ETV Bharat / bharat

ಮತ್ತೊಬ್ಬ ಯೋಧ ಹುತಾತ್ಮ: ಚೀನಾ - ಭಾರತ ಸಂಘರ್ಷದಲ್ಲಿ ಹುತಾತ್ಮ ಯೋಧರ ಸಂಖ್ಯೆ 22ಕ್ಕೇರಿಕೆ!

ಕಳೆದ ಕೆಲ ದಿನಗಳ ಹಿಂದೆ ಲಡಾಖ್​ನ ಗಾಲ್ವಾನ್​ ವ್ಯಾಲಿ ಪ್ರದೇಶದಲ್ಲಿ ಭಾರತ - ಚೀನಾ ನಡುವೆ ನಡೆದ ಸಂಘರ್ಷದಲ್ಲಿ 20 ಯೋಧರು ಹುತಾತ್ಮರಾಗಿ, ಅನೇಕರು ಗಂಭೀರವಾಗಿ ಗಾಯಗೊಂಡಿದ್ದರು.

martyr in china border
martyr in china border
author img

By

Published : Jun 27, 2020, 2:48 PM IST

ಪಟಿಯಾಲ್​(ಪಂಜಾಬ್)​: ಭಾರತ - ಚೀನಾ ನಡುವಿನ ಸಂಘರ್ಷದಲ್ಲಿ ಗಾಯಗೊಂಡಿದ್ದ ಭಾರತೀಯ ಮತ್ತೊಬ್ಬ ಯೋಧ ಇಂದು ಹುತಾತ್ಮರಾಗಿದ್ದಾರೆ. ಸಂಘರ್ಷದ ವೇಳೆ, ಗಾಯಗೊಂಡಿದ್ದ ಈ ಯೋಧ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

one more punjab based army man
ಸಲೀಂ ಖಾನ್​ ಹುತಾತ್ಮ ಯೋಧ

ಸಲೀಂ ಖಾನ್​ ಹುತಾತ್ಮ ಯೋಧ. ಪಟಿಯಾಲ​ದ ಮರ್ದಾನೇರಿ ಗ್ರಾಮದವರಾಗಿದ್ದಾರೆ. ಹುತಾತ್ಮ ಯೋಧನ ಪಾರ್ಥಿವ ಶರೀರವನ್ನ ಇಂದು ಸ್ವಗ್ರಾಮಕ್ಕೆ ತರಲಾಗುವುದು ಎಂದು ಸೇನಾ ಮೂಲಗಳು ತಿಳಿಸಿದ್ದು, ಮುಸ್ಲಿಂ ಸಂಪ್ರದಾಯದಂತೆ ಅವರ ಅಂತ್ಯಕ್ರಿಯೆ ನಡೆಯಲಿದೆ. 23 ವರ್ಷದ ಸಲೀಂಖಾನ್​ ತಂದೆ ಮಂಗಲ್​ ದಿನಾ ಕೂಡ ಈ ಹಿಂದೆ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಹುತಾತ್ಮರಾಗಿದ್ದರು.

ಭಾರತ - ಚೀನಾ ಗಡಿ ಪ್ರದೇಶದಲ್ಲಿ ನಡೆದಿದ್ದ ಘರ್ಷಣೆ ವೇಳೆ ಭಾರತದ 20 ಯೋಧರು ಸ್ಥಳದಲ್ಲೇ ಹುತಾತ್ಮರಾಗಿದ್ದರು. ಇನ್ನು ಚೀನಾದ ಅನೇಕ ಯೋಧರು ಘಟನೆಯಲ್ಲಿ ಸಾವನ್ನಪ್ಪಿದ್ದರು ಎಂಬ ಮಾಹಿತಿ ಹೊರ ಬಿದ್ದಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.