ಪ್ರಶ್ನೆ: ಕಾಂಗ್ರೆಸ್ನ 23 ಹಿರಿಯ ನಾಯಕರು ಬರೆದ ಪತ್ರವೊಂದು ಪಕ್ಷದ ನಾಯಕತ್ವದ ವಿಚಾರವನ್ನು ಮುನ್ನೆಲೆಗೆ ತಂದಿದೆ. ಪಕ್ಷದ ಹಿರಿಯ ನಾಯಕರ ವಿರುದ್ಧ ಕಿರಿಯ ನಾಯಕರು ತಂದಿಟ್ಟಿರುವ ಈ ಚರ್ಚೆ ಪಕ್ಷದ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆಯೇ?
ಉತ್ತರ: ನೋಡಿ, ಆರಂಭದಿಂದಲೂ ಕಾಂಗ್ರೆಸ್ ಪಕ್ಷವು ಯುವ ನಾಯಕರನ್ನು ಬೆಂಬಲಿಸಿದೆ ಮತ್ತು ಉತ್ತೇಜಿಸುತ್ತಾ ಬಂದಿದೆ. ಇಂದಿರಾ ಗಾಂಧಿಯವರ ಆಡಳಿತದ ಸಮಯದಲ್ಲಿ, ಅನೇಕ ಯುವಕರು ಪಕ್ಷಕ್ಕೆ ಸೇರಿದ್ದರು. ಸಂಜಯ್ ಗಾಂಧಿಯವರು ಕಮಲ್ ನಾಥ್ ಅವರಂತಹ ಅನೇಕ ಯುವ ನಾಯಕರನ್ನು ಪಕ್ಷಕ್ಕೆ ಕರೆತಂದರು. ನಂತರ, ರಾಜೀವ್ ಗಾಂಧಿ ಅಧಿಕಾರ ವಹಿಸಿಕೊಂಡಾಗ, ನಾನು, ಗುಲಾಮ್ ನಬಿ ಆಜಾದ್, ಅಹ್ಮದ್ ಪಟೇಲ್, ಆನಂದ್ ಶರ್ಮಾ ಮತ್ತು ಮುಕುಲ್ ವಾಸ್ನಿಕ್ ಸೇರಿದಂತೆ ಹಲವಾರು ಯುವಕರು ಕೈ ಪಾಳಯಕ್ಕೆ ಬಂದರು. ನಮ್ಮ ನಂತರ ಅವಿನಾಶ್ ಪಾಂಡೆ ಅವರಂತಹ ಯುವಕರು ಬಂದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತೆಯೇ, ರಾಹುಲ್ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಸೇರಿದ ನಂತರ ರಾಜೀವ್ ಸತವ್ ಮತ್ತು ಗೌರವ್ ಗೊಗೊಯ್ ಅವರಂತಹ ಅನೇಕ ಯುವಕರು ಬಂದರು. ಕಾಂಗ್ರೆಸ್ ಯುವ ಪೀಳಿಗೆಯ ಬಗ್ಗೆ ಸಹಜ ಒಲವು ಹೊಂದಿದೆ. ಪಕ್ಷದಲ್ಲಿ ಹಿರಿಯರ ನಾಯಕತ್ವ ಸಂಬಂಧ ಯಾವುದೇ ಚರ್ಚೆ ಇಲ್ಲ. ನಾವೆಲ್ಲರೂ ಯುವ ಪೀಳಿಗೆಗೆ ಅವಕಾಶ ಕಲ್ಪಿಸಲು ಸಿದ್ಧರಿದ್ದೇವೆ ಮತ್ತು ಅವರನ್ನು ಬೆಂಬಲಿಸುತ್ತೇವೆ. ಆದರೂ ಜ್ಯೋತಿರಾದಿತ್ಯ ಸಿಂಧಿಯಾ ಅವರಂತಹ ಒಂದು ಅಥವಾ ಎರಡು ನಿದರ್ಶನಗಳಿರಬಹುದು. ಅಲ್ಪಾವಧಿಯಲ್ಲಿ ಅವರಿಗೆ ಪಕ್ಷವು ಬಹಳಷ್ಟು ಗೌರವ ನೀಡಿತು. ಜ್ಯೋತಿರಾದಿತ್ಯ ಅವರು ಪಕ್ಷಕ್ಕೆ ಮರಳಿ ಬಂದಿದ್ದರೆ ಅವರು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗುತ್ತಿದ್ದರು. ಆದರೆ ಅವನು ಅಸಹನೆ ತೋರಿಸಿ ಪಕ್ಷ ತ್ಯಜಿಸಿ ಹೊರಟು ಹೋದರು.
