ನವದೆಹಲಿ: ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಆಂದೋಲನದ ಮಧ್ಯೆ, ಇನ್ನೋರ್ವ ರೈತ ಮಂಗಳವಾರ ತಡರಾತ್ರಿ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಸಾವನ್ನಪ್ಪಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ರೈತನನ್ನು ರೋಹ್ಟಕ್ ಜಿಲ್ಲೆಯ ಪಾಕಿಸ್ಮಾ ಗ್ರಾಮದ ಜೈ ಭಗವಾನ್ ಎಂದು ಗುರುತಿಸಲಾಗಿದೆ.
ವಿಷ ಸೇವಿಸಿದ ನಂತರ ಜೈ ಭಗವಾನ್ ಅವರನ್ನು ಕೂಡಲೇ ಹತ್ತಿರದ ಸಂಜಯ್ ಗಾಂಧಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
ಮೃತ ರೈತ ಜೈ ಭಗವಾನ್ ಆಂದೋಲನ ಮಾಡುತ್ತಿದ್ದ ರೈತರಿಗೆ ಸೇವೆ ಸಲ್ಲಿಸುತ್ತಿದ್ದರು. ಅವರಿಗೆ ಹಾಲು ಮತ್ತು ತರಕಾರಿಗಳನ್ನು ಒದಗಿಸಿ ಸಹಾಯ ಮಾಡಿದ್ದರು.