿನೊಂದಿಗೆ "ಅನಗತ್ಯ ಹಸ್ತಕ್ಷೇಪ" ಕ್ಕೆ ಕಾರಣವಾಗಿದೆ.

ಹೈಕೋರ್ಟ್ ತೀರ್ಪಿನ ವಿರುದ್ಧ ಉತ್ತರ ಪ್ರದೇಶವು ಸುಪ್ರೀಂಕೋರ್ಟ್​ನನ್ನು ಪ್ರಶ್ನಿಸಿದಾಗ, ಅದು ಗಲಭೆಕೋರರ ಹೆಸರನ್ನು ಹೊಂದಿರುವ ಹೋರ್ಡಿಂಗ್​​ಗಳನ್ನು ಹಾಕುವ ಕ್ರಮವನ್ನು ಬೆಂಬಲಿಸುವ ಕಾನೂನಿನ ಬಗ್ಗೆ ರಾಜ್ಯ ಸರ್ಕಾರವನ್ನು ಕೇಳಿದೆ. ಆದರೆ, ಕೋರ್ಟ್​ ಅರ್ಜಿಯನ್ನು ವಜಾಗೊಳಿಸಲಿಲ್ಲ ಅಥವಾ ಹೈಕೋರ್ಟ್‌ನ ಆದೇಶವನ್ನು ಎತ್ತಿಹಿಡಿಯಲಿಲ್ಲ.

ಬಾಂಬೆ ಹೈಕೋರ್ಟ್:

ಮಹಾರಾಷ್ಟ್ರದ ಜಿಲ್ಲೆಗಳಲ್ಲಿ ಸೆಕ್ಷನ್‌ 144 ​​ ಹೇರಿಕೆ:

ನಾಗರಿಕರ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕನ್ನು ಎತ್ತಿಹಿಡಿದ ಬಾಂಬೆ ಹೈಕೋರ್ಟ್‌ನ ವಿಭಾಗೀಯ ಪೀಠವು ಸಿಎಎ ವಿರೋಧಿ ಪ್ರತಿಭಟನೆಯನ್ನು ನಿಷೇಧಿಸಲು ಸೆಕ್ಷನ್ 144 ಜಾರಿಗೊಳಿಸಿದ್ದುದನ್ನು ರದ್ದುಗೊಳಿಸಿತ್ತು.

ಕರ್ನಾಟಕ ಹೈಕೋರ್ಟ್:

ಪ್ರತಿಭಟನೆ ವೇಳೆ ಮಂಗಳೂರಿನಲ್ಲಿ ವ್ಯಕ್ತಿಯ ಮೇಲೆ ಫೈರಿಂಗ್​:

ಮಂಗಳೂರಿನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪೊಲೀಸರ ಗುಂಡಿನ ದಾಳಿಗೆ 2019 ರ ಡಿಸೆಂಬರ್ 19 ರಂದು ಮೃತಪಟ್ಟ ವ್ಯಕ್ತಿಗಳ ಕುಟುಂಬದವರು ನೀಡಿದ ದೂರಿಗೆ ಯಾವುದೇ ಎಫ್‌ಐಆರ್​ ಅನ್ನು ಪೊಲೀಸರು ದಾಖಲಿಸಿರಲಿಲ್ಲ. ಇದಕ್ಕೆ ಕರ್ನಾಟಕ ಹೈಕೋರ್ಟ್, ಪೊಲೀಸ್ ಪ್ರಾಧಿಕಾರವನ್ನು ದೂಷಿಸಿತ್ತು.

ಶಾಂತಿಯುತ ಪ್ರತಿಭಟನೆ ನಡೆಸುವುದು ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ ಎಂದು ಕರ್ನಾಟಕ ಹೈಕೋರ್ಟ್​ ಹೇಳಿತ್ತು.

ಪ್ರತಿ ಪ್ರತಿಭಟನೆಯೂ ಹಿಂಸಾತ್ಮಕವಾಗಲಿದೆ ಎಂಬ ಊಹೆಯ ಮೇಲೆ ರಾಜ್ಯ ಸರ್ಕಾರ ಸೆಕ್ಷನ್ 144 ಆದೇಶ ನೀಡಬಾರದು ಎಂದು ಹೈಕೋರ್ಟ್​ ಹೇಳಿತ್ತು.

ಮದ್ರಾಸ್ ಹೈಕೋರ್ಟ್:

ಮದ್ರಾಸ್ ಹೈಕೋರ್ಟ್ ಅಂಗೀಕರಿಸಿದ ಎರಡು ಮಹತ್ವದ ಆದೇಶಗಳು ನಾಗರಿಕರಿಗೆ ತಮ್ಮ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಚಲಾಯಿಸಲು ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ತಮ್ಮ ಅಭಿಪ್ರಾಯವನ್ನು ಹೇಳಲು ಅನುಕೂಲ ಮಾಡಿಕೊಟ್ಟಿತ್ತು.

