ETV Bharat / bharat

ನೋ ಮಾಸ್ಕ್​, ನೋ ಪೆಟ್ರೋಲ್​ & ಡೀಸೆಲ್​​​​... ಇದು ಈ ರಾಜ್ಯದ ನಿರ್ಧಾರ! - ಕೋವಿಡ್​-19

ಏಪ್ರಿಲ್​ 30ರವರೆಗೆ ಒಡಿಶಾದಲ್ಲಿ ಲಾಕ್​ಡೌನ್​ ವಿಸ್ತರಣೆ ಮಾಡಿ ಆದೇಶ ಹೊರಡಿಸಿದ್ದು, ಈ ಬೆನ್ನಲ್ಲೇ ಅಲ್ಲಿನ ಪೆಟ್ರೋಲಿಯಂ ಅಸೋಷಿಯೇಷನ್​ ಮಹತ್ವದ ನಿರ್ಧಾರ ಕೈಗೊಂಡಿದೆ.

No mask, no fuel rule in Odisha
No mask, no fuel rule in Odisha
author img

By

Published : Apr 10, 2020, 8:06 PM IST

ಭುವನೇಶ್ವರ: ಒಡಿಶಾದಲ್ಲಿ ಈಗಾಗಲೇ ಏಪ್ರಿಲ್​ 30ರವರೆಗೆ ಲಾಕ್​ಡೌನ್​ ವಿಸ್ತರಿಸಿ ಘೋಷಣೆ ಮಾಡಲಾಗಿದ್ದು, ಇದರ ಮಧ್ಯೆ ಅಲ್ಲಿನ ಪೆಟ್ರೋಲ್​ ಪಂಪ್​​​​​​​ ಅಸೋಷಿಯೇಷನ್​ ಮಹತ್ವದ ನಿರ್ಧಾರ ಕೈಗೊಂಡಿವೆ.

ಒಡಿಶಾದಲ್ಲಿನ ಪೆಟ್ರೋಲ್​ ಪಂಪ್​ಗಳಿಗೆ ಮಾಸ್ಕ್​ ಹಾಕಿಕೊಳ್ಳದೇ ಬರುವ ಸವಾರರಿಗೆ ಪೆಟ್ರೋಲ್​ & ಡಿಸೇಲ್​ ನೀಡದಿರಲು ನಿರ್ಧರಿಸಿವೆ. ಮನೆಯಿಂದ ಹೊರಹೋಗಬೇಕಾದರೆ ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ಮಾಸ್ಕ್ ಹಾಕಿಕೊಳ್ಳದೇ ಪೆಟ್ರೋಲ್​ - ಡೀಸೆಲ್​​​​​​ ಹಾಕಿಕೊಳ್ಳಲು ಹೋದರೆ ಅವರಿಗೆ ಹಾಕದಿರಲು ನಿರ್ಧರಿಸಿದೆ. ರಾಜ್ಯದಲ್ಲಿನ 1,600 ಪೆಟ್ರೋಲ್​ ಪಂಪ್​ಗಳು ಈ ನಿರ್ಧಾರ ಮಾಡಿವೆ ಎಂದು ಅಸೋಸಿಯೇಷನ್​ ತಿಳಿಸಿದೆ.

ಸಾವಿರಾರು ಸಿಬ್ಬಂದಿ ಪೆಟ್ರೋಲ್​ ಪಂಪ್​ಗಳಲ್ಲಿ ತಮ್ಮ ಜೀವನದ ಹಂಗು ತೊರೆದು ಕೆಲಸ ಮಾಡ್ತಿದ್ದು, ವಿವಿಧ ನಗರಗಳಿಂದ ಇಲ್ಲಿಗೆ ಬರುವ ಜನರು ಮಾಸ್ಕ್​ ಹಾಕಿಕೊಳ್ಳದೇ ಇದ್ದರೆ ತೊಂದರೆಯಾಗುವ ಸಾಧ್ಯತೆ ದಟ್ಟವಾಗಿರುತ್ತದೆ.

ಪೆಟ್ರೋಲ್ ಹಾಕಿಸಿಕೊಳ್ಳಲು ಬರುವ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಲಾಗಿದ್ದು, ಒಂದಾದ ಬಳಿಕ ಒಂದು ವಾಹನ ಪೆಟ್ರೋಲ್​- ಡಿಸೇಲ್​ ತುಂಬಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಅಸೋಷಿಯೇಷನ್​​ ಕಾರ್ಯದರ್ಶಿ ಸಂಜಯ್​ ಲಾಥೂರ್​ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.