ನವದೆಹಲಿ: ದೇಶಾದ್ಯಂತ ಕೊರೊನಾ ಹಾವಳಿ ಜೋರಾಗಿದೆ. ಇದರ ಮಧ್ಯೆ ಕೇಂದ್ರ ಸರ್ಕಾರ ಎಲ್‌ಪಿಜಿ ಸಬ್ಸಿಡಿ ರಹಿತ ಗ್ಯಾಸ ಬಳಕೆದಾರರಿಗೆ ಶುಭ ಸುದ್ದಿ ನೀಡಿದ್ದು, ಗ್ಯಾಸ್ ಬೆಲೆಯಲ್ಲಿ ಬಾರಿ ಇಳಿಕೆ ಮಾಡಿದೆ.
ಮೆಟ್ರೋ ಸಿಟಿಗಳಲ್ಲಿ ಸಿಬ್ಸಿಡಿ ರಹಿತ ಅಡುಗೆ ಅನಿಲ ಬಳಕೆ ಮಾಡುವ ಗ್ರಾಹಕರ ಪ್ರತಿ ಸಿಲಿಂಡರ್ ಮೇಲೆ 61.5 ಪೈಸೆಯಿಂದ 65 ರೂ ಕಡಿಮೆ ಮಾಡಿದೆ. ಈ ಹಿಂದೆ ಮಾರ್ಚ್ ತಿಂಗಳಲ್ಲೂ ಎಲ್‌ಪಿಜಿ ಸಿಲಿಂಡರ್ ಬೆಲೆ ಕಡಿಮೆ ಮಾಡಿ ಆದೇಶ ಹೊರಹಾಕಿದ್ದ ಕೇಂದ್ರ ಇದೀಗ ಮತ್ತಷ್ಟು ಕಡಿಮೆ ಮಾಡಿದೆ.
ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾಗಿರುವ ಕಾರಣ ಏಪ್ರಿಲ್ 1ರಿಂದಲೇ ಸಿಲಿಂಡರ್ ಬೆಲೆ ಇಳಿಕೆ ಮಾಡಿ ಆದೇಶಿಸಿದೆ. 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 61.5ರಷ್ಟು ಇಳಿಕೆಯಾಗಿದ್ದು, 805.5 ರು ಬದಲಿಗೆ 744 ರೂ ನೀಡಬೇಕಾಗಿದೆ.
ಇನ್ನು ಕೋಲ್ಕತಾದಲ್ಲಿ 774.5 (ಹಿಂದಿನ ದರ 839.5 ರೂ), ಮುಂಬೈ 714.5 ರೂ( ಹಿಂದಿನ 776.5 ರೂ), ಚೆನ್ನೈ 761.5 ರೂ. (ಹಿಂದಿನ ದರ 826 ರೂ) ಹಾಗೂ ಬೆಂಗಳೂರು 802.7 ರೂ(ಹಿಂದಿನ ದರ 862.50ರೂ). ಆಗಿತ್ತು.