ಪ್ರಶ್ನೆ: ಹಾಗಿದ್ದಲ್ಲಿ, ಕಾಂಗ್ರೆಸ್ ಹಿರಿಯ ನಾಯಕರು ಎತ್ತಿದ ನಾಯಕತ್ವದ ವಿಷಯಗಳ ಬಗ್ಗೆ ಚರ್ಚಿಸಲು ಆಗಸ್ಟ್ 24 ರಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(CWC) ಸಭೆಯಲ್ಲಿ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಅವರನ್ನು ಏಕೆ ಗುರಿಯಾಗಿಸಲಾಯಿತು?
ಉತ್ತರ: ನೋಡಿ, ಪತ್ರ ಬರೆಯುವುದು ಯಾರೊಬ್ಬರ ಉದ್ದೇಶವಾಗಿರಲಿಲ್ಲ. ಸಮಯ ಮತ್ತು ಅದು ಮಾಧ್ಯಮಗಳಿಗೆ ತಲುಪಿದ ರೀತಿ, ಜೊತೆಗೆ ಅದು ಸೋರಿಕೆಯಾದ ಬಗೆ CWC ಸದಸ್ಯರನ್ನು ಅಸಮಾಧಾನಗೊಳಿಸಿತು. ಇದೇ ವಿಚಾರ ಅವರನ್ನು ನಿರಾಶೆಗೊಳಿಸಿತು. ಇನ್ನೊಂದೆಡೆ ಅದು ಯಾಕೆ ಸಂಭವಿಸಿತು ಎಂದು ಅವರೆಲ್ಲಾ ಆಶ್ಚರ್ಯಪಡುವಂತಾಗಿದೆ? ಆಜಾದ್ ಒಬ್ಬ ಅನುಭವಿ ರಾಜಕಾರಣಿ. ವಾಸ್ತವವಾಗಿ, ಆಜಾದ್, ಅಹ್ಮದ್ ಪಟೇಲ್ ಮತ್ತು ಅಂಬಿಕಾ ಸೋನಿ ಅವರಿಗೆ ಪಕ್ಷದಲ್ಲಿ ವಿಶೇಷ ಸ್ಥಾನವಿದೆ. ನಾವು ಅವರನ್ನು ಎಂದಿಗೂ ಗೌರವಿಸುತ್ತೇವೆ. ಆಜಾದ್ ಅವರನ್ನು ಪಕ್ಷದ ಟ್ರಬಲ್ ಶೂಟರ್ ಎಂದು ಪರಿಗಣಿಸಲಾಗಿತ್ತು. ನಾವು ಏನಾದರೂ ತಪ್ಪು ಮಾಡಿದರೆ, ಆಜಾದ್ ಅದನ್ನು ಸರಿಪಡಿಸುತ್ತಿದ್ದರು. ಅಹ್ಮದ್ ಪಟೇಲ್ ಅವರೂ ಹೀಗೇ ಇದ್ದವರು. ಪತ್ರ ಸೋರಿಕೆಯಾದಾಗ ಅದರ ಹಿಂದೆ ಅಜಾದ್ ಹೆಸರು ಬಂದಿರುವುದನ್ನು ನೋಡಿ ನಾವು ಆಶ್ಚರ್ಯಪಟ್ಟಿದ್ದಂತೂ ಸತ್ಯ. ಪತ್ರ ಸೋರಿಕೆಯಾದ ಬಗ್ಗೆ ಸಿಡಬ್ಲ್ಯೂಸಿ ಸದಸ್ಯರು ತಮ್ಮ ಕಳವಳವನ್ನು ವ್ಯಕ್ತಪಡಿಸಿದರು. ಇದು ಸಭೆಯಲ್ಲಿ ಚರ್ಚೆಯನ್ನು ಹೆಚ್ಚಿಸಿತು. ಆದರೆ ಕೊನೆಯಲ್ಲಿ ನಮ್ಮೆಲ್ಲರ ಭಾವನೆಗಳಿಗೆ ಅರ್ಥ ಕೊಡುವೆ ಬಗ್ಗೆ ಸೋನಿಯಾ ಗಾಂಧಿ ನಮ್ಮೆಲ್ಲರಿಗೂ ಭರವಸೆ ನೀಡಿದರು.