ಅದೇ ರೀತಿ ಮಾರ್ಚ್ 13, 2020 ರಂದು, ಸಿಎಎ ವಿರುದ್ಧ ಸಾರ್ವಜನಿಕ ಪ್ರತಿಭಟನಾ ಸಭೆಗೆ ಅನುಮತಿ ನಿರಾಕರಿಸಿದ ತಿರುಚಿ (ಗ್ರಾಮೀಣ) ನ ಪೊಲೀಸ್ ಅಧೀಕ್ಷಕರು ನೀಡಿದ ಆದೇಶವನ್ನು ಹೈಕೋರ್ಟ್ ಬದಿಗಿಟ್ಟಿತು. ಸಾರ್ವಜನಿಕ ಸಭೆ ನಡೆಸುವ ಹಕ್ಕನ್ನು ಭಾರತದ ಸಂವಿಧಾನದ ವಿಧಿ 19 (1) (ಎ) ಮತ್ತು 19 (1) (ಬಿ) ಗೆ ನೀಡುತ್ತದೆ. ಈ ನಿಬಂಧನೆಗಳು ಎಲ್ಲಾ ನಾಗರಿಕರಿಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಶಾಂತಿಯುತವಾಗಿ ಹಾಗೂ ಶಸ್ತ್ರಾಸ್ತ್ರಗಳಿಲ್ಲದೆ ಸೇರುವ ಹಕ್ಕನ್ನು ನೀಡುತ್ತದೆ”ಎಂದು ನ್ಯಾಯಮೂರ್ತಿ ಸ್ವಾಮಿನಾಥನ್ ತೀರ್ಪಿನಲ್ಲಿ ಹೇಳಿದ್ದರು.

ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಅನಗತ್ಯ ದಂಡನೆ ಕ್ರಮವನ್ನು ತೆಗೆದುಕೊಳ್ಳಬಾರದು. ಜುಲೈ 2020 ರಲ್ಲಿ ನಡೆದ ಒಂದು ಪ್ರಮುಖ ತೀರ್ಪಿನಲ್ಲಿ, ಐಪಿಸಿಯ ಸೆಕ್ಷನ್ 172 ರಿಂದ 188 ರ ಅಡಿಯಲ್ಲಿ ಬರುವ ಯಾವುದೇ ಅಪರಾಧಗಳಿಗೆ ಎಫ್‌ಐಆರ್ ದಾಖಲಿಸಲು ಪೊಲೀಸರು ಅಧಿಕಾರಿ ಸಮರ್ಥ ವ್ಯಕ್ತಿಯಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿತ್ತು.

ಇತ್ತೀಚೆಗೆ, ನವೆಂಬರ್ 5, 2020 ರಂದು, ತಮಿಳುನಾಡಿನ ಶೆಂಕೊಟ್ಟೈನಿಂದ ಇಬ್ಬರು ಸಿಎಎ-ಎನ್ಆರ್​ಸಿ ಪ್ರತಿಭಟನಾಕಾರರ ವಿರುದ್ಧ ಸಲ್ಲಿಸಿದ ಎಫ್ಐಆರ್​​ಗಳನ್ನು ಹೈಕೋರ್ಟ್ ರದ್ದುಪಡಿಸಿತ್ತು.

ಗುವಾಹಾಟಿ ಹೈಕೋರ್ಟ್​:

ಸಿಎಎ ಪ್ರತಿಭಟನೆಯಿಂದಾಗಿ ಸ್ಥಗಿತಗೊಂಡ ಮೊಬೈಲ್ ಇಂಟರ್​ನೆಟ್​​ ಸೇವೆಯನ್ನು ಮತ್ತೆ ಪ್ರಾರಂಭಿಸುವಂತೆ ಗುವಾಹಟಿ ಹೈಕೋರ್ಟ್ ಆದೇಶ ನೀಡಿತ್ತು. ಮೊಬೈಲ್ ಇಂಟರ್​ನೆಟ್​​ ಸೇವೆಗಳನ್ನು ಸ್ಥಗಿತಗೊಳಿಸುವುದರಿಂದ ಜನಜೀವನವು ಸ್ಥಗಿತಗೊಳ್ಳುತ್ತದೆ ಎಂಬುದನ್ನು ಅರಿತ ಕೋರ್ಟ್​, ಇತ್ತೀಚೆಗೆ ಸಿಎಎ ಪ್ರತಿಭಟನೆಯ ಹಿನ್ನೆಲೆ ವೇಳೆ ಕಡಿತಗೊಂಡ ಮೊಬೈಲ್ ಇಂಟರ್​ನೆಟ್ ಸೇವೆಯನ್ನು ಪುನಃಸ್ಥಾಪಿಸಲು ಅಸ್ಸಾಂ ಸರ್ಕಾರಕ್ಕೆ ಆದೇಶಿಸಿತ್ತು.

