ETV Bharat / bharat

ಈಶಾನ್ಯ ದೆಹಲಿ ಗಲಭೆ ಪ್ರಕರಣ : ರಾಹುಲ್ ರಾಯ್, ಸಬಾ ದಿವಾನ್​ಗೆ ಪೊಲೀಸ್​ ಸಮನ್ಸ್ - ಚಿತ್ರ ನಿರ್ಮಾಪಕರಿಗೆ ಪೊಲೀಸ್​ ಸಮನ್ಸ್

ಸಿಎಎ ಪ್ರತಿಭಟನೆ ವೇಳೆ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಇಬ್ಬರು ಚಿತ್ರ ನಿರ್ಮಾಪಕರಿಗೆ ವಿಚಾರಣೆಗೆ ಹಾಜಾರಾಗುವಂತೆ ಪೊಲೀಸರು ಸಮನ್ಸ್ ನೀಡಿದ್ದಾರೆ.

Delhi Police summons Rahul Roy, Saba Dewan
ದೆಹಲಿ ಗಲಭೆ ಪ್ರಕರಣ
author img

By

Published : Sep 14, 2020, 6:23 PM IST

ನವದೆಹಲಿ : ಸಿಎಎ ಪ್ರತಿಭಟನೆ ವೇಳೆ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಕಿರು ಚಿತ್ರ ನಿರ್ಮಾಪಕ ರಾಹುಲ್ ರಾಯ್ ಮತ್ತು ಸಾಕ್ಷ್ಯಚಿತ್ರ ನಿರ್ಮಾಪಕ ಸಬಾ ದಿವಾನ್​ಗೆ ದೆಹಲಿ ಪೊಲೀಸರ ವಿಶೇಷ ವಿಭಾಗ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.

ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್​ನನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಪೊಲೀಸರು ಬಂಧಿಸಿದ ಒಂದು ದಿನದ ಬಳಿಕ ರಾಹುಲ್ ರಾಯ್ ಮತ್ತು ಸಬಾ ದಿವಾನ್​ಗೆ ಸಮನ್ಸ್ ನೀಡಲಾಗಿದೆ. ಸತತ 11 ಗಂಟೆಗಳ ವಿಚಾರಣೆಯ ಬಳಿಕ ಉಮರ್​ ಖಾಲಿದ್​ನನ್ನು ಪೊಲೀಸರು ಬಂಧಿಸಿದ್ದರು.

2020 ಫೆಬ್ರವರಿ 24 ರಂದು ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ-ವಿರೋಧ ಗುಂಪುಗಳ ನಡುವೆ ನಡೆದ ಹಿಂಸಾಚಾರದಲ್ಲಿ 53 ಜನರ ಮೃತಪಟ್ಟಿದ್ದರು, ಸುಮಾರು 200 ರಷ್ಟು ಜನರು ಗಾಯಗೊಂಡಿದ್ದರು. .

ETV Bharat Logo

Copyright © 2025 Ushodaya Enterprises Pvt. Ltd., All Rights Reserved.