ETV Bharat / bharat

ಕೊರೊನಾ ಗಾಳಿಯ ಮೂಲಕ ಹರಡುತ್ತಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ: ಐಸಿಎಂಆರ್ ವಿಜ್ಞಾನಿ

ಕೊರೊನಾ ಗಾಳಿಯ ಮೂಲಕ ಹರಡುತ್ತಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಒಂದು ಸಂಶಯವಿರಬಹುದು, ಆದರೆ ಎಲ್ಲವೂ ಕ್ಲಿನಿಕಲ್ ಅಧ್ಯಯನಗಳು, ಸಂಶೋಧನೆ ಮತ್ತು ಪುರಾವೆಗಳನ್ನು ಅವಲಂಬಿಸಿರುತ್ತದೆ ಎಂದು ಹಿರಿಯ ಐಸಿಎಂಆರ್ ವಿಜ್ಞಾನಿ ಡಾ. ಲೋಕೇಶ್ ಶರ್ಮಾ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಕೊರೊನಾ
ಕೊರೊನಾ
author img

By

Published : Jul 6, 2020, 8:38 PM IST

ನವದೆಹಲಿ: ಕೊರೊನಾ ವೈರಸ್ ಗಾಳಿಯ ಮೂಲಕ ಹರಡುತ್ತಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸೋಮವಾರ ಪುನರುಚ್ಚರಿಸಿತು.

ಕೊರೊನಾ ಗಾಳಿಯ ಮೂಲಕ ಹರಡಬಲ್ಲದು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಒಂದು ಸಂಶಯವಿರಬಹುದು, ಆದರೆ ಎಲ್ಲವೂ ಕ್ಲಿನಿಕಲ್ ಅಧ್ಯಯನಗಳು, ಸಂಶೋಧನೆ ಮತ್ತು ಪುರಾವೆಗಳನ್ನು ಅವಲಂಬಿಸಿರುತ್ತದೆ ಎಂದು ಹಿರಿಯ ಐಸಿಎಂಆರ್ ವಿಜ್ಞಾನಿ ಡಾ. ಲೋಕೇಶ್ ಶರ್ಮಾ ಈಟಿವಿ ಭಾರತಕ್ಕೆ ತಿಳಿಸಿದರು.

32 ದೇಶಗಳ 239 ವಿಜ್ಞಾನಿಗಳು ಕೋವಿಡ್​ ವಾಯುಗಾಮಿ ಎಂದು ಹೇಳಿವೆ. ಕೊರೊನಾ ಗಾಳಿಯಲ್ಲಿನ ಸಣ್ಣ ಕಣಗಳನ್ನು ಹೊಂದಿರುತ್ತದೆ ಮತ್ತು ಜನರಿಗೆ ಸೋಂಕು ತಗುಲುತ್ತದೆ ಎಂದು ಹೇಳಿ ವಿಜ್ಞಾನಿಗಳು ವಿಶ್ವ ಆರೋಗ್ಯ ಸಂಸ್ಥೆಗೆ (ಡಬ್ಲ್ಯುಎಚ್‌ಒ) ಶಿಫಾರಸುಗಳನ್ನು ಪರಿಷ್ಕರಿಸಲು ಕೇಳಿಕೊಂಡಿದ್ದಾರೆ.

ಕೊರೊನಾ ವೈರಸ್ ಮುಖ್ಯವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಮೂಗು ಅಥವಾ ಬಾಯಿಯಿಂದ ಬೀಳುವ ಸಣ್ಣ ಹನಿಗಳ ಮೂಲಕ ಹರಡುತ್ತದೆ. ಸೋಂಕಿತ ವ್ಯಕ್ತಿಯು ಕೆಮ್ಮಿದಾಗ, ಸೀನುವಾಗ ಅಥವಾ ಮಾತನಾಡುವಾಗ ವೈರಸ್​​ ಹೊರ ಬರುತ್ತದೆ ಎಂದು WHO ಮತ್ತು ರೋಗ ನಿಯಂತ್ರಣ ತಡೆಗಟ್ಟುವಿಕೆ ಕೇಂದ್ರಗಳು (ಸಿಡಿಸಿ) ಹೇಳಿವೆ.

ಜೂನ್ 29ರಂದು ಪ್ರಕಟವಾದ ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಮಧ್ಯಂತರ ಮಾರ್ಗದರ್ಶನದಲ್ಲಿ, ಆರೋಗ್ಯ ಕಾರ್ಯಕರ್ತರು ಏರೋಸಾಲ್‌ಗಳನ್ನು ಉತ್ಪಾದಿಸುವ ವೈದ್ಯಕೀಯ ವಿಧಾನಗಳನ್ನು ನಿರ್ವಹಿಸಿದಾಗ ವಾಯುಗಾಮಿ ಹರಡುವಿಕೆ ಸಂಭವಿಸುತ್ತದೆ ಎಂದು ವಾದಿಸಿದರು. ಅವು ಅತ್ಯಂತ ಸಣ್ಣ ಉಸಿರಾಟದ ಹನಿಗಳಾಗಿವೆ ಎಂದರು.

ಸಣ್ಣ ಕಣಗಳಿಂದ ಜನರಿಗೆ ಸೋಂಕು ತಗುಲಿದೆ ಎಂದು ವಿಜ್ಞಾನಿಗಳು ಈಗ ಹೇಳಿಕೊಳ್ಳುತ್ತಾರೆ. ಏರೋಸಾಲ್‌ಗಳು ಗಾಳಿಯಲ್ಲಿ ದೀರ್ಘಕಾಲದವರೆಗೆ ಸ್ಥಗಿತಗೊಳ್ಳಬಹುದು ಎಂದು ವಿಜ್ಞಾನಿಗಳು ಪತ್ರವೊಂದರಲ್ಲಿ ತಿಳಿಸಿದ್ದಾರೆ. ವಿಜ್ಞಾನಿಗಳು ತಮ್ಮ ಸಂಶೋಧನೆಗಳನ್ನು ಮುಂದಿನ ದಿನಗಳಲ್ಲಿ ಆರೋಗ್ಯ ಪತ್ರಿಕೆಯಲ್ಲಿ ಪ್ರಕಟಿಸಲಿದ್ದಾರೆ ಎಂದು ಹೇಳಿದರು.

ಕೊರೊನಾ ವೈರಸ್ ಆಗಾಗ್ಗೆ ತನ್ನ ಸ್ವರೂಪವನ್ನು ಬದಲಾಯಿಸುತ್ತಿದೆ. ಇದು ಹಲವಾರು ಪಾತ್ರಗಳನ್ನು ಹೊಂದಿರುವ ಹೊಸ ಸಾಂಕ್ರಾಮಿಕ ಕಾಯಿಲೆಯಾಗಿದೆ. ಆದ್ದರಿಂದ ಸರಿಯಾದ ಕ್ಲಿನಿಕಲ್ ಅಧ್ಯಯನಗಳು ಮತ್ತು ಪರೀಕ್ಷೆಗಳಿಂದ ಅದು ಗಾಳಿಯ ಮೂಲಕ ಹರಡುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡು ಹಿಡಿಯಬಹುದು ಎಂದು ಶರ್ಮಾ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.