ETV Bharat / bharat

ದೆಹಲಿಯಲ್ಲಿ 'ಉತ್ಪಾದನಾ ಉದ್ಯಮ'ಕ್ಕಿಲ್ಲ ಅನುಮತಿ: ಕೇಜ್ರಿವಾಲ್​ ಐತಿಹಾಸಿಕ ನಿರ್ಧಾರ - ದೆಹಲಿಯಲ್ಲಿ ಕೈಗಾರಿಕೆ ವಲಯ ಇತ್ತೀಚಿನ ಸುದ್ದಿ

ದೆಹಲಿಯಲ್ಲಿ ಕೈಗಾರಿಕೆ ವಲಯಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಇನ್ಮುಂದೆ ಉತ್ಪಾದನಾ ವಲಯಕ್ಕೆ ಸಂಬಂಧಿಸಿದಂತೆ ಕೈಗಾರಿಕೆಗಳು ದೆಹಲಿಯಲ್ಲಿ ಓಪನ್​ ಆಗುವುದಿಲ್ಲ.

Kejriwal
Kejriwal
author img

By

Published : Nov 2, 2020, 5:54 PM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಿನದಿಂದ ದಿನಕ್ಕೆ ವಾಯುಮಟ್ಟ ಕುಸಿತ ಕಾಣುತ್ತಿದ್ದು, ಹೀಗಾಗಿ ಅಲ್ಲಿನ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಇದೀಗ ಮಹತ್ವದ ನಿರ್ಧಾರಕ್ಕೆ ಕೈಹಾಕಿದ್ದಾರೆ.

ದೆಹಲಿಯಲ್ಲಿ ಕೈಗಾರಿಕಾ ಪ್ರದೇಶಗಳಲ್ಲಿ ಇನ್ಮುಂದೆ ಯಾವುದೇ ಉತ್ಪಾದನಾ ಉದ್ಯಮ ಆರಂಭ ಮಾಡಲು ಅವಕಾಶ ಇಲ್ಲ. ಜತೆಗೆ ಅದಕ್ಕೆ ಅನುಮತಿ ನೀಡುವುದಿಲ್ಲ ಎಂದು ಅರವಿಂದ್​ ಕೇಜ್ರಿವಾಲ್​ ಸ್ಪಷ್ಟನೆ ನೀಡಿದ್ದಾರೆ.

ದೆಹಲಿಯಲ್ಲಿ ಇನ್ಮುಂದೆ ಹೊಸ ಕೈಗಾರಿಕಾ ನೀತಿ ಜಾರಿ: ಕೇಜ್ರಿವಾಲ್​

ಇದಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಅನುಮತಿ ನೀಡಿದೆ ಎಂದು ಕೇಜ್ರಿವಾಲ್ ತಿಳಿಸಿದ್ದು, ಹೊಸ ಮಾರ್ಗಸೂಚಿ ಆದಷ್ಟು ಬೇಗ ಹೊರಡಿಸುವುದಾಗಿ ಹೇಳಿಕೊಂಡಿದ್ದಾರೆ. ಹೊಸ ನೀತಿ ಪ್ರಕಾರ ದೆಹಲಿಯಲ್ಲಿ ಸೇವೆ, ಹೈ-ಟೆಕ್​ ಇಂಡಸ್ಟ್ರಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಇದೊಂದು ಐತಿಹಾಸಿಕ ಹೆಜ್ಜೆಯಾಗಿದೆ ಎಂದಿರುವ ಕೇಜ್ರಿವಾಲ್​, ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ದೆಹಲಿ ಆರ್ಥಿಕತೆ ಮುಖ್ಯವಾಗಿ ಸೇವಾ ಉದ್ಯಮ ಆಧರಿಸಿದ್ದು, ಹೈಟೆಕ್​, ಸೇವಾ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಿ, ಅಗ್ಗದ ದರದಲ್ಲಿ ಸ್ಥಳ ನೀಡಲಾಗುವುದು ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.