ಪ್ರಶ್ನೆ: ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಮರಳಿ ಬರುತ್ತಿರುವ ಬಗ್ಗೆ ಪಕ್ಷದಲ್ಲಿ ಅವರ ಕಳವಳವಿದೆಯೇ?
ಉತ್ತರ: ರಾಹುಲ್ ಬೇಗನೆ ಅಧಿಕಾರ ವಹಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ. ಇದು ಸಿಡಬ್ಲ್ಯೂಸಿ ಸಭೆಯ ಸರ್ವಾನುಮತದ ದೃಷ್ಟಿಕೋನವಾಗಿತ್ತು. ಆಗಸ್ಟ್ 2019 ರಲ್ಲಿ ನಡೆದ ವಿಸ್ತೃತ ಸಿಡಬ್ಲ್ಯೂಸಿ ಸಭೆ ಕೂಡ ರಾಹುಲ್ ಅವರ ರಾಜೀನಾಮೆಯನ್ನು ಹಿಂಪಡೆಯುವಂತೆ ಒತ್ತಾಯಿಸಿತ್ತು. ಅವರ ನಾಯಕತ್ವದ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರಿಗೆ ಸಂಪೂರ್ಣ ನಂಬಿಕೆ ಇದೆ. ಪಕ್ಷಕ್ಕೆ ಸಾಕಷ್ಟು ಸವಾಲುಗಳು ಎದುರಾದ ಸಂದರ್ಭದಲ್ಲಿ ರಾಹುಲ್ ಅಧಿಕಾರ ವಹಿಸಿಕೊಂಡರು. ಇಂದು, ದೇಶದಲ್ಲಿ ಸಂಸದೀಯ ವ್ಯವಸ್ಥೆ ಮತ್ತು ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ಪ್ರಶ್ನಿಸುವಂತಾಗಿದೆ. ಪ್ರಧಾನಿ ಮೋದಿ ಮತ್ತು ಅವರ ಸರ್ಕಾರದ ಕಾರ್ಯ ಶೈಲಿಗೆ ರಾಹುಲ್ ಸೂಕ್ತ ಉತ್ತರ ನೀಡುತ್ತಿದ್ದಾರೆ. ಅವರು ಕಾಂಗ್ರೆಸ್ ನಾಯಕರಾಗಿ ಹೊರಹೊಮ್ಮಿರುವ ಜೊತೆಗೆ ಪ್ರತಿಪಕ್ಷದ ನಾಯಕನಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ, ಕಾಂಗ್ರೆಸ್ಗೆ ಯುವ ನಾಯಕ ಮತ್ತು ಭಾರತಕ್ಕೆ ಯುವ ವಿರೋಧ ಪಕ್ಷದ ನಾಯಕನ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ಅವರು ದೇಶಾದ್ಯಂತ ಪ್ರವಾಸ ಕೈಗೊಂಡು ಜನರನ್ನು ಭೇಟಿ ಮಾಡಿರುವ ಅನುಭವವನ್ನು ಗಳಿಸಿದ್ದಾರೆ. ಅದರೆ ಈಗ ಸಮಯ ಬದಲಾಗುತ್ತಿವೆ. ಜನರು ರೊಟ್ಟಿ ಮತ್ತು ಬೆಣ್ಣೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಎತ್ತಲು ಪ್ರಾರಂಭಿಸಿದ್ದಾರೆ. ಇವೆಲ್ಲದರ ನಡುವೆ ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಅಧಿಕಾರ ವಹಿಸಿಕೊಳ್ಳುವ ಸಮಯ ಬಂದಿದೆ.
