ETV Bharat / bharat

ಮುಂದುವರಿದ ಉಗ್ರರ ಬೇಟೆ: ಪುಲ್ವಾಮಾದಲ್ಲಿ ಓರ್ವ ಭಯೋತ್ಪಾದಕನ ಹತ್ಯೆ

ಜಮ್ಮು- ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ ಮುಂದುವರಿದಿದೆ. ಇಂದು ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಉಗ್ರನನ್ನು ಸೇನಾಪಡೆ ಕೊಂದು ಹಾಕಿದೆ.

pulwama encounter
ಪುಲ್ವಾಮಾ ಎನ್​ಕೌಂಟರ್
author img

By

Published : Jun 18, 2020, 10:45 AM IST

ಶ್ರೀನಗರ(ಜಮ್ಮು ಕಾಶ್ಮೀರ): ಬೆಳ್ಳಂಬೆಳಗ್ಗೆ ನಡೆದ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರನನ್ನು ಸೇನಾಪಡೆ ಹೊಡೆದುರುಳಿಸಿದೆ.

ನಿಖರ ಮಾಹಿತಿ ಆಧರಿಸಿ ಸೇನಾಪಡೆ ಪುಲ್ವಾಮಾ ಜಿಲ್ಲೆಯ ಪ್ಯಾಂಪೋರ್ ಬಳಿಯ ಮೀಜ್ ಗ್ರಾಮದಲ್ಲಿ ಭಯೋತ್ಪಾದಕರಿಗಾಗಿ ಶೋಧ ಕಾರ್ಯ ನಡೆಸಿತ್ತು. ಈ ವೇಳೆ, ಉಗ್ರರು ಹಾಗೂ ಸೇನೆಯ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಓರ್ವ ಭಯೋತ್ಪಾದಕನನ್ನು ಸೇನೆ ಗುಂಡಿಕ್ಕಿ ಕೊಂದಿದೆ.

ಈಗ ಉಳಿದ ಭಯೋತ್ಪಾದಕರಿಗಾಗಿ ಸೇನೆ ಶೋಧ ಕಾರ್ಯ ಮುಂದುವರೆಸಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಏಪ್ರಿಲ್​ 1ರಿಂದ ಜೂನ್ 10ರವರೆಗೆ ಸುಮಾರು 68 ಭಯೋತ್ಪಾದಕರನ್ನು ಹತ್ಯೆ ಮಾಡಿರುವುದಾಗಿ ಸೇನಾ ಮೂಲಗಳು ಸ್ಪಷ್ಟ ಪಡಿಸಿವೆ. ಈ ಭಯೋತ್ಪಾದಕರಲ್ಲಿ ಹೆಚ್ಚಿನವರು ಹಿಜ್ಬುಲ್​ ಮುಜಾಹಿದ್ದೀನ್ ಸಂಘಟನೆಗೆ ಸೇರಿದವರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.