ಅಡ್ವೊಕೇಟ್ ಬನಶ್ರೀ ಗೊಗೊಯ್, ದೇವಾ ಕನ್ಯಾ ಡೋಲೆ ಮತ್ತು ಪತ್ರಕರ್ತ ಅಜಿತ್ ಭುಯಾನ್ ಅವರು ಸಲ್ಲಿಸಿದ ಪಿಐಎಲ್‌ಗಳಲ್ಲಿ ಮುಖ್ಯ ನ್ಯಾಯಮೂರ್ತಿ ಅಜಯ್ ಲಂಬಾ ಮತ್ತು ನ್ಯಾಯಮೂರ್ತಿ ಅಚಿಂತ್ಯ ಮಲ್ಲಾ ಬುಜೋರ್ ಬರುವಾ ಅವರನ್ನೊಳಗೊಂಡ ನ್ಯಾಯಪೀಠವು ಮಧ್ಯಂತರ ಆದೇಶವನ್ನು ಅಂಗೀಕರಿಸಿತು.

ದೆಹಲಿ ನ್ಯಾಯಾಲಯಗಳ ಪ್ರತಿಕ್ರಿಯೆ:

ಸಿಎಎ ವಿರೋಧಿ ಪ್ರತಿಭಟನೆ ವೇಳೆ ಹಿಂಸಾಚಾರದ ಆರೋಪದಲ್ಲಿ ಬಂಧಿತ ವ್ಯಕ್ತಿಗಳಿಗೆ ಜಾಮೀನು ನೀಡುವ ಹಲವಾರು ಗಮನಾರ್ಹ ಆದೇಶಗಳನ್ನು ದೆಹಲಿಯ ಅಧೀನ ನ್ಯಾಯಾಲಯಗಳು ಜಾರಿಗೊಳಿಸಿದವು.

2020 ರ ಜನವರಿಯಲ್ಲಿ, ತೀಸ್ ಹಜಾರಿ ಸೆಷನ್ಸ್ ನ್ಯಾಯಾಲಯವು ಆಸಕ್ತಿದಾಯಕ ತೀರ್ಪನ್ನು ನೀಡಿದೆ. ಸಂವಿಧಾನದ ಮುನ್ನುಡಿಯನ್ನು ಓದುವುದನ್ನು ಹಿಂಸಾಚಾರದ ಪ್ರಚೋದನೆ ಎಂದು ಪರಿಗಣಿಸಲಾಗುವುದಿಲ್ಲ ಎಂದಿತ್ತು.

ಸಿಎಎಯ ಸಾಂವಿಧಾನಿಕತೆಯ ಬಗ್ಗೆ ಸುಪ್ರೀಂಕೋರ್ಟ್ ಇನ್ನೂ ತೀರ್ಪು ನೀಡದಿದ್ದರೂ, ಅಕ್ಟೋಬರ್‌ನಲ್ಲಿ ಅದು 'ಶಾಹೀನ್ ಬಾಗ್' ಪ್ರತಿಭಟನೆಯ ಮಾದರಿಯನ್ನು ಕಾನೂನುಬಾಹಿರ ಎಂದು ಘೋಷಿಸಿತು.

ತಿದ್ದುಪಡಿ ಮಸೂದೆಯನ್ನು ವಿರೋಧಿಸುವವರು ಹೇಳುವ ಪ್ರಕಾರ, ಇದು ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುತ್ತದೆ, ಭಾರತ ಸಂವಿಧಾನದ ಜಾತ್ಯತೀತತೆಯ ಮೂಲ ಆಶಯ ಮತ್ತು ತತ್ವಗಳಿಗೆ ವಿರುದ್ಧವಾಗಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಸಂವಿಧಾನದ 14ನೇ ವಿಧಿಯನ್ನು ಈ ಮಸೂದೆ ಉಲ್ಲಂಘಿಸುತ್ತದೆ ಎಂಬುದು ಕೆಲವು ಸಂವಿಧಾನ ತಜ್ಞರ ವಾದವಾಗಿದೆ.

ಅಕ್ರಮ ವಲಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಈಶಾನ್ಯ ರಾಜ್ಯಗಳು ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದವು. ಈಶಾನ್ಯ ರಾಜ್ಯಗಳಿಂದ ಕೇಳಿಬರುತ್ತಿರುವ ವಿರೋಧದಿಂದಾಗಿ ಆ ಭಾಗವನ್ನು ತಿದ್ದುಪಡಿ ಮಸೂದೆಯಿಂದ ಹೊರಗಿಟ್ಟಿರುವ ಕೇಂದ್ರ ಸರ್ಕಾರ. ಸಂವಿಧಾನದ 6ನೇ ವಿಧಿಯಡಿ ಅಸ್ಸಾಂ, ಮೇಘಾಲಯ, ತ್ರಿಪುರಾ ಮತ್ತು ಮಿಜೋರಾಂ ದೇಶಗಳನ್ನು ಸ್ವಾಯತ್ತ ಬುಡಕಟ್ಟು ಆಧಾರಿತ ರಾಜ್ಯಗಳೆಂದು ಗುರುತಿಸಲಾಗಿದೆ. ಈ ಮಸೂದೆ ಜಾರಿಗೆ ಬಂದರೆ ಅದು ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಮಿಜೋರಾಂ ರಾಜ್ಯಗಳಿಗೆ ಸಹ ಅನ್ವಯವಾಗುವುದಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.