ಕೊಯಂಬತ್ತೂರು(ತಮಿಳುನಾಡು): ಚೆನ್ನೈನಿಂದ ಕೊಯಂಬತ್ತೂರಿಗೆ ಇಂಡಿಗೋ ವಿಮಾನದಲ್ಲಿ ಬಂದ 24 ವರ್ಷದ ಯುವಕನಿಗೆ ಕೊರೊನಾ ವೈರಸ್ ದೃಢಪಟ್ಟಿದೆ.
ಇಂಡಿಗೋ 6E 381 ವಿಮಾನದಲ್ಲಿ ನಿನ್ನೆ ರಾತ್ರಿ 8 ಗಂಟೆಗೆ ಚೆನ್ನೈಗೆ ಬಂದಿಳಿದ ಪ್ರಯಾಣಿಕರನ್ನು ಕಡ್ಡಾಯ ತಪಾಸಣೆ ಮತ್ತು ಸ್ಕ್ರೀನಿಂಗ್‌ಗೆ ಒಳಪಡಿಸಿದಾಗ ಸೋಂಕು ಪತ್ತೆಯಾಗಿದೆ.
ಕೂಡಲೇ ಎಚ್ಚೆತ್ತ ವಿಮಾನದ ಸಿಬ್ಬಂದಿ ಸೋಂಕಿತ ಯುವಕಕನ್ನು ಸಮೀಪದ ಇಎಸ್‌ಐ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಂಡಿಗೋ ವಿಮಾನದಲ್ಲಿ ಬಂದ ಎಲ್ಲಾ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲಾಗಿದೆ. ಮಾತ್ರಲ್ಲದೆ ತಕ್ಷಣವೇ ಎಲ್ಲರ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ.
ಎರಡು ತಿಂಗಳ ಬಳಿಕ ಕೋವಿಡ್-19ನಿಂದ ಸ್ಥಗಿತವಾಗಿದ್ದ ದೇಶಿಯ ವಿಮಾನ ಹಾರಾಟ ನಿನ್ನೆಯಷ್ಟೇ ಆರಂಭವಾಗಿತ್ತು. 532 ವಿಮಾನಗಳು ಹಾರಾಟ ನಡೆಸಿದ್ದು, 39,231 ಮಂದಿ ಪ್ರಯಾಣಿಸಿದ್ದಾರೆ.