ನವದೆಹಲಿ: ಭಾರತದಲ್ಲಿ ನಿನ್ನೆ 19,587 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ವೈರಸ್ ಸುಳಿಯಲ್ಲಿ ಸಿಲುಕಿ ಅದರಿಂದ ಚೇತರಿಸಿಕೊಂಡವರ ಸಂಖ್ಯೆ ಕೋಟಿ ಗಡಿ (1,00,16,859) ದಾಟಿದೆ. ಇತ್ತ ರೂಪಾಂತರಿ ಕೊರೊನಾ ವೈರಸ್ ಕೇಸ್ಗಳ ಸಂಖ್ಯೆ 73ಕ್ಕೆ ಏರಿಕೆಯಾಗಿದೆ.
-
#IndiaFightsCorona #Unite2FightCorona pic.twitter.com/fbBsSeMSV1
— Ministry of Health (@MoHFW_INDIA) January 7, 2021 " class="align-text-top noRightClick twitterSection" data="
">#IndiaFightsCorona #Unite2FightCorona pic.twitter.com/fbBsSeMSV1
— Ministry of Health (@MoHFW_INDIA) January 7, 2021#IndiaFightsCorona #Unite2FightCorona pic.twitter.com/fbBsSeMSV1
— Ministry of Health (@MoHFW_INDIA) January 7, 2021
ಕಳೆದ 7 ದಿನಗಳಿಂದ ಮಿಲಿಯನ್ ಜನಸಂಖ್ಯೆಗೆ ಭಾರತದಲ್ಲಿ ವರದಿಯಾದ ಕೇಸ್ಗಳು ಹಾಗೂ ಸಾವು ಕೋವಿಡ್ ಪೀಡಿತ ಇತರ ರಾಷ್ಟ್ರಗಳಿಗಿಂತ ಕಡಿಮೆಯಿದೆ ಎಂದು ಆರೋಗ್ಯ ಇಲಾಖೆ ಟ್ವೀಟ್ ಮಾಡಿದೆ.
ಬುಧವಾರ 20,346 ಸೋಂಕಿತರು ಪತ್ತೆಯಾಗಿದ್ದು, 222 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಪ್ರಕರಣಗಳ ಸಂಖ್ಯೆ 1,03,95,278 ಹಾಗೂ ಮೃತರ ಸಂಖ್ಯೆ 1,50,336ಕ್ಕೆ ಏರಿಕೆಯಾಗಿದೆ. ಇನ್ನು 2,28,083 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಜನವರಿ 6ರ ವರೆಗೆ 17,84,00,995 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 9,37,590 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.