ಪ್ರಶ್ನೆ: ಕಳೆದ ಎರಡು ದಶಕಗಳಿಂದ ಸಿಡಬ್ಲ್ಯೂಸಿ ಚುನಾವಣೆಗಳು ನಡೆದಿಲ್ಲ ಎಂಬುದರ ಬಗ್ಗೆ ಏನು ಹೇಳುತ್ತೀರಿ?
ಉತ್ತರ: ಇದು ಸಾರ್ವಜನಿಕವಾಗಿ ಚರ್ಚಿಸಬೇಕಾಗಿರುವ ವಿಷಯವಲ್ಲ. ಪಕ್ಷದ ಆಂತರಿಕ ವೇದಿಕೆಗಳಲ್ಲಿ ಚರ್ಚಿಸಬೇಕಿರುವ ವಿಷಯ. ಸಿಡಬ್ಲ್ಯುಸಿ ಮತ್ತೊಮ್ಮೆ ಸಭೆ ಸೇರಬೇಕೆಂದರೆ ಮತ್ತು ಜಿಲ್ಲಾ ಮಟ್ಟದ ಪಕ್ಷದ ವಿವಿಧ ಹುದ್ದೆಗಳಿಗೆ ಚುನಾವಣೆ ನಡೆಯಬೇಕಾದರೆ ನಾಯಕರನ್ನು ಸಂಪರ್ಕಿಸಬೇಕು. ಈ ಬಗ್ಗೆ ಅಜಾದ್ ಅವರು ಹೊಸತನ್ನೇನು ಹೇಳುತ್ತಿಲ್ಲ. ಇವೆಲ್ಲಾ ಹಳೆ ಕಾಲದಿಂದಲೂ ಪಕ್ಷದಲ್ಲಿರುವ ವಿಚಾರಗಳು. ವಾಸ್ತವದಲ್ಲಿ, ಯುವ ಕಾಂಗ್ರೆಸ್ ಅನ್ನು ಆರಂಭಿಸಿ ಆ ವಿಭಾಗದಲ್ಲಿ ಆಂತರಿಕ ಚುನಾವಣೆಗಳನ್ನು ಪ್ರಾರಂಭಿಸಿದವರು ರಾಹುಲ್ ಗಾಂಧಿ. ರಾಹುಲ್ ಅಧಿಕಾರ ವಹಿಸಿಕೊಂಡರೆ, ಅವರು ಖಂಡಿತವಾಗಿಯೂ ಪಕ್ಷದ ಆಂತರಿಕ ಚುನಾವಣೆಗಳಿಗೆ ಆದ್ಯತೆ ನೀಡುತ್ತಾರೆ. ಆದರೆ ಇಂದು, ದೇಶವು ಎದುರಿಸುತ್ತಿರುವ ಪ್ರಮುಖ ಸವಾಲುಗಳು ನಮ್ಮ ಗಮನವನ್ನು ಕೇಂದ್ರೀಕರಿಸುತ್ತದೆ. ಆಂತರಿಕ ಚುನಾವಣೆಗಳು ನಡೆಯಬೇಕು ಎಂದು ನಾವೆಲ್ಲರೂ ತಾತ್ವಿಕವಾಗಿ ಒಪ್ಪುತ್ತೇವೆ. ಆದರೆ ಅದಕ್ಕೆ ಸೂಕ್ತ ಸಮಯ ಬರಬೇಕಿದೆ.
ಪ್ರಶ್ನೆ: ಕಾಂಗ್ರೆಸ್ ಪಕ್ಷ ಆಕ್ರಮಣಕಾರಿ ಪ್ರತಿಪಕ್ಷವಾಗಿ ಗುರುತಿಸಿಕೊಳ್ಳಲು ಯಾಕೆ ಸಾಧ್ಯವಾಗುತ್ತಿಲ್ಲ?
