ನವದೆಹಲಿ: ಕೇಂದ್ರದ ಮಾಜಿ ಸಚಿವ ಎಂಜೆ ಅಕ್ಬರ್ ಅವರು ಪತ್ರಕರ್ತ ಪ್ರಿಯಾ ರಮಣಿ ಅವರ ವಿರುದ್ಧ ಸಲ್ಲಿಸಿದ್ದ ಕ್ರಿಮಿನಲ್ ಮಾನಹಾನಿ ಅರ್ಜಿ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ ರಾಜಿಗೆ ಮುಂದಾಗಿದೆ. ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಅವರಿಬ್ಬರ ನಡುವೆ ರಾಜಿಗೆ ಅವಕಾಶವಿದೆಯೇ ಎಂದು ಶನಿವಾರ ಕೇಳಿದೆ.
20 ವರ್ಷಗಳ ಹಿಂದೆ ಪತ್ರಕರ್ತೆಯಾಗಿದ್ದ ವೇಳೆ ತಮ್ಮ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿದ್ದ ಪ್ರಿಯಾ ರಮಣಿ ಎಂಜೆ ಅಕ್ಬರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. 2018ರಲ್ಲಿ ಮೀಟೂ ಅಭಿಯಾನ ಪ್ರಾರಂಭವಾಗುತ್ತಿದ್ದಂತೆ ಎಂಜೆ ಅಕ್ಬರ್ ವಿರುದ್ಧ ರಮಣಿ ಆರೋಪ ಮಾಡುವ ಮೂಲಕ ಸಾರ್ವಜನಿಕ ವಲದಲ್ಲಿ ತಮ್ಮ ವೇದನೆಯನ್ನು ಬಿಚ್ಚಿಟ್ಟರು.
ಈ ಪ್ರಕರಣದ ಬಗ್ಗೆ ಅಂತಿಮ ವಾದವನ್ನು ಆರಂಭಿಸಿದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ರವೀಂದ್ರ ಕುಮಾರ್ ಪಾಂಡೆ ಈ ಪ್ರಶ್ನೆಯನ್ನು ಅವರ ಮುಂದಿಟ್ಟರು. ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಮುನ್ನ ತನ್ನ ಕಕ್ಷಿದಾರರ ಮಾತನಾಡಬೇಕಿದೆ ಎಂದು ಅಕ್ಬರ್ ಪರ ವಕೀಲರು ಸಮಯಾವಕಾಶ ಕೇಳಿದ್ದಾರೆ. ಒಪ್ಪಂದದ ಬಗ್ಗೆ ಇಬ್ಬರು ಪ್ರತಿಕ್ರಿಯಿಸುವಂತೆ ತಿಳಿಸಿದ ನ್ಯಾಯಾಲಯ, ನ. 24ಕ್ಕೆ ಮುಂದಿನ ವಿಚಾರಣೆಯನ್ನು ಮುಂದೂಡಿತು.