ನವದೆಹಲಿ: ದೇಶದಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲೂ ಏರಿಕೆ ಕಾಣ್ತಿದೆ. ಇದು ಜನರಲ್ಲಿ ಭೀತಿ ಮೂಡಿಸಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 2293 ಹೊಸ ಕೇಸ್ಗಳು ದಾಖಲಾಗಿದ್ದು, ಇದು ಈವರೆಗಿನ ಒಂದೇ ದಿನದ ಅತಿ ಹೆಚ್ಚು ಸೋಂಕು ಪ್ರಕರಣ. ಆದರೆ, ಜನ ಹಾಗಂತಾ ಹೆಚ್ಚು ಭೀತಿಗೊಳಗಾಗುವ ಅಗತ್ಯವೂ ಇಲ್ಲ. ಯಾಕಂದ್ರೆ, ದೇಶದಲ್ಲಿ ಹೆಚ್ಚು ಹೆಚ್ಚು ಜನ ಸೋಂಕಿನಿಂದ ಗುಣಮುಖರಾಗುತ್ತಿದ್ದಾರೆ. ಇದು ಒಂದ್ರೀತಿ ಆಶಾಭಾವ ಮೂಡಿಸುತ್ತಿದೆ.
ಕಳೆದ 24 ಗಂಟೆಯಲ್ಲಿ ದೇಶದಲ್ಲಿ 1062 ಜನ ಗುಣಮುಖ: ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಸಾವಿರಕ್ಕೂ ಅಧಿಕ ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದು ಜನರಲ್ಲಿ ಒಂಚೂರು ಖುಷಿ ತರಿಸಿದೆ. ಕಳೆದ ತಿಂಗಳ 30ರಂದು ದೇಶದಲ್ಲಿ ಒಟ್ಟು 629 ಜನ ಗುಣಮುಖರಾಗಿದ್ರೆ, ಮೇ 1ರಂದು 564 ಜನ ಸೋಂಕಿನಿಂದ ಮುಕ್ತಿ ಪಡೆದಿದ್ದರು. ಮತ್ತೆ ಇಂದು 1062 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಜೊತೆಗೆ ಸೋಂಕಿನಿಂದ ಮುಕ್ತರಾಗುತ್ತಿರುವವರ ಸಂಖ್ಯೆಯಲ್ಲೂ ಏರಿಕೆ ಕಂಡಿದೆ.
ಸದ್ಯ ದೇಶದಲ್ಲಿ ಒಟ್ಟು 37,336 ಕೊರೊನಾ ಪ್ರಕರಣ ದಾಖಲಾಗಿವೆ. ಇದರಲ್ಲಿ ಈವರೆಗೆ ಒಟ್ಟು 9951 ಜನ ಗುಣಮುಖರಾಗಿದ್ದಾರೆ. ಒಟ್ಟು 1218 ಮಂದಿ ಸಾವನ್ನಪ್ಪಿದ್ದಾರೆ. ಉಳಿದಂತೆ 26,167 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.