ಉತ್ತರ: ದುರದೃಷ್ಟವಶಾತ್, ಕಳೆದ ಎರಡು ವರ್ಷಗಳಿಂದ ನಾವು ಅಸ್ವಾಭಾವಿಕ ರಾಜಕೀಯ ಸನ್ನಿವೇಶವನ್ನು ನೋಡುತ್ತಿದ್ದೇವೆ. ಆದರೆ ಅದು ಕಾಂಗ್ರೆಸ್ ಕಾರ್ಯ ವಿಧಾನಕ್ಕೆ ಸರಿಹೊಂದುವುದಿಲ್ಲ. ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘವು ದೇಶದ ರಾಜಕೀಯವನ್ನು ಕೋಮುವಾದಿ ರೇಖೆಗಳಲ್ಲಿ ವಿಭಜಿಸುವಲ್ಲಿ ಯಶಸ್ವಿಯಾಗಿದೆ. 2017 ರ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ನಾವು ಅದನ್ನು ನೋಡಿದ್ದೇವೆ. ಯುಪಿಯಲ್ಲಿ ನಾವು ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದು ನಾವು ಆಶಿಸಿದ್ದೆವು ಮತ್ತು ಉತ್ತರಾಖಂಡದಲ್ಲೂ ಇದೇ ರೀತಿಯ ಭರವಸೆ ಇತ್ತು. ಆದರೆ ಮತದಾನ ಅಭಿಯಾನದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು 'ಕಬ್ರಿಸ್ತಾನ್-ಶಮ್ಶನ್' ರೀತಿಯ ಹೇಳಿಕೆಗಳನ್ನು ಎತ್ತಲಾರಂಭಿಸಿದರು. ಇದು ಚುನಾವಣೆಗಳನ್ನು ಧ್ರುವೀಕರಿಸಿತು. ಪರಿಣಾಮವಾಗಿ ನಾವು ಸೋಲಬೇಕಾಯ್ತು. ಅದೇ ವರ್ಷ ಗುಜರಾತ್ ವಿಧಾನಸಭಾ ಚುನಾವಣೆಯ ನಂತರ, ನಿರುದ್ಯೋಗ ಮತ್ತು ಆರ್ಥಿಕ ಹಿಂಜರಿತದ ವಿಷಯವು ಸಾರ್ವಜನಿಕ ರಂಗದಲ್ಲಿ ಪ್ರಾಬಲ್ಯ ಹೊಂದಿದ್ದರಿಂದ ನಾವು ಉತ್ತಮ ಹೆಜ್ಜೆಯಲ್ಲಿದ್ದೆವು. ಆ ನಂತರ ದುರದೃಷ್ಟಕರವೆಂಬಂತೆ 2019 ಪುಲ್ವಾಮಾ ಭಯೋತ್ಪಾದಕ ದಾಳಿ ನಡೆಯಿತು. ಗಡಿಯುದ್ದಕ್ಕೂ ಭಯೋತ್ಪಾದಕ ಅಡಗುತಾಣಗಳ ಮೇಲೆ ಭಾರತೀಯ ವಾಯುಸೇನೆ ನಡೆಸಿದ ಬಾಲಕೋಟ್ ದಾಳಿಯ ಬಗ್ಗೆ ಪ್ರಧಾನಿ ಹಾಗೂ ಮಾಧ್ಯಮಗಳು ಕೊಂಡಾಡಿದವು. ದುಃಖಕರ ವಿಷಯವೆಂದರೆ, ಆ ಸಮಯದಲ್ಲಿ ಕಾಂಗ್ರೆಸ್ಅನ್ನು ಪಾಕಿಸ್ತಾನ ಪರ ಎಂದು ಚಿತ್ರಿಸಲಾಯ್ತು. ಇದು ದುರದೃಷ್ಟಕರ ಸಂಗತಿ. ಸಾಂಪ್ರದಾಯಿಕ ಭಾರತೀಯ ನೀತಿಯು, ಎಲ್ಲಾ ಧರ್ಮಗಳ ಸಮಾನತೆಯಾಗಿದೆ. ಆದರೆ ರಾಜಕೀಯವನ್ನು ಕೋಮುವಾದಿ ರೇಖೆಗಳಲ್ಲಿ ವಿಭಜಿಸುವಲ್ಲಿ ಬಿಜೆಪಿ ಯಶಸ್ವಿಯಾಯಿತು. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ನಾವು ಸೋಲುವುದಕ್ಕೆ ಇದೇ ಕಾರಣವಾಗಿದೆ.
ಪ್ರಶ್ನೆ: ಕಳೆದ ದಶಕಗಳಲ್ಲಿ ಕಾಂಗ್ರೆಸ್ ಅಧ್ಯಕ್ಷರ ಕಾರ್ಯವೈಖರಿಯು ಬದಲಾಗಿದೆಯೇ?
ಉತ್ತರ: ಕಾಂಗ್ರೆಸ್ ಪಕ್ಷದಲ್ಲಿನ ಕೆಲಸ ಕಾರ್ಯದ ನೀತಿಗಳು ಇಂದಿರಾ ಗಾಂಧಿಯವರ ಕಾಲದಿಂದಲೂ ಅದೇ ರೀತಿಯಲ್ಲಿ ಉಳಿದಿವೆ. ರಾಜೀವ್ ಗಾಂಧಿ, ಪಿ.ವಿ.ನರಸಿಂಹ ರಾವ್, ಸೀತಾರಾಮ್ ಕೇಸ್ರಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಅಧ್ಯಕ್ಷ ಸ್ಥಾನದ ಮೂಲಕ ಇದು ಬದಲಾಗಿಲ್ಲ. ರಾಹುಲ್ ಕಳೆದ 12 ವರ್ಷಗಳಿಂದ ಸೋನಿಯಾ ಅವರ ಮಾರ್ಗದರ್ಶನದಲ್ಲಿ ವಿವಿಧ ಜವಾಬ್ದಾರಿಯಲ್ಲಿ ಕೆಲಸ ಮಾಡುತ್ತಿದ್ದರು. ಇಂದು ನಮ್ಮ ಕಾರ್ಯ ಶೈಲಿ ಮತ್ತು ಆಂತರಿಕ ಕಾರ್ಯವಿಧಾನಗಳಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಕಳೆದ ವರ್ಷಗಳಲ್ಲಿ ಬದಲಾಗಿರುವುದು ದೇಶದ ರಾಜಕೀಯ ವಾತಾವರಣ. ಇದು ಕಲುಷಿತಗೊಂಡಿದೆ ಮತ್ತು ಅದು ಕಾಂಗ್ರೆಸ್ಗೆ ಸೂಕ್ತವಾಗಿಲ್ಲ.
ಪ್ರಶ್ನೆ: ಭವಿಷ್ಯದಲ್ಲಿ ವಿಷಯಗಳು ಬದಲಾಗುತ್ತವೆ ಎಂದು ನೀವು ಭಾವಿಸುತ್ತೀರಾ?
ಉತ್ತರ: ಜನರು ತಮ್ಮ ರೊಟ್ಟಿ ಮತ್ತು ಬೆಣ್ಣೆ ಸಮಸ್ಯೆಗಳು, ಉದ್ಯೋಗಗಳ ಕೊರತೆ ಮತ್ತು ಕೆಳ ಜಾರುತ್ತಿರುವ ಆರ್ಥಿಕತೆಯ ಬಗ್ಗೆ ಯೋಚಿಸಲು ಪ್ರಾರಂಭಿಸಿದಾಗ ವಿಷಯಗಳು ಬದಲಾಗುತ್ತವೆ. ಆ ಬಳಿಕ ಅವರಾಗಿಯೇ ಕಾಂಗ್ರೆಸ್ ಮಾಡಿದ ಕಾರ್ಯವನ್ನು ಶ್ಲಾಘಿಸಲು ಪ್ರಾರಂಭಿಸುತ್ತಾರೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಪ್ರಧಾನಿ ಮೋದಿ ಜಂಟಿಯಾಗಿ ದೇಶದಲ್ಲಿ ವಿಭಜಕ ವಾತಾವರಣವನ್ನು ಸೃಷ್ಟಿಸಿದ್ದಾರೆ. ಅದಕ್ಕೆ ಕಾಂಗ್ರೆಸ್ ಬಳಿ ಉತ್ತರವಿದೆ. ಆದರೆ ಕಾಂಗ್ರೆಸ್ ತನ್ನದೇ ಆದ ಪಿಚ್ನಲ್ಲಿ ಆಡಲಿದೆ. ಅಲ್ಲಿ ಅಲ್ಲಿ ಯಾರೂ ಅದನ್ನು ಸೋಲಿಸಲು ಸಾಧ್ಯವಿಲ್